ನಾಯಕನಾಗಿ ವಿರಾಟ್​ ಏನೆಲ್ಲಾ ಗೇಮ್​ಪ್ಲಾನ್, ಸ್ಟ್ರಾಟರ್ಜಿ ರೂಪಿಸಬೇಕು..?

 

ನಾಯಕನಾಗಿ ವಿರಾಟ್​ ಏನೆಲ್ಲಾ ಗೇಮ್​ಪ್ಲಾನ್, ಸ್ಟ್ರಾಟರ್ಜಿ ರೂಪಿಸಬೇಕು..?

ಇಂಗ್ಲೆಂಡ್​ ನೆಲದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಗೆಲುವಿನ ಕೊರಗು, ಈ ಬಾರಿ ತೀರುತ್ತಾ..? ಇಂಥದ್ದೊಂದು ಪ್ರಶ್ನೆ, ಪ್ರತಿ ಪ್ರವಾಸದಂತೆ ಈ ಪ್ರವಾಸದಲ್ಲೂ ಉದ್ಬವವಾಗಿದೆ.ಆದ್ರೆ, ಈ ಬಾರಿ ಗೆಲ್ಲುವ ಅವಕಾಶ ಹೆಚ್ಚಾಗಿಯೇ ಇದೆ. ವಿರಾಟ್​ ಕೊಹ್ಲಿ ಮುಂದಿರೋ ಚಾಲೆಂಜಸ್ ಏನು..?

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೆ, ಒಂದೇ ದಿನ ಬಾಕಿಯಿದೆ.ಎರಡು ಬಲಿಷ್ಠ ತಂಡಗಳ ನಡುವಿನ ಹಣಾಹಣಿಯತ್ತ, ವಿಶ್ವ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಸತತ 2 ಟೆಸ್ಟ್​ ಸರಣಿ ಸೋತಿರುವ ಇಂಗ್ಲೆಂಡ್​,ಸ್ಟ್ರಾಂಗ್​​​​ ಕಮ್​​ಬ್ಯಾಕ್​ ಲೆಕ್ಕಚಾರದಲ್ಲಿದೆ.ಇತ್ತ 2007ರ ಬಳಿಕ ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿ ಗೆಲ್ಲದ ಟೀಮ್ ಇಂಡಿಯಾ, ಈ ಬಾರಿ ಸರಣಿ ಗೆದ್ದೇ ಗೆಲ್ಲಬೇಕೆಂದು ಪಣತೊಟ್ಟಿದೆ. ಹೌದು, ಆಸ್ಟ್ರೇಲಿಯಾ,ಇಂಗ್ಲೆಂಡ್​​ ಸರಣಿಗಳ ಬಳಿಕ ಕಿವೀಸ್​ ಎದುರಿನ ಟೆಸ್ಟ್ ಚಾಂಪಿಯನ್​ಶಿಪ್​​​ ಫೈನಲ್​​ನಲ್ಲಿ ಟೀಮ್ ಇಂಡಿಯಾ ಸೋತರೂ, ಆಂಗ್ಲರ ನಾಡಲ್ಲಿ ವಿರಾಟ್​ ಪಡೆಗೆ ಸರಣಿ ಗೆಲುವಿನ ಫೇವರಿಟ್ ಆಗಿದೆ. ಆದ್ರೆ, ಸರಣಿ ಗೆಲ್ಲೋಕೆ ಟೀಮ್ ಇಂಡಿಯಾ ಕ್ಯಾಪ್ಟನ್​​ ಕೊಹ್ಲಿ, ಮಾಡಬೇಕಾದ ಕಾರ್ಯಗಳು ದೊಡ್ಡವಿದೆ.

ವಿರಾಟ್ ನಡೆ ಏನು?

ಮೊದಲನೆಯದಾಗಿ ಕ್ಯಾಪ್ಟನ್ ಕೊಹ್ಲಿ ಪರ್ಫೆಕ್ಟ್​ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸಬೇಕಿದೆ. ನಾಯಕನಾಗಿ ಸೂಕ್ತ ನಿರ್ಧಾರಗಳನ್ನ ಕೈಗೊಳ್ಳುವುದರ ಜೊತೆಗೆ ವಿರಾಟ್​ರಿಂದ 2018ರ ಸರಣಿಯ ಬ್ಯಾಟಿಂಗ್ ವೈಭವ ಈ ಸರಣಿಯಲ್ಲಿ ಅತ್ಯವಶ್ಯಕವಾಗಿದೆ. ಟಾಪ್ ಆರ್ಡರ್ನಲ್ಲಿ ತಾವೇ ಆಡೋಕೆ ಸಜ್ಜಾಗಿರುವ ವಿರಾಟ್​, ಮಿಡಲ್ ಆರ್ಡರ್​​ ಬ್ಯಾಟಿಂಗ್​ಗೂ, ಶಕ್ತಿ ತುಂಬುವಂತ ಕೆಲಸ ಮಾಡಬೇಕಿದೆ. ಅದ್ರಲ್ಲೂ ಸ್ವಿಂಗ್ ಆ್ಯಂಡ್ ಸೀಮ್ ಕಂಡೀಷನ್ಸ್​ ಸವಾಲು ಮೆಟ್ಟಿ ನಿಲ್ಲಬೇಕು.ಬಹುಮುಖ್ಯವಾಗಿ ಸ್ಪಿನ್ನರ್​ಗಳ ಎದುರು ಪರದಾಡುತ್ತಿರುವ ಟೀಮ್ ಇಂಡಿಯಾ, ಈ ಬಗ್ಗೆ ಗಮನ ಹರಿಸಬೇಕಿದೆ.

ಬರೀ ನಾಯಕನಾಗಿ ಗೇಮ್​ ಪ್ಲಾನ್ & ಸ್ಟ್ರಾಟರ್ಜಿ ರೂಪಿಸುವುದೇ ಅಲ್ಲ..ಅದನ್ನ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕಿದೆ. ಇದೆಲ್ಲದರ ಜೊತೆಗೆ ಅಪಾಯಕಾರಿ ಜೇಮ್ಸ್​ ಆ್ಯಂಡರ್ಸನ್,ಸ್ಟುವರ್ಟ್ ಬ್ರಾಡ್, ಮಾರ್ಕ್​ ವುಡ್​ರ ದಾಳಿಗೆ ಸಮರ್ಥ ಪ್ರತ್ಯುತ್ತರದ ಜೊತೆಗೆ,ತವರಿನಲ್ಲಿ ಕಾಡಿದ್ದ ಡಾಮ್ ಬೆಸ್, ಜ್ಯಾಕ್ ಲೀಚ್ ಬಗ್ಗೆಯೂ ಎಚ್ಚರಿಕೆ ನಡೆ ಅನುಸರಿಸಬೇಕಿದೆ. ಸದೃಢ ಬ್ಯಾಟಿಂಗ್ ಜೊತೆಗೆ ಬೆಸ್ಟ್ ಬೌಲಿಂಗ್ ಅಟ್ಯಾಕ್ ಹೊಂದಿರುವ ಟೀಮ್ ಇಂಡಿಯಾ, ಹೋರಾಟದ ಜೊತೆ ಸಂಘಟಿತ ಆಟವಾಡಿದರೆ ಸರಣಿ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ.

Source: newsfirstlive.com Source link