Singer Mangli: ‘ಏಕ್​ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪುನೀತ್​ ನೆನೆದು ಕಣ್ಣೀರು ಹಾಕಿದ ಗಾಯಕಿ ಮಂಗ್ಲಿ | Singer Mangli cried after She remember Puneeth Rajkumar In Ek Love Ya Pressmeet


ರಕ್ಷಿತಾ ಪ್ರೇಮ್​ ಸಹೋದರ ರಾಣ ಅವರು ‘ಏಕ್​ ಲವ್​ ಯಾ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆದ್ದರಿಂದ ಹೆಚ್ಚಿನ ನಿರೀಕ್ಷೆ ಇದೆ. ಪ್ರೇಮ್​ ಅವರು ‘ಏಕ್​ ಲವ್​ ಯಾ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಲಾಕ್​ಡೌನ್​ ಕಾರಣದಿಂದ ಆ ಸಿನಿಮಾದ ಕೆಲಸಗಳು ಕೊಂಚ ವಿಳಂಬ ಆಗಿದ್ದವು. ಈಗ ಮತ್ತೆ ಸಿನಿಮಾ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ರಾಣ ನಟಿಸುತ್ತಿರುವ ಈ ಚಿತ್ರಕ್ಕೆ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್​ ನಾಯಕಿಯರು. ಇಂದು (ನವೆಂಬರ್ 12) ಈ ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಈ ಕಾರ್ಯಕ್ರಮಕ್ಕೆ ಟಾಲಿವುಡ್​ ಗಾಯಕಿ ಮಂಗ್ಲಿ ಅವರು ಆಗಮಿಸಿದ್ದರು. ಪುನೀತ್​ ಅವರನ್ನು ನೆನೆದು ಕಣ್ಣೀರು ಹಾಕಿದರು.

ಪುನೀತ್​ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಪುನೀತ್​ ಅವರನ್ನು ಕಂಡರೆ ಮಂಗ್ಲಿಗೆ ಅಚ್ಚುಮೆಚ್ಚಾಗಿತ್ತು. ಆದರೆ, ಅವರು ನಿಧನ ಹೊಂದಿರುವ ಸುದ್ದಿ ಮಂಗ್ಲಿಗೆ ಬೇಸರ ತರಿಸಿದೆ. ‘ಏಕ್​ ಲವ್​ ಯಾ’ ಕಾರ್ಯಕ್ರಮದಲ್ಲಿ ಅವರು ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: Singer Mangli: ತೀವ್ರ ವಿರೋಧಕ್ಕೆ ಹೆದರಿದ ರಾಬರ್ಟ್ ಗಾಯಕಿ ಮಂಗ್ಲಿ; ವಿವಾದಾತ್ಮಕ ಸಾಂಗ್ ಡಿಲೀಟ್

TV9 Kannada


Leave a Reply

Your email address will not be published. Required fields are marked *