SPB, ಲತಾ ಮಂಗೇಶ್ಕರ್​​ ನಡುವಿನ ಬಾಂಧವ್ಯ ಹೇಗಿತ್ತು? ಈ ಬಗ್ಗೆ ಮಹಾಗುರು ಹಂಸಲೇಖ ಹೇಳಿದ್ದೇನು..?


ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಅಗಲಿಕೆಗೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಗಾಯಕಿ ಲತಾ ಮಂಗೇಶ್ಕರ್ ವಿಧಿವಶರಾದರು.

ಲತಾ ಮಂಗೇಶ್ಕರ್ ಅವರಿಗೆ 92 ವರ್ಷ. ಇವರ ಮತ್ತು ಭಾರತೀಯ ಮತ್ತೋರ್ವ ಸಂಗೀತ ದಿಗ್ಗಜ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ನಡುವೆ ತಾಯಿ ಮಗನ ಸಂಬಂಧ ಇತ್ತು. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಲತಾ ಮಂಗೇಶ್ಕರ್​​ ಅವರಿಂದ ಸಾಕಷ್ಟು ಕಲಿತಿದ್ದರು.
ಎರಡು ವರ್ಷಗಳ ಹಿಂದೆ ತನ್ನ ಹುಟ್ಟುಹಬ್ಬದಂದು ಮಹಾಗುರು ಹಂಸಲೇಖ ಅವರು, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಲತಾ ಮಂಗೇಶ್ಕರ್ ನಡುವೆ ಹೇಗಿತ್ತು ಸಂಬಂಧ ಎಂದು ಬಿಚ್ಚಿಟ್ಟಿದ್ದರು.

ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಒಂದು ಹಾಡನ್ನು ಡಿಸೈನ್​ ಮಾಡೋದು ಹೇಗೆ ಅಂತಾ ಗೊತ್ತು. ಖುದ್ದು ಎಸ್​​ಪಿಬಿ ಅವರೇ ನನಗೆ ಹಾಡು ಡಿಸೈನ್​​ ಮಾಡೋದು ಹೆಂಗೆ ಎಂದು ಕಲಿಸಿದ್ದರು. ಒಂದು ಹಾಡೋ ಕಂಪೋಸ್​ ಮಾಡೋ ಮುನ್ನ ಒಬ್ಬ ಗಾಯಕ ನೂರು ಸಲ ಹಾಡಿ ಪ್ರಾಕ್ಟೀಸ್​​ ಮಾಡಬೇಕು ಎಂಬುದು ಎಸ್​​ಪಿಬಿ ಕಾನ್ಸೆಪ್ಟ್. ಕಂಪೋಸರ್​​ ಸೂಚಿಸೋದು ಹಾಡೋದು ಮಾತ್ರ ನನ್ನ ಕೆಲಸ ಎನ್ನುತ್ತಿದ್ದರು ಎಸ್​​ಪಿಬಿ. ಇದು ಎಲ್ಲಿಂದ ಕಲಿತಿರಿ ಎಂದು ಕೇಳಿದ್ದಕ್ಕೆ ಎಸ್​​ಪಿಬಿ ಹೇಳಿದ ಹೆಸರು ಲತಾ ಮಂಗೇಶ್ಕರ್​​​​ ಹೆಸರು ಎಂದ್ರು.

News First Live Kannada


Leave a Reply

Your email address will not be published.