ಶ್ರೀನಗರ/ಪುಲ್ವಾಮಾ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸ್ಪೆಷಲ್ ಪೊಲೀಸ್ ಆಫಿಸರ್ (SPO) ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಎಸ್‍ಪಿಓ ಫಯಾಜ್ ಅಹಮದ್ (41) ಮತ್ತು ಅವರ ಪತ್ನಿ, ಮಗಳು (23) ಸಾವನ್ನಪ್ಪಿದ್ದಾರೆ. ಸದ್ಯ ಇಲಾಖೆಯಲ್ಲಿ ನಾಕಾಬಂದಿ ಹಾಕಲಾಗಿದ್ದು, ಸರ್ಚಿಂಗ್ ಆಪರೇಷನ್ ಆರಂಭಿಸಲಾಗಿದೆ.

ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಶಸ್ತ್ರಸಜ್ಜಿತ ಉಗ್ರರು ಫಯಾಜ್ ಅಹಮದ್ ಮನೆಯೊಳಗೆ ನುಗ್ಗಿದ್ದಾರೆ. ಫಯಾಜ್ ಮತ್ತು ಅವರ ಕುಟುಂಬದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಫಯಾಜ್ ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಪತ್ನಿ ರಾಜಾ ಬೇಗಂ ಹಾಗೂ ಮಗಳು ರಫಿಯಾ ಅನಂತನಾಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಂಗಳವಾರ ಶ್ರೀನಗರದಲ್ಲಿ ಸಿಐಡಿ ಇನ್‍ಸ್ಪೆಕ್ಟರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ನೌಗಾಮ್ ಇಲಾಖೆಯಲ್ಲಿ ಈ ಘಟನೆ ನಡೆದಿತ್ತು. ಶನಿವಾರ ಬರ್ಬರ್ ಶಾ ಇಲಾಖೆಯ ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಜಾಯಿಂಟ್ ಪಾರ್ಟಿ ಮೇಲೆ ಉಗ್ರುರ ಗ್ರೆನೆಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದರು.

The post SPO ಮನೆಗೆ ನುಗ್ಗಿ ಉಗ್ರರ ಗುಂಡಿನ ದಾಳಿ – ಅಧಿಕಾರಿ, ಪತ್ನಿ, ಮಗಳು ಸಾವು appeared first on Public TV.

Source: publictv.in

Source link