ಇಂದಿನಿಂದ ಇಂಡೋ, ಇಂಗ್ಲೆಂಡ್​ ಟೆಸ್ಟ್​ ಕದನ -ಆಂಗ್ಲರ ನಾಡಲ್ಲಿ ಕೊಹ್ಲಿ ಪಡೆಗೆ ಅಗ್ನಿ ಪರೀಕ್ಷೆ

 

ಇಂದಿನಿಂದ ಇಂಡೋ, ಇಂಗ್ಲೆಂಡ್​ ಟೆಸ್ಟ್​ ಕದನ -ಆಂಗ್ಲರ ನಾಡಲ್ಲಿ ಕೊಹ್ಲಿ ಪಡೆಗೆ ಅಗ್ನಿ ಪರೀಕ್ಷೆ

ಭಾರತ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್ ಇಂದಿನಿಂದ ಆರಂಭವಾಗಲಿದ್ದು ಇಂಗ್ಲೆಂಡ್ ವಿರುದ್ಧ ಭಾರತ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇಂದಿನಿಂದ ನಾಟಿಂಗ್​ಹ್ಯಾಮ್​ನಲ್ಲಿ ಟೆಸ್ಟ್ ಪಂದ್ಯ ನಡೆಯಲಿದ್ದು, ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಇಂದಿನಿಂದ ಆಗಸ್ಟ್ 8ರವರೆಗೆ ನಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್​ನಲ್ಲಿ ಟೆಸ್ಟ್ ಪಂದ್ಯವು ನಡೆಯಲಿದೆ.

ಪಂದ್ಯದಲ್ಲಿ ಟಾಸ್​​ ನಿರ್ಣಾಯಕ ಪಾತ್ರ ವಹಿಸಲಿದ್ದು, ಟಾಸ್​​ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುಕೊಳ್ಳುವುದು ಉತ್ತಮ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪಿಚ್ ಆರಂಭದಲ್ಲಿ ವೇಗಿಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದ್ದು, ಮೊದಲ ದಿನದಾಟದ ಬಳಿಕ ಸ್ಪಿನ್​ ಪ್ರಭಾವ ಸಾಧ್ಯತೆ ಇದೆ. ಬ್ಯಾಟ್ಸ್​ಮನ್​ಗಳಿಗೆ ವಿಕೆಟ್​ ಕಾಯ್ದುಕೊಳ್ಳೋದು ಬಹುದೊಡ್ಡ ಸವಾಲಾಗಿದ್ದು, ಕೊನೆಯ 2 ದಿನಗಳಲ್ಲಿ ಬ್ಯಾಟ್ಸ್​ಮನ್​ಗಳಿಗೆ ಪಿಚ್ ನೆರವು ನೀಡುವ ನಿರೀಕ್ಷೆ ಇದೆ.

ಸಂಭಾವ್ಯ ಟೀಂ ಇಂಡಿಯಾ; ರೋಹಿತ್​ ಶರ್ಮಾ, ಕೆಎಲ್​ ರಾಹುಲ್​, ಚೇತೇಶ್ವರ್​ ಪೂಜಾರ, ವಿರಾಟ್​ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಷಭ್​ ಪಂತ್​, ಆರ್​​.ಅಶ್ವಿನ್​, ರವೀಂದ್ರ ಜಡೇಜಾ, ಇಶಾಂತ್​ ಶರ್ಮಾ, ಮೊಹಮದ್​​ ಶಮಿ, ಜಸ್ಪ್ರೀತ್​ ಬೂಮ್ರಾ.

ಸಂಭಾವ್ಯ ಇಂಗ್ಲೆಂಡ್​; ಹಸೀಬ್​ ಹಮೀದ್​, ಡಾಮಿನಿಕ್​ ಸಿಬ್ಲೇ, ಜಾನಿ ಬೇರ್​​ಸ್ಟೋ, ಜೋ ರೂಟ್​, ಜೋಸ್​ ಬಟ್ಲರ್​, ಡೇನಿಯಲ್​ ಲಾರೆನ್ಸ್​, ಸ್ಯಾಮ್​ ಕರನ್​, ಜ್ಯಾಕ್​ ಲೀಚ್​​, ಸ್ಟುವರ್ಟ್​​ ಬ್ರಾಡ್​, ಮಾರ್ಕ್​ವುಡ್​, ಜೇಮ್ಸ್​ ಆ್ಯಂಡರ್ಸನ್​

Source: newsfirstlive.com Source link