Solar Eclipse 2022: ಏ. 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ; ಈ ಸ್ಥಳಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ | Solar Eclipse 2022: First eclipse of 2022 on April 30 Partial solar eclipse to be visible in these places


Solar Eclipse 2022: ಏ. 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ; ಈ ಸ್ಥಳಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ

ಸೂರ್ಯಗ್ರಹಣ

ಬೆಂಗಳೂರು: ಈ ವರ್ಷದ ಮೊದಲ ಸೂರ್ಯ ಗ್ರಹಣ (Solar Eclipse) ಏಪ್ರಿಲ್ 30ರಂದು ಉಂಟಾಗಲಿದೆ. ಚಂದ್ರನು ಸೂರ್ಯನ ಮುಂದೆ ಹಾದುಹೋಗಿ, ಸೂರ್ಯನ ಬೆಳಕನ್ನು ತಡೆದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ವರ್ಷದ ಮೊದಲ ಸೂರ್ಯಗ್ರಹಣವು ಭಾಗಶಃ ಗ್ರಹಣವಾಗಿರುತ್ತದೆ. ಚಂದ್ರನು ಸೂರ್ಯನ ಬೆಳಕನ್ನು ಮಾತ್ರ ನಿರ್ಬಂಧಿಸುವುದರಿಂದ ಈ ಭಾಗಶಃ ಗ್ರಹಣ ಉಂಟಾಗುತ್ತದೆ. ನಾಸಾ (NASA) ಪ್ರಕಾರ, ಏಪ್ರಿಲ್ 30ರ ಗ್ರಹಣದ ಸಮಯದಲ್ಲಿ ಭೂಮಿಯಿಂದ ನೋಡಿದಾಗ ಸೂರ್ಯನ ಡಿಸ್ಕ್​ನ ಶೇ. 64ರಷ್ಟು ಚಂದ್ರನಿಂದ ನಿರ್ಬಂಧಿಸಲ್ಪಡುತ್ತದೆ. ಗ್ರಹಣವು ಭಾಗಶಃವಾಗಿರಲಿದ್ದು, ಚಂದ್ರ, ಸೂರ್ಯ ಮತ್ತು ಭೂಮಿಯನ್ನು ಪರಿಪೂರ್ಣ ಸರಳ ರೇಖೆಯಲ್ಲಿ ಜೋಡಿಸುವುದಿಲ್ಲ. ಚಂದ್ರನು ತನ್ನ ನೆರಳಿನ ಹೊರ ಭಾಗವನ್ನು ಮಾತ್ರ ಬಿತ್ತರಿಸುತ್ತಾನೆ. ಇದನ್ನು ಪೆನಂಬ್ರಾ ಎಂದು ಕೂಡ ಕರೆಯಲಾಗುತ್ತದೆ.

ಭಾಗಶಃ ಸೂರ್ಯ ಗ್ರಹಣ ಎಂದರೇನು?:
ನಾಸಾದ ಪ್ರಕಾರ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಚಲಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಆಗ ಭೂಮಿಯ ಮೇಲೆ ನೆರಳು ಬೀಳುತ್ತದೆ. ಕೆಲವು ಪ್ರದೇಶಗಳಲ್ಲಿ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ಬಂಧಿಸಲಾಗುತ್ತದೆ. ಭಾಗಶಃ ಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಯಾರೋ ಕಚ್ಚಿ ಒಂದು ತುಂಡನ್ನು ತೆಗೆದ ಹಾಗೆ ಕಾಣುವ ಅರ್ಧಚಂದ್ರಾಕಾರದ ಆಕಾರ ಕಂಡುಬರುತ್ತದೆ.

ಭಾಗಶಃ ಸೌರ ಗ್ರಹಣ ಯಾವಾಗ ಗೋಚರವಾಗುತ್ತದೆ?:
ಏಪ್ರಿಲ್ 30ರ ಭಾಗಶಃ ಸೂರ್ಯಗ್ರಹಣವು ಏಪ್ರಿಲ್ 30ರಿಂದ ಮೇ 1ರ ಮಧ್ಯರಾತ್ರಿಯಲ್ಲಿ ಪ್ರಾರಂಭವಾಗುತ್ತದೆ. ಕೋಲ್ಕತ್ತಾದ ಸಂಸದ ಬಿರ್ಲಾ ಪ್ಲಾನೆಟೋರಿಯಂ ಪ್ರಕಾರ, ಭಾಗಶಃ ಗ್ರಹಣವು 12:15ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಗ್ಗೆ 4:07ಕ್ಕೆ ಕೊನೆಗೊಳ್ಳುತ್ತದೆ.

ಭಾಗಶಃ ಸೌರ ಗ್ರಹಣವು ಎಲ್ಲಿ ಗೋಚರಿಸುತ್ತದೆ?:
ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗಗಳು, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ನೈಋತ್ಯ ಬ್ರೆಜಿಲ್‌ನಲ್ಲಿ ಈ ಭಾಗಶಃ ಸೂರ್ಯಗ್ರಹಣ ಗೋಚರಿಸುತ್ತದೆ. ಇದು ಅಂಟಾರ್ಕ್ಟಿಕಾದ ವಾಯುವ್ಯ ಕರಾವಳಿಯ ಭಾಗಗಳಲ್ಲಿ, ಫಾಕ್ಲ್ಯಾಂಡ್ ದ್ವೀಪಗಳು ಸೇರಿದಂತೆ ದಕ್ಷಿಣ ಅಮೆರಿಕಾದ ಆಗ್ನೇಯ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಮಹಾಸಾಗರದ ಹೆಚ್ಚಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಇದು ಭಾರತದಲ್ಲಿ ಗೋಚರಿಸುತ್ತದೆಯೇ?:
ಇಲ್ಲ. 2022ರ ಮೊದಲ ಭಾಗಶಃ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

TV9 Kannada


Leave a Reply

Your email address will not be published.