Smriti Irani: ಮಣಿಪುರದ ಮಹಿಳೆಯರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿ ಮನ ಗೆದ್ದ ಸಚಿವೆ ಸ್ಮೃತಿ ಇರಾನಿ; ವಿಡಿಯೋ ವೈರಲ್ | Smriti Irani Manipur Traditional dance with artists Video Viral during Manipur Assembly Elections Campaign


Smriti Irani: ಮಣಿಪುರದ ಮಹಿಳೆಯರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿ ಮನ ಗೆದ್ದ ಸಚಿವೆ ಸ್ಮೃತಿ ಇರಾನಿ; ವಿಡಿಯೋ ವೈರಲ್

ಮಣಿಪುರಿ ನೃತ್ಯ ಮಾಡಿದ ಸಚಿವೆ ಸ್ಮೃತಿ ಇರಾನಿ

ಇಂಫಾಲ: ಮಣಿಪುರದಲ್ಲಿ ವಿಧಾನಸಭಾ ಚುನಾವಣೆ (Manipur Elections) ಇರುವುದರಿಂದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ (Smriti Irani) ಮಣಿಪುರದ ಮಹಿಳೆಯರ ಜೊತೆ ಸೇರಿ ತಾವು ಕೂಡ ಅಲ್ಲಿನ ಸಾಂಪ್ರದಾಯಿಕ ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಮಣಿಪುರದ ಸಾಂಪ್ರದಾಯಿಕ ಉಡುಗೆಯಲ್ಲಿ ನೃತ್ಯ ಮಾಡಿದ ಸ್ಮೃತಿ ಇರಾನಿಯ ವಿಡಿಯೋ ಭಾರೀ ವೈರಲ್ (Video Viral) ಆಗಿದೆ. ಇಂಫಾಲ್ ಪೂರ್ವದ ವಾಂಗ್‌ಖೈ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಇರಾನಿ ಮಣಿಪುರದ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿದರು.

ಮಣಿಪುರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಇರಾನಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಪರ ಸ್ಮೃತಿ ಇರಾನಿ ಪ್ರಚಾರ ನಡೆಸಿದ್ದಾರೆ. ಗುರುವಾರ, ಮಣಿಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಪ್ರತಿಭಾವಂತ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನದ ಭರವಸೆ, ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಯನ್ನು 1,000 ರೂ.ಗೆ ಹೆಚ್ಚಿಸುವುದು ಮತ್ತು 100 ಕೋಟಿ ರೂ. ಆರಂಭಿಕ ನಿಧಿಯನ್ನು ಸ್ಥಾಪಿಸುವುದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ‘ರಾಣಿ ಗೈದಿಂಲಿಯು ನೂಪಿ ಮಹೈರೋಯ್ ಸಿಂಗಿ ಯೋಜನೆ’ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಹೆಣ್ಣುಮಕ್ಕಳಿಗೆ 25,000 ರೂ. ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ಮಣಿಪುರದಲ್ಲಿ ಎರಡು ಹಂತಗಳಲ್ಲಿ 60 ಶಾಸಕರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಫೆಬ್ರವರಿ 28ರಂದು ಮತ್ತು ಎರಡನೇ ಹಂತದ ಮತದಾನ ಮಾರ್ಚ್ 5ರಂದು ನಡೆಯಲಿದೆ. ಚುನಾವಣಾ ಫಲಿತಾಂಶವು ಮಾರ್ಚ್ 10ರಂದು ಪ್ರಕಟವಾಗಲಿದೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 28 ಸ್ಥಾನಗಳನ್ನು ಗೆದ್ದು 60 ಸದಸ್ಯ ಬಲದ ಮಣಿಪುರ ಮನೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿಯು ಮೂರು ಪ್ರಾದೇಶಿಕ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಬೆಂಬಲದೊಂದಿಗೆ ಮಣಿಪುರದಲ್ಲಿ ಸರ್ಕಾರವನ್ನು ರಚಿಸಿತು.

TV9 Kannada


Leave a Reply

Your email address will not be published. Required fields are marked *