ತವರಿಗೆ ಆಗಮಿಸಿದ ಪಿವಿ ಸಿಂಧು -ದೇಶದ ಜನತೆಗೆ ಕಂಚಿನ ಪದಕ ಅರ್ಪಿಸಿದ ಬ್ಯಾಡ್ಮಿಂಟನ್ ತಾರೆ

 

ತವರಿಗೆ ಆಗಮಿಸಿದ ಪಿವಿ ಸಿಂಧು -ದೇಶದ ಜನತೆಗೆ ಕಂಚಿನ ಪದಕ ಅರ್ಪಿಸಿದ ಬ್ಯಾಡ್ಮಿಂಟನ್ ತಾರೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತವರಿಗೆ ಆಗಮಿಸಿದ್ದಾರೆ. ತವರಿಗೆ ಬಂದ ಸಿಂಧೂಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಳಿಕ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಿಂಧೂಗೆ ಸನ್ಮಾನ ಮಾಡಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಚಿನ ಹುಡಗಿ ಪಿ.ವಿ. ಸಿಂಧು ಮತ್ತು ಅವರ ಕೋಚ್​ ಪಾರ್ಕ್ ಟೇ-ಸಾಂಗ್ ಗೆ ಸನ್ಮಾನಿಸಿ ಗೌರವಪೂರ್ವಕ ಅಭಿನಂದನೆ ಸಲ್ಲಿಸಲಾಗಿದೆ.

blank

ಇನ್ನು ಈ ವೇಳೆ ಮಾತನಾಡಿದ ಪಿ.ವಿ ಸಿಂಧು, ನಾನು ಏನೇ ಕೇಳಿದ್ರು, ಇಲ್ಲ ಎನ್ನದೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ ಸರ್ಕಾರ ಮತ್ತು ಕ್ರೀಡಾ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ನಾನು ಈ ಬಾರಿಯ ಒಲಿಂಪಿಕ್​ನಲ್ಲಿ ಬಹಳಷ್ಟು ಪ್ರೇಕ್ಷಕರನ್ನ ನೋಡಲಾಗಲಿಲ್ಲ ಆದರೆ ಭಾರತದಲ್ಲಿ ಶತಕೋಟಿ ಜನರು ನನಗೆ ತಮ್ಮ ಬೆಂಬಲವನ್ನು ಇಲ್ಲಿಂದಲೇ ತೋರಿಸಿದ್ದಾರೆ. ಈ ಪದಕವನ್ನು ನಾನು ನಿಮಗೆ ಅರ್ಪಿಸಲು ಬಯಸುತ್ತೇನೆ ಅಂತಾ ಭಾವನಾತ್ಮಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಭಾಗಿಯಾಗಿ ಪಿ.ವಿ ಸಿಂಧುಗೆ ಅಭಿನಂದನೆ ಸಲ್ಲಿಸಿದ್ರು.

Source: newsfirstlive.com Source link