ಸರಣಿ ಗೆಲುವಿಗೆ ಕೊಹ್ಲಿ – ಶಾಸ್ತ್ರಿ ಗೇಮ್​ಪ್ಲಾನ್..ಗ್ರಾಂಡ್​ ಕಮ್​ಬ್ಯಾಕ್​ ಮಾಡ್ತಾರಾ ಆ್ಯಷ್​-ಜಡ್ಡು?

 

ಸರಣಿ ಗೆಲುವಿಗೆ ಕೊಹ್ಲಿ – ಶಾಸ್ತ್ರಿ ಗೇಮ್​ಪ್ಲಾನ್..ಗ್ರಾಂಡ್​ ಕಮ್​ಬ್ಯಾಕ್​ ಮಾಡ್ತಾರಾ ಆ್ಯಷ್​-ಜಡ್ಡು?

ವಿಶ್ವ ಟೆಸ್ಟ್​​​ ಚಾಂಪಿಯನ್​ಶಿಪ್​ ಫೈನಲ್​ ಸೋಲಲು ಇಬ್ಬರು ಸ್ಪಿನ್ನರ್​​ಗಳಿಗೆ ಮಣೆ ಹಾಕಿದ್ದೇ ಕಾರಣ ಅನ್ನೋ ಚರ್ಚೆಗಳು ನಡೆದಿದ್ವು. ಅಶ್ವಿನ್​, ಜಡ್ಡು ಆಯ್ಕೆಯ ಬಗ್ಗೆ ನಾಯಕ ಕೊಹ್ಲಿಯನ್ನ ಹಲವರು ಪ್ರಶ್ನಿಸಿದ್ರು. ಆದ್ರೂ ಇದೀಗ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲೂ ಈ ಇಬ್ಬರು ಸ್ಪಿನ್ನರ್​ಗಳನ್ನೇ ಕಣಕ್ಕಿಳಿಸಲು ಯೋಜನೆ ಸಿದ್ಧವಾಗಿದೆ. ಅದ್ಯಾಕೆ..?

blank

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಸೋಲು ಕೊಹ್ಲಿ ನಾಯಕತ್ವವನ್ನೇ ಪ್ರಶ್ನೆ ಮಾಡುವಂತೆ ಮಾಡಿತ್ತು. ಸೋಲಿಗೆ ಟೀಮ್​ ಕಾಂಬಿನೇಷನ್​​​ ಕಾರಣ ಎಂದು, ಹಲವರು ಟೀಕಿಸಿದ್ರು. ಅದರಲ್ಲೂ ಸ್ಪಿನ್​ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್​ ಅಶ್ವಿನ್​ರನ್ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸಿದ್ದು, ಚರ್ಚೆಗೆ ಕಾರಣವಾಯ್ತು. ಯಾಕಂದ್ರೆ ಮಹತ್ವದ ಪಂದ್ಯದಲ್ಲಿ ಈ ಸ್ಪಿನ್​ ಜೋಡಿ ನೀರಸ ಪ್ರದರ್ಶ ನೀಡಿತ್ತು.

blank

ಮಹತ್ವದ ಪಂದ್ಯದಲ್ಲಿ ಅಶ್ವಿನ್​ 4 ವಿಕೆಟ್​​ ಕಬಳಿಸಿದ್ರೆ, ಜಡೇಜಾ ಆಟ ಕೇವಲ 1 ವಿಕೆಟ್​​ಗೆ ಅಂತ್ಯವಾಗಿತ್ತು. ಬ್ಯಾಟಿಂಗ್​ನಲ್ಲೂ ಈ ಇಬ್ಬರು ತಂಡಕ್ಕೆ ಆಧಾರವಾಗಲೇ ಇಲ್ಲ. ಈ ಕಾರಣದಿಂದಲೇ ಮುಂಬರುವ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಾದ್ರೂ, ಈ ಇಬ್ಬರ ಕಾಂಬಿನೇಷನ್​ನಲ್ಲಿ ಭಾರತ ಕಣಕ್ಕಿಳಿಯಲ್ಲ ಎನ್ನಲಾಗಿತ್ತು. ಆದ್ರೆ ಆಂಗ್ಲರ ವಿರುದ್ಧದ ಸರಣಿಯಲ್ಲೂ , ಜಡ್ಡು ಕಣಕ್ಕಿಳಿಯೋದು ಕನ್​ಫರ್ಮ್​​​​..!!

ಆತಿಥೇಯ ಇಂಗ್ಲೆಂಡ್​ ತಂಡದ ನಾಯಕ ಜೊ ರೂಟ್​ ಹೊರತುಪಡಿಸಿದ್ರೆ, ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು ಸ್ಪಿನ್​ ತಂತ್ರದ ಎದುರು ತಡವರಿಸುವವರೇ. ಇಂಗ್ಲೆಂಡ್​ ತಂಡದ ಭಾರತದ ಪ್ರವಾಸದಲ್ಲಿ ಇದೂ ಪ್ರೂವ್​ ಕೂಡ ಆಗಿದೆ. ಅದೆಲ್ಲದರ ಜೊತೆಗೆ ಇಂಗ್ಲೆಂಡ್​​​ ವಿರುದ್ಧ ಅವರದೇ ನಾಡಿನಲ್ಲಿ ನೀಡಿರುವ ಶ್ರೇಷ್ಟ ಪ್ರದರ್ಶನವೂ ಈ ಇಬ್ಬರಿಗೆ ಶ್ರೀರಕ್ಷೆಯಾಗಿದೆ.

blank

ಈವರೆಗೆ ಇಂಗ್ಲೆಂಡ್​​ನಲ್ಲಿ 11 ಇನ್ನಿಂಗ್ಸ್​ಗಳನ್ನಾಡಿರುವ ಅಶ್ವಿನ್,​ 261 ರನ್ ಗಳಿಸಿ 18 ವಿಕೆಟ್​​ ಕಬಳಿಸಿದ್ದಾರೆ. 10 ಇನ್ನಿಂಗ್ಸ್​​ಗಳನ್ನಾಡಿರುವ ಜಡೇಜಾ 307 ರನ್​ ಕಲೆ ಹಾಕಿ, 17 ವಿಕೆಟ್​​ ಕಬಳಿಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಫೈಟ್​​​ನಲ್ಲಿ ಈ ಸ್ಪಿನ್​ ಜೋಡಿ, ನಿರೀಕ್ಷಿತ ಪ್ರದರ್ಶನ ನೀಡದಿರಬಹುದು. ಆದ್ರೆ ಆ ಟೂರ್ನಿಯಲ್ಲಿ ಭಾರತ ಫೈನಲ್​ ಪ್ರವೇಶ ಮಾಡಿದ್ದರ ಶ್ರೇಯ, ಈ ಇಬ್ಬರಿಗೆ ಸಲ್ಲಲೇಬೇಕು. ಟೂರ್ನಿಯಲ್ಲಿ ಅಶ್ವಿನ್​ 71 ವಿಕೆಟ್​​ ಕಬಳಿಸಿದ್ರೆ, ಜಡೇಜಾ 29 ವಿಕೆಟ್​​ ಕಬಳಿಸಿದ್ರು. ಬ್ಯಾಟಿಂಗ್​ನಲ್ಲೂ ಮೋಡಿ ಮಾಡಿದ್ದ ಈ ಜೋಡಿ ಹಲ ಗೆಲುವುಗಳಿಗೆ ಕಾರಣವಾಗಿತ್ತು. ಹೀಗಾಗಿ ಇಂಗ್ಲೆಂಡ್​​ ವಿರುದ್ಧವೂ ಈ ಸ್ಪಿನ್​ ಜೋಡಿಯನ್ನೇ ಕಣಕ್ಕಿಳಿಸೋದು ಕೊಹ್ಲಿ ಪಡೆಯ ಯೋಜನೆಯಾಗಿದೆ.

 

 

Source: newsfirstlive.com Source link