Solar Eclipse 2021: ಡಿಸೆಂಬರ್ 4ರ ವರ್ಷದ ಕೊನೆ ಸೂರ್ಯ ಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿರುತ್ತದೆ? | Solar Eclipse 2021 December Impact On Zodiac Signs Explained

1/14

ಇದೇ ಡಿಸೆಂಬರ್ 4ನೇ ತಾರೀಕು ವೃಶ್ಚಿಕ ರಾಶಿಯಲ್ಲಿ ಸೂರ್ಯ ಗ್ರಹಣ ನಡೆಯಲಿದೆ. ಸೂರ್ಯ ಗ್ರಹಣ ಸಂಭವಿಸುವುದೇ ಅಮಾವಾಸ್ಯೆಯಂದು. ಈ ಗ್ರಹಣದ ಆಚರಣೆ ಅಂತ ಇಲ್ಲದಿದ್ದರೂ ಫಲ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇದು ಮಹಾ ಸೂರ್ಯಗ್ರಹಣ ಆಗಿದ್ದು, ಭಾರತದಲ್ಲಿ ಗೋಚರ ಆಗುತ್ತಿಲ್ಲ. ಇನ್ನು ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಯಾವ ಆಚರಣೆಯೂ ಇಲ್ಲ. ಹಾಗಿದ್ದಲ್ಲಿ ಇದರ ಪ್ರಭಾವ ರಾಶಿಗಳ ಮೇಲೆ ಆಗುತ್ತದಾ? ಕೆಲವರು ಪ್ರಭಾವ ಆಗುತ್ತದೆ ಅಂದರೆ, ಮತ್ತೆ ಕೆಲವರು ಏನೂ ಪರಿಣಾಮ ಇಲ್ಲ ಅಂತಾರೆ. ಹೀಗೆ ಎರಡೆರಡು ಅಭಿಪ್ರಾಯದ ಮಧ್ಯೆ ಸಿಲುಕಿ ಗೊಂದಲದಲ್ಲಿ ಇರುವ ಬದಲಿಗೆ ಮುಂಜಾಗ್ರತೆ ವಹಿಸುವುದು ಉತ್ತಮ. ನಿಮಗೆ ಗೊತ್ತಿರಲಿ, ಡಿಸೆಂಬರ್ 4ನೇ ತಾರೀಕು ಜೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3.07ರ ಮಧ್ಯೆ ಇರಲಿದೆ.

2/14

ಈ ಗ್ರಹಣದಿಂದ ತಲಾ 4 ರಾಶಿಗಳಿಗೆ ಶುಭ, ಅಶುಭ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಮೊದಲಿಗೆ ಶುಭ ಫಲ ಚಿಂತನೆಯನ್ನು ಯಾರಿಗೆ ಮಾಡಬಹುದು ಅಂತ ನೋಡುವುದಾದರೆ, ಯಾವ ರಾಶಿಯಿಂದ ಮೊದಲುಗೊಂಡು 3, 6, 10 ಹಾಗೂ 11ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆಯೋ ಅಂಥವರಿಗೆ ಶುಭ ಆಗುತ್ತದೆ. ಕನ್ಯಾ, ಮಿಥುನ, ಕುಂಭ ಹಾಗೂ ಮಕರ ರಾಶಿಯವರಿಗೆ ಶುಭ ಫಲಗಳನ್ನು, ಇನ್ನು ಅಶುಭ ಫಲಗಳು ಅಂತ 1, 4, 8, 12ನೇ ರಾಶಿಯಾಗುವ ವೃಶ್ಚಿಕ, ಸಿಂಹ, ಮೇಷ ಹಾಗೂ ಧನುಸ್ಸು ರಾಶಿಯವರಿಗೆ ಹೇಳಬಹುದು. 2, 5, 7 ಹಾಗೂ 9ನೇ ಮನೆ ಆಗುವ ತುಲಾ, ಕರ್ಕಾಟಕ, ವೃಷಭ ಮತ್ತು ಮೀನ ರಾಶಿಯವರಿಗೆ ಮಿಶ್ರ ಫಲ ಅಂತ ಹೇಳಬಹುದು. ಯಾರ್ಯಾರಿಗೆ ಅಶುಭ ಹಾಗೂ ಮಿಶ್ರ ಫಲ ಅಂತಿದೆಯೋ ಅವರು ಡಿಸೆಂಬರ್​ ಐದನೇ ತಾರೀಕು ಕೆಂಪು ಬಟ್ಟೆಯಲ್ಲಿ ಮೂರರಿಂದ ಐದು ಹಿಡಿ ಗೋಧಿಯನ್ನು ಕಟ್ಟಿ, ವೀಳ್ಯದೆಲೆ, ದಕ್ಷಿಣೆ, ಬಾಳೆಹಣ್ಣು ಸಮೇತ ದಾನ ಮಾಡಿ. ಹಾಗಿದ್ದ ಮೇಲೆ 12 ರಾಶಿಯವರ ಮೇಲೆ ಬೀರುವ ಪರಿಣಾಮ ಏನು ಎಂಬುದನ್ನು ಮುಂದೆ ಓದಿ.

3/14

ಮೇಷ

ಮೇಷ

ಈ ರಾಶಿಯವರು ಮುಖ್ಯವಾಗಿ ವಾಹನ ಚಾಲನೆ ಹಾಗೂ ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಬೇಕು. ಹಳೇ ಕಾಯಿಲೆಯು ಈ ಸಮಯದಲ್ಲಿ ಕಾಡಬಹುದು. ತಪ್ಪಾದ ವೈದ್ಯಕೀಯ ಪದ್ಧತಿ ಅನುಸರಿಸುವುದರಿಂದ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಇನ್ನು ಆಪ್ತ ಸ್ನೇಹಿತ ಅಥವಾ ಬಹಳ ನಂಬಿಕಸ್ತರಿದ್ದಂತೆ ಕಾಣ್ತಾರೆ ಅಂತ ಯಾರಿಗೂ ಜಾಮೀನಾಗಿ ನಿಲ್ಲಬೇಡಿ. ಮೇಷ ರಾಶಿಯ ಹಿರಿಯರಿಗೆ ಈಗಾಗಲೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಮತ್ತಷ್ಟು ಉಲ್ಬಣ ಆಗಬಹುದು. ಆದ್ದರಿಂದ ಆರಂಭದಲ್ಲಿ ಹೇಳಿದಂತೆ ಗೋಧಿಯನ್ನು ದಾನ ಮಾಡಿ.

4/14

ವೃಷಭ

ವೃಷಭ

ಈ ರಾಶಿಯವರಿಗೆ ಮಿಶ್ರ ಫಲದ ಅನುಭವ ಆಗಲಿದೆ. ಪಾರ್ಟನರ್​ಷಿಪ್​ ವ್ಯವಹಾರಗಳಲ್ಲಿ, ಕೌಟುಂಬಿಕ ವಿಚಾರಗಳಲ್ಲಿ ಮಿಶ್ರ ಫಲವನ್ನು ಕಾಣಬೇಕಾಗುತ್ತದೆ. ದೂರ ಪ್ರಯಾಣ ಮಾಡಬೇಕಾದ ಆಲೋಚನೆ ಇರುವವರಿಗೆ ಅರ್ಧದಷ್ಟು ಕೆಲಸ ಆಗಿ, ಆ ನಂತರ ತಡೆಯಾಗುವ ಸಾಧ್ಯತೆ ಇರುತ್ತದೆ. ಆದರೆ ಪ್ರಯತ್ನಗಳನ್ನು ಮಾತ್ರ ನಿಲ್ಲಿಸದೆ, ಗಂಭೀರವಾಗಿ ಮಾಡುವುದು ಮುಖ್ಯ. ಮನೆಯಲ್ಲಿನ ಹಿರಿಯರು ಹೇಳಿದ ಸಲಹೆ- ಸೂಚನೆಗಳನ್ನು ಪಾಲಿಸಿ ಮತ್ತು ಯಾವುದೇ ರೀತಿಯಲ್ಲಿ ಮಾರ್ಗದರ್ಶನದ ಅಗತ್ಯ ಬಂದಲ್ಲಿ ಪಡೆದುಕೊಳ್ಳಿ.

5/14

ಮಿಥುನ

ಮಿಥುನ

ಇಷ್ಟು ಸಮಯ ಸಮಸ್ಯೆ ಏನೆಂದು ಗೊತ್ತಾಗದೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಸೂಕ್ತ ವೈದ್ಯರು, ಔಷಧೋಪಚಾರದ ನೆರವು ದೊರೆಯುತ್ತದೆ. ಉದ್ಯೋಗ ಸ್ಥಳದಲ್ಲಿಯಾಗಲೀ ಅಥವಾ ವೈಯಕ್ತಿಕವಾಗಿಯಾಗಲೀ ಶತ್ರುತ್ವವನ್ನು ಎದುರಿಸುತ್ತಿದ್ದಲ್ಲಿ ಅಂಥವರ ವಿರುದ್ಧ ಮೇಲುಗೈ ಸಾಧಿಸಲಿದ್ದಾರೆ. ಅಧ್ಯಾತ್ಮ, ಧಾರ್ಮಿಕ ಕಾರ್ಯಕ್ರಮಗಳ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಆದರೆ ಸ್ತ್ರೀಯರ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಿ. ನೀವು ಹೇಳಿದ ಸಾಮಾನ್ಯ ಸಂಗತಿಯನ್ನೇ ದೊಡ್ಡದು ಮಾಡಿ, ಆರೋಪಗಳನ್ನು ಹೊರೆಸುವಂಥ ಸಾಧ್ಯತೆ ಇದೆ.

6/14

ಕರ್ಕಾಟಕ

ಕರ್ಕಾಟಕ

ಈ ರಾಶಿಯವರು ಹಿಂದೆಂದೋ ಮಾಡಿದ ಕೆಲಸಕ್ಕೆ ಈಗ ತಲೆನೋವು ಅನುಭವಿಸುವಂತಾಗುತ್ತದೆ. ಎಲ್ಲವನ್ನೂ ಸರಿಪಡಿಸಿ, ತಲೆ ತೊಳೆದುಕೊಂಡಾಗಿದೆ ಎಂಬ ಸಂಗತಿ ಮತ್ತೆ ಎದ್ದು ನಿಲ್ಲಬಹುದು. ಇನ್ನು ಮಕ್ಕಳಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗಲಿದೆ. ಅದರಲ್ಲೂ ವಿದೇಶಗಳಲ್ಲಿ ವಾಸ ಇರುವ ಮಕ್ಕಳಿಂದ ಶುಭ ಸುದ್ದಿ ಬರಬಹುದು. ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಸಹಾಯ ಒದಗಿಬರಲಿದೆ. ಮೇಲಧಿಕಾರಿಗಳು ನೀಡುವ ಸಲಹೆ- ಸೂಚನೆಗಳಿಂದಾಗಿ ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ ಆಗುವ ಅವಕಾಶ ಆಗಲಿದೆ.

7/14

ಸಿಂಹ

ಸಿಂಹ

ಈ ರಾಶಿಯವರು ತಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಇನ್ನು ತೀರಾ ತುರ್ತು ಎಂಬ ಕಾರಣಕ್ಕೆ ಇತರರ ವಾಹನವನ್ನೋ ವಸ್ತುವನ್ನೋ ಪಡೆದುಕೊಂಡು ಹೋಗದಿರುವುದು ಉತ್ತಮ. ಹಾಗೊಂದು ವೇಳೆ ತಕ್ಷಣಕ್ಕೆ ತಾನೇ ಅಂದುಕೊಂಡು ಪಡೆದಲ್ಲಿ ಅದಕ್ಕಾಗಿ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಮೇಲಧಿಕಾರಿಗಳು, ಸರ್ಕಾರಿ ಅಧಿಕಾರಿಗಳ ಜತೆಗೆ ಮಾತುಕತೆ ಆಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಆಡಿದ ಮಾತೇ ಉರುಳಾಗುವ ಸಾಧ್ಯತೆ ತುಂಬ ಜಾಸ್ತಿ ಇರುತ್ತದೆ.

8/14

ಕನ್ಯಾ

ಕನ್ಯಾ

ಸೋದರ- ಸೋದರಿಯರ ಜತೆಗೆ ವಿರಸ ಇದ್ದಲ್ಲಿ ಬಗೆಹರಿಯುವ ಸಾಧ್ಯತೆಗಳಿವೆ. ಕೂತು ಮಾತನಾಡಿ, ರಾಜೀ- ಸಂಧಾನ ಮಾಡಿಕೊಳ್ಳುವ ಅವಕಾಶಗಳಿವೆ. ಇನ್ನು ಬಹಳ ಸಮಯದಿಂದ ಬರಬೇಕಾದ ಹಣ ಹೊರಗಿದ್ದಲ್ಲಿ ಈ ಸಂದರ್ಭದಲ್ಲಿ ಪ್ರಯತ್ನ ಮಾಡಿದರೆ ಅದು ವಾಪಸ್ ಆಗಲಿದೆ. ಆದರೆ ಅದಕ್ಕಾಗಿ ಪ್ರಯತ್ನ ಬಲವಾಗಿ ಇರಬೇಕು. ಮನೆ ಕಟ್ಟುವುದಕ್ಕೆ, ಸೈಟ್ ಖರೀದಿ ಮಾಡುವುದಕ್ಕೆ ಅಥವಾ ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಮೊದಲಾದವಕ್ಕೆ ಹಣದ ಅವಶ್ಯಕತೆ ಇರುವವರಿಗೂ ಯಾವುದಾದರೊಂದು ಮೂಲದಿಂದ ಹಣ ಹರಿದುಬರಲಿದೆ.

9/14

ತುಲಾ

ತುಲಾ

ಈ ರಾಶಿಯವರಿಗೆ ಬರಬೇಕಾದ ಹಣಕ್ಕೆ ಅಡೆತಡೆಗಳು ಎದುರಾಗಬಹುದು. ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಆದರೆ ಹೇಗೋ ಹಣವನ್ನು ಹೊಂದಿಸುವಲ್ಲಿ ತಾತ್ಕಾಲಿಕವಾಗಿ ಯಶಸ್ಸು ಸಿಗುತ್ತದೆ. ಇದನ್ನು ತೀರಿಸುವ ಹೊತ್ತಿಗೆ ಜೀವ ಬಾಯಿಗೆ ಬಂದಂತೆ ಆಗುತ್ತದೆ. ವಿಚಿತ್ರ ಏನೆಂದರೆ, ಎಂಥ ದೊಡ್ಡ ಸಮಸ್ಯೆಯನ್ನಾದರೂ ದಾಟುವಂಥ ಮಾರ್ಗಗಳು, ಸಹಾಯ ಹಸ್ತ ದೊರೆಯುತ್ತವೆ. ಈ ಸಮಯದಲ್ಲಿ ಮಾತಿನ ಮೇಲೆ ನಿಗಾ ಇರಿಸಿಕೊಳ್ಳುವುದು ತುಂಬ ಮುಖ್ಯ. ನೀವಾಡುವ ಮಾತುಗಳು ವಿವಾದ ಆಗಬಹುದು. ಅದಕ್ಕೆ ಅವಕಾಶ ನೀಡದಿರಿ.

10/14

ವೃಶ್ಚಿಕ

ವೃಶ್ಚಿಕ

ಈ ರಾಶಿಯಲ್ಲೇ ಗ್ರಹಣ ಸಂಭವಿಸುವುದರಿಂದ ಆರೋಗ್ಯ, ಹಣಕಾಸು, ಮಾನಸಿಕ ನೆಮ್ಮದಿ ಸೇರಿದಂತೆ ಎಲ್ಲದರ ಬಗ್ಗೆಯೂ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಆರಂಭದಲ್ಲಿ ಹೇಳಿದಂತೆ ಗೋಧಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ವೀಳ್ಯದೆಲೆ, ಅಡಿಕೆ, ಬಾಳೇಹಣ್ಣಿನ ಸಹಿತ ಡಿಸೆಂಬರ್ 5ನೇ ತಾರೀಕಿನಂದು ದಾನ ಮಾಡಬೇಕು. ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡದಿರುವುದು ಉತ್ತಮ. ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಎಲ್ಲವೂ ಕಾನೂನು ಬದ್ಧವಾಗಿದೆಯೇ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಪರಿಶೀಲನೆ ಮಾಡಿಕೊಳ್ಳಿ.

11/14

ಧನುಸ್ಸು

ಧನುಸ್ಸು

ಈ ರಾಶಿಯವರಿಗೆ ಭಾರೀ ನಷ್ಟ, ಖರ್ಚು ಕಾಣಿಸಿಕೊಳ್ಳಬಹುದು. ಸರ್ಕಾರದ ವಿರುದ್ಧದ ವ್ಯಾಜ್ಯಗಳಿದ್ದಲ್ಲಿ ದಂಡ ಕಟ್ಟುವಂಥ ಅವಕಾಶಗಳಿವೆ. ಇನ್ನು ತಂದೆಯ ಆರೋಗ್ಯದ ಬಗ್ಗೆ ಜಾಸ್ತಿ ಕಾಳಜಿಯನ್ನು ವಹಿಸಬೇಕಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಅಥವಾ ಆ ಸೂಚನೆ ಕಂಡುಬಂದಲ್ಲಿ ಕೂಡಲೇ ಜಾಗ್ರತೆ ವಹಿಸಿ. ಇತರರ ಆಸ್ತಿ, ವಸ್ತುಗಳ ಜವಾಬ್ದಾರಿಯನ್ನು ವಹಿಸಿಕೊಳ್ಳದಿದ್ದರೆ ಒಳ್ಳೆಯದು. ನಿಮ್ಮ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ವಹಿಸುತ್ತಿದ್ದಾರೆ ಎಂದು ಬೀಗದೆ, ನಯವಾಗಿ ನಿರಾಕರಿಸಿದಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

12/14

ಮಕರ

ಮಕರ

ಯಾವುದಾದರೂ ಕೆಲಸ ಅರ್ಧಕ್ಕೆ ನಿಂತು, ಅದನ್ನು ಪೂರ್ಣಗೊಳಿಸುವುದಕ್ಕೆ ಆದಾಯದ ಮೂಲ ಹುಡುಕುತ್ತಿರುವವರಿಗೆ ದಾರಿ ಗೋಚರ ಆಗುತ್ತದೆ. ಅನಿರೀಕ್ಷಿತವಾಗಿ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ತಂದೆಯ ಕಡೆಯಿಂದ ನೆರವು ದೊರೆಯಲಿದೆ. ಸರ್ಕಾರಿ ಕಾಂಟ್ರ್ಯಾಕ್ಟರ್​ಗಳಿಗೆ ಬಾಕಿ ಇರುವ ಬಿಲ್​ಗಳು ವಿಲೇವಾರಿ ಆಗುವುದಕ್ಕೆ ಅನುಕೂಲ ಒದಗಿ ಬರಲಿದೆ. ತಾಯಿಯ ಮನೆ ಕಡೆಯಿಂದ ಸಂಬಂಧಿಕರು ಸೂಕ್ತ ಸಮಯದಲ್ಲಿ ನೆರವಿಗೆ ಬರಲಿದ್ದಾರೆ. ಈ ಹಿಂದೆ ಮಾಡಿದ್ದ ಪ್ರಯತ್ನಗಳಿಗೆ ಈಗ ಫಲ ದೊರೆಯಲಿದೆ.

13/14

ಕುಂಭ

ಕುಂಭ

ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ. ಈ ರಾಶಿಯವರ ಶ್ರಮವನ್ನು ಮೇಲಧಿಕಾರಿಗಳು ಗುರುತಿಸಲು ಆರಂಭಿಸುತ್ತಾರೆ. ಶುಭ ಕಾರ್ಯಗಳಿಗೆ ನೇತೃತ್ವ ವಹಿಸಿಕೊಳ್ಳುವಂತೆ ಕುಟುಂಬದಲ್ಲಿ ಕೇಳಿ, ಅದನ್ನು ಒಪ್ಪಿಕೊಳ್ಳುವಂತಾಗುತ್ತದೆ. ಪದೋನ್ನತಿಯ ನಿರೀಕ್ಷೆಯಲ್ಲಿ ಇರುವವರಿಗೆ, ರಾಜಕಾರಣಿಗಳಿಗೆ ಮಹತ್ವದ ಪಾತ್ರ ನಿರ್ವಹಿಸಬೇಕು ಎಂದಿರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ಇತರರು ಮಾಡಲು ಸಾಧ್ಯವಿಲ್ಲ ಎಂದು ಕೈ ಬಿಟ್ಟ ಕೆಲಸವನ್ನು ಈ ರಾಶಿಯವರು ಪೂರ್ಣಗೊಳಿಸಿ, ಮೇಲಧಿಕಾರಿಗಳ ಮನಸ್ಸು ಗೆಲ್ಲುತ್ತಾರೆ.

14/14

ಮೀನ

ಮೀನ

ಈ ರಾಶಿಯವರು ಪಿತ್ರಾರ್ಜಿತ ಆಸ್ತಿಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಕೆಲ ಅನುಕೂಲಕರ ಬೆಳವಣಿಗೆಗಳನ್ನು ನಿರೀಕ್ಷೆ ಮಾಡಬಹುದು. ಆದರೆ ತಂದೆಯ ಜತೆಗೆ ಭಿನ್ನಾಭಿಪ್ರಾಯ ಮಾಡಿಕೊಳ್ಳಬಾರದು. ಇವರಿಗೆ ಪ್ರಬಲರ ಕೃಪಾಶೀರ್ವಾದದ ಅಗತ್ಯ ಬರುತ್ತದೆ. ಆದ್ದರಿಂದ ಎಲ್ಲರ ಜತೆಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವುದು ಹಾಗೂ ಬೆಳೆಸಿಕೊಳ್ಳುವುದು ತುಂಬ ಮುಖ್ಯವಾಗುತ್ತದೆ. ಇತರರ ವಿಚಾರಗಳಿಗೆ ಸುಖಾಸುಮ್ಮನೆ ಮೂಗು ತೂರಿಸುವುದು, ತಮ್ಮ ಅಭಿಪ್ರಾಯಗಳನ್ನು ಹೇಳುವುದು ಬಿಡಲೇಬೇಕು. ಇಲ್ಲದಿದ್ದಲ್ಲಿ ಸಂಬಂಧಗಳು ಹಾಳಾಗುತ್ತವೆ.

TV9 Kannada

Leave a Reply

Your email address will not be published. Required fields are marked *