
ಗಾಯಕ ಕೆಕೆ (ಸಂಗ್ರಹ ಚಿತ್ರ)
Excerpt: Krishnakumar Kunnath Death: ಕೆಕೆ ಅಂತಲೇ ಜನಪ್ರಿಯರಾಗಿದ್ದ ಬಾಲಿವುಡ್ನ ಹೆಸರಾಂತ ಗಾಯಕ ಕೃಷ್ಣಕುಮಾರ್ ಕುನ್ನತ್ ಮೇ 31ರಂದು ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (53 ವರ್ಷ ವಯಸ್ಸು) ಮೇ 31ನೇ ತಾರೀಕಿನಂದು, ಮಂಗಳವಾರ ಸಂಗೀತ ಕಾರ್ಯಕ್ರಮ ನೀಡುವಾಗಲೇ ಕೋಲ್ಕತ್ತಾದಲ್ಲಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮ ನೀಡುತ್ತಿದ್ದ ವೇಳೆಯೇ ಕುಸಿದು ಬಿದ್ದ ಅವರು, ಮೃತಪಟ್ಟಿದ್ದಾರೆ. ಸಚಿವರಾದ ಅನುಪ್ ಬಿಸ್ವಾಸ್ ಮಾತನಾಡಿದ್ದು, ಗಾಯಕ ಅನುಪಮ್ ರಾಯ್ ನನಗೆ ಕರೆ ಮಾಡಿದ್ದರು. ಆಸ್ಪತ್ರೆಯಿಂದ ಕೆಟ್ಟ ಸುದ್ದಿ ಕೇಳುತ್ತಿದ್ದೇನೆ ಎಂದರು. ನಾನು ಆಸ್ಪತ್ರೆಯವರನ್ನೇ ಸಂಪರ್ಕಿಸಿದಾಗ, ಕರೆತರುವಾಗಲೇ ಕೆಕೆ ಮೃತಪಟ್ಟಿದ್ದರು ಎಂದು ತಿಳಿಸಿದ್ದರು ಎಂದಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಕಾಯಲಾಗುತ್ತಿದೆ.