Small business Idea Post Office Franchise Scheme Invest just 5000 earn more check eligibility income other information in Kannada | Small Business Idea: ಕೇವಲ 5 ಸಾವಿರ ಹೂಡಿಕೆ ಮಾಡಿ ಭರ್ಜರಿ ಆದಾಯ ಗಳಿಸಿ; ಅಂಚೆ ಇಲಾಖೆ ನೀಡಿದೆ ಅವಕಾಶ


ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ. ಅಂಚೆ ಇಲಾಖೆಯ ಫ್ರಾಂಚೈಸ್​ ಸ್ಕೀಮ್​ನ ಸಂಪೂರ್ಣ ವಿವರ ಇಲ್ಲಿದೆ.

Small Business Idea: ಕೇವಲ 5 ಸಾವಿರ ಹೂಡಿಕೆ ಮಾಡಿ ಭರ್ಜರಿ ಆದಾಯ ಗಳಿಸಿ; ಅಂಚೆ ಇಲಾಖೆ ನೀಡಿದೆ ಅವಕಾಶ

ಸಾಂದರ್ಭಿಕ ಚಿತ್ರ

ಸ್ವ ಉದ್ಯೋಗ (Self Employment) ಮಾಡಬೇಕೆಂಬುದು ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಆದರೆ ದೊಡ್ಡ ಮೊತ್ತದ ಹೂಡಿಕೆ, ಉದ್ಯೋಗಿಗಳ ನಿರ್ವಹಣೆ, ಖರ್ಚು ಇತ್ಯಾದಿಗಳು ಸಾಮಾನ್ಯರಿಂದ ಕಷ್ಟಸಾಧ್ಯ. ಹೀಗಾಗಿ ಮನದೊಳಗೆ ಆಸೆ ಇದ್ದರೂ ಅನೇಕರೂ ಉದ್ಯಮ (Business) ಆರಂಭಿಸಲು ಹಿಂದೇಟು ಹಾಕುತ್ತಾರೆ. ಆದರೆ, ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ (Small Business) ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ. ಅಂಚೆ ಇಲಾಖೆಯ (Indian Post) ಫ್ರಾಂಚೈಸ್​ ಸ್ಕೀಮ್​ ಮೂಲಕ ಕಡಿಮೆ ಹೂಡಿಕೆಯೊಂದಿಗೆ ಉತ್ತಮ ಆದಾಯ, ಲಾಭ ಗಳಿಸಬಹುದಾಗಿದೆ. ಈ ಯೋಜನೆಗೆ ಕನಿಷ್ಠ 5,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಭಾರತೀಯ ಅಂಚೆ ಇಲಾಖೆಯು ಕೇವಲ ಅಂಚೆ ಸೇವೆ ಮಾತ್ರವಲ್ಲದೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಸಣ್ಣ ಉಳಿತಾಯ ಖಾತೆಗಳು, ಆರ್​ಡಿ, ಆಧಾರ್ ಅಪ್​ಡೇಟ್ ಇತ್ಯಾದಿ ಸೇವೆಗಳು ಅಂಚೆ ಕಚೇರಿಗಳಲ್ಲಿ ದೊರೆಯುತ್ತವೆ. ಆದರೆ ಸದ್ಯ ದೇಶದಲ್ಲಿರುವ ಅಂಚೆ ಕಚೇರಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ಕಾರ ಫ್ರಾಂಚೈಸ್​ಗಳ ಮೂಲಕ ಅಂಚೆ ಕಚೇರಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರೂ ಫ್ರಾಂಚೈಸ್ ತೆರೆಯಬಹುದಾಗಿದೆ. ಆ ಮೂಲಕ ಆದಾಯ ಗಳಿಸಬಹುದಾಗಿದೆ. ತಾವಿರು ಗ್ರಾಮದಲ್ಲೇ, ಮನೆಯ ಸಮೀಪವೇ ಫ್ರಾಂಚೈಸ್ ತೆರೆಯುವ ಮೂಲಕ ಊರಿನಲ್ಲೇ ಇದ್ದುಕೊಂಡು ಆದಾಯ ಗಳಿಸಬಹುದಾಗಿದೆ.

ಏನಿದು ಅಂಚೆ ಕಚೇರಿ ಫ್ರಾಂಚೈಸ್ ಯೋಜನೆ?

ಅಂಚೆ ಇಲಾಖೆ ಎರಡು ರೀತಿಯ ಪ್ರಾಂಚೈಸ್​ಗೆ​​ ಅವಕಾಶ ನೀಡುತ್ತದೆ. ಅವುಗಳೆಂದರೆ, ಫ್ರಾಂಚೈಸ್ಡ್ ಔಟ್​ಲೆಟ್ ಮತ್ತು ಫ್ರಾಂಚೈಸೀ ಆಫ್​ ಪೋಸ್ಟಲ್ ಏಜೆಂಟ್ಸ್. ಈ ಪೈಕಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಔಟ್​ಲೆಟ್ ಫ್ರಾಂಚೈಸ್​​ ಅಡಿಯಲ್ಲಿ ಅಂಚೆ ಕಚೇರಿ ಇಲ್ಲದ ಕಡೆಗಳಲ್ಲಿ ಕಚೇರಿ ತೆರೆಯಬಹುದು. ಪೋಸ್ಟಲ್​ ಏಜೆಂಟ್​ಗಳಾದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸ್ಟೇಷನರಿ ಮತ್ತು ಅಂಚೆ ಸ್ಟಾಂಪ್​ಗಳ ವಿತರಣೆ ಮಾಡಬೇಕಾಗುತ್ತದೆ.

ತಾಜಾ ಸುದ್ದಿ

ಅಂಚೆ ಕಚೇರಿ ಫ್ರಾಂಚೈಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ?

ಇಂಡಿಯಾ ಪೋಸ್ಟ್ ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಅರ್ಜಿಯನ್ನು ಡೌನ್​ಲೋಡ್ ಮಾಡಿ ಭರ್ತಿ ಮಾಡಿ ಸಲ್ಲಿಸಬೇಕು. ಷರತ್ತುಗಳು ಮತ್ತು ನಿಬಂಧನೆಗಳನ್ನು ಸರಿಯಾಗಿ ಗಮನಿಸಿಕೊಳ್ಳಿ. ಈ ಯೋಜನೆಯಡಿ ಫ್ರಾಂಚೈಸ್​ ತೆರೆಯಲು ಹೆಚ್ಚಿನ ಅರ್ಹತೆಗಳೇನೂ ಬೇಕಾಗಿಲ್ಲ. ಇಲಾಖೆ ಹೇಳಿರುವ ಷರತ್ತುಗಳು ಮತ್ತು ನಿಬಂಧನೆಗಳನ್ನು ಪೂರೈಸಿದರೆ ಸಾಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಫ್ರಾಂಚೈಸ್​ಗೆ ಅರ್ಜಿ ಸಲ್ಲಿಸುವವರ ಕುಟುಂಬದವರು ಯಾರೂ ಅಂಚೆ ಕಚೇರಿಯ ಉದ್ಯೋಗಿ ಆಗಿರಬಾರದು.

TV9 Kannada


Leave a Reply

Your email address will not be published. Required fields are marked *