SL vs PAK T20 Live Streaming: ಏಷ್ಯಾಕಪ್ ಚಾಂಪಿಯನ್ ಪಟ್ಟ ಯಾರಿಗೆ? ಪಂದ್ಯ ಆರಂಭ ಯಾವಾಗ? | Sri Lanka vs Pakistan T20 Live Streaming Know when where you can watch the final match


Sri Lanka vs Pakistan T20 Live Streaming: ಭಾನುವಾರ ನಡೆಯಲಿರುವ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.

ಭಾನುವಾರ ನಡೆಯಲಿರುವ ಏಷ್ಯಾಕಪ್‌ನಲ್ಲಿ (Asia Cup 2022) ಪಾಕಿಸ್ತಾನ ಮತ್ತು ಶ್ರೀಲಂಕಾ (Pakistan and Sri Lanka) ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ಸೂಪರ್ 4 ರಲ್ಲಿ, ಎರಡೂ ತಂಡಗಳು ಮೊದಲೆರೆಡು ಸ್ಥಾನ ಗಿಟ್ಟಿಸಿಕೊಂಡು ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಶ್ರೀಲಂಕಾ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಮಾತ್ರ ಶ್ರೀಲಂಕಾ ಎದುರು ಸೋಲನ್ನು ಎದುರಿಸಬೇಕಾಯಿತು. ಆದರೆ ಇವೆರಡು ತಂಡಗಳಿಂದ ಭಾರತ ಸೋಲನ್ನು ಎದುರಿಸಬೇಕಾಯಿತು. ಟಿ20 ವಿಶ್ವಕಪ್‌ಗೂ ಮುನ್ನ ಈ ಗೆಲುವು ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಪಾಕ್ ಮಣಿಸಿದ ಲಂಕಾ

ಫೈನಲ್‌ಗೂ ಮುನ್ನ ಸೂಪರ್ 4ರ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಶ್ರೀಲಂಕಾಗೆ ಗೆಲುವು ಒಲಿದಿತ್ತು. ಅತ್ಯುತ್ತಮ ಬೌಲಿಂಗ್ ಬಲದಿಂದ ಶ್ರೀಲಂಕಾ ಪಾಕಿಸ್ತಾನವನ್ನು 121 ರನ್‌ಗಳಿಗೆ ಕಟ್ಟಿಹಾಕಿತು. ಪಾಕ್ ಪರ ನಾಯಕ ಬಾಬರ್ ಅಜಮ್ 30 ರನ್ ಗಳಿಸಿದರು. ಶ್ರೀಲಂಕಾ ಪರ ವನಿಂದು ಹಸರಂಗ ಮೂರು ವಿಕೆಟ್ ಪಡೆದರೆ, ಮಹಿಷ್ ಟೀಕ್ಷಣ ಮತ್ತು ಪ್ರಮೋದ್ ಮದುಸನ್ ತಲಾ ಎರಡು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಶ್ರೀಲಂಕಾದ ಆರಂಭ ಅತ್ಯಂತ ಕಳಪೆಯಾಗಿತ್ತು. ಆದರೆ ಶ್ರೀಲಂಕಾ ಅಂತಿಮವಾಗಿ ಮೂರು ಓವರ್‌ ಬಾಕಿ ಇರುವಂತೆಯೇ 5 ವಿಕೆಟ್​ಗಳಿಂದ ಈ ಗುರಿ ಸಾಧಿಸಿತು. ಶ್ರೀಲಂಕಾ ಪರ ಪಾತುಮ್ ನಿಸಂಕಾ 55 ರನ್ ಗಳಿಸಿದರು.

ಫೈನಲ್ ಪಂದ್ಯದ ಬಗ್ಗೆ ಒಂದಿಷ್ಟು ವಿವರ

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್-2022 ಫೈನಲ್ ಪಂದ್ಯ ಯಾವಾಗ ನಡೆಯಲಿದೆ?

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವು ಭಾನುವಾರ, ಸೆಪ್ಟೆಂಬರ್ 11 ರಂದು ನಡೆಯಲಿದೆ.

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ದುಬೈನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರಾತ್ರಿ 7:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ 7 ಗಂಟೆಗೆ ನಡೆಯಲಿದೆ.

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ?

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನಲ್‌ಗಳಲ್ಲಿರಲಿದೆ.

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ಪ್ರಸಾರವಾಗಲಿದೆ?

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಇರುತ್ತದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.