Special Story: ಜೀವನವನ್ನೇ ಮನುಜ ಜೀವನಕ್ಕೆ ಅರ್ಪಣೆ ಮಾಡುವವಳು ಪರಿಸರ | Story of the natural life of childhood


Special Story: ಜೀವನವನ್ನೇ ಮನುಜ ಜೀವನಕ್ಕೆ ಅರ್ಪಣೆ ಮಾಡುವವಳು ಪರಿಸರ

ಸಾಂಕೇತಿಕ ಚಿತ್ರ

ಜೀವನವನ್ನೇ ಮನುಜ ಜೀವನಕ್ಕೆ ಅರ್ಪಣೆ ಮಾಡುವವಳು ಪರಿಸರ. ಆದರೆ ಇಂದು ಪರಿಸರ ನಶಿಸುತ್ತಿದೆ. ನಾವು ಪ್ರಕೃತಿಯಿಂದ ಅನುಭವಿಸಿದ ಶ್ರೀಮಂತ ಮನರಂಜನೆಯನ್ನು, ಆರೋಗ್ಯವನ್ನು ನಮ್ಮ ಪೀಳಿಗೆಯವರೂ ಅನುಭವಿಸುವಂತಾಗಲು ನಾವು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕಿದೆ.

ಹುಟ್ಟಿದ ತಾಯಿ ಹಾಗೂ ಬೆಳೆಸಿದ ತಾಯಿ ಮನುಜ ಜೀವನದಲ್ಲಿ ಮರಯಲಾಗದ ವಸ್ತುಗಳು. ಒಬ್ಬಳು ಒಂದು ಜೀವಕ್ಕೆ ಜೀವ ಕೊಡುವಳು ಇನ್ನೊಬ್ಬಳು ತನ್ನ ಜೀವನವನ್ನೇ ಕೊಡುವಳು. ಜೀವನವನ್ನೇ ಮನುಜ ಜೀವನಕ್ಕೆ ಅರ್ಪಣೆ ಮಾಡುವವಳು ಪರಿಸರ. ಆದರೆ ಇಂದು ಪರಿಸರ ನಶಿಸುತ್ತಿದ್ದು, ಇದರ ಜೊತೆಗೆ ಕಾಡು ಪ್ರಾಣಿಗಳು, ಪಕ್ಷಿಗಳೂ ಅಳಿವಿನಂಚಿಗೆ ಸಾಗಿದೆ. ಇಂದಿನ ಈ ಸ್ಥಿತಿಯಲ್ಲಿರುವ ನಾವು ಬಾಲ್ಯದ ಹಳ್ಳಿ ಜೀವನ ಹೇಗಿತ್ತು ಎಂದು ಹೇಳುವ ಸಣ್ಣ ಪ್ರಯತ್ನ ಮಾಡುತ್ತೇನೆ.

ಪಟ್ಟಣದ ಮಂದಿಗಿಂತ ಹಳ್ಳಿ ಮಂದಿಗೆ ಪರಿಸರ ಸ್ನೇಹ ಸ್ವಲ್ಪ ಜಾಸ್ತಿ. ವಿಮಾನ, ಬಸ್ಸು, ಕಾರುಗಳಿಗಿಂತ ಗಿಡ, ಮರ, ಪಶು, ಪಕ್ಷಿಗಳನ್ನು ನೋಡಿ ಬೆಳೆದು ದೊಡ್ಡವರಾಗುತ್ತೇವೆ. ಪೇಟೆ ಮಂದಿ ಶಾಲೆಗೆ ವ್ಯಾನ್​ನಲ್ಲಿ ಹೋಗಿ ವ್ಯಾನ್​ನಲ್ಲೇ ಬರುತ್ತಾರೆ. ಅವರಿಗೆ ಲೋಡ್ ಅನ್ ಲೋಡ್ ಮಾಡಿದ ಥರ ಆಗಬಹುದು. ಆದರೆ ನಾವು ಚಿಕ್ಕವರು ಇದ್ದಾಗ ನಮ್ಮ ಬೆನ್ನು ಹಿಂದಕ್ಕೆ ಬಾಗುವಂತೆ ಪುಸ್ತಕಗಳೇ ತುಂಬಿ ಸ್ಕೂಲ್​ ಬ್ಯಾಗ್​ ಅನ್ನು ಬೆನ್ನಿಗೆ ಹಾಕಿ ಸ್ಲಿಪ್ಪರ್ ಹಾಕಿ ಅಜ್ಜನ ಛತ್ರಿ ಹಿಡಿದುಕೊಂಡು ಅರಣ್ಯಗಳ ನಡುವೆ ಹಾದು ಹೋಗವ ರಸ್ತೆಗಳಲ್ಲಿ ಹೋಗುತ್ತೇವೆ. ಹೀಗೆ ಹೋಗುವಾಗ ಸುಮ್ಮನೇ ಹೋಗುವುದಿಲ್ಲ, ಬದಲಾಗಿ ಮರಗಳೊಂದಿಗೆ ಮಾತನಾಡುತ್ತಾ ಹೋಗುತ್ತಿದ್ದೆವು. ಇನ್ನೂ ಕೆಲವರು ಶಿಕ್ಷಕರಂತೆ ಗಿಡಮರಗಳಿಗೂ ಪಾಠ ಮಾಡುತ್ತಾ ಹೋಗುತ್ತಿದ್ದರು.

TV9 Kannada


Leave a Reply

Your email address will not be published.