ಜಾವೆಲಿನ್​ ಥ್ರೋ: ಮೊದಲ ಪ್ರಯತ್ನದಲ್ಲೇ ಫೈನಲ್​ ತಲುಪಿದ ನೀರಜ್​ ಚೋಪ್ರಾ

 

ಜಾವೆಲಿನ್​ ಥ್ರೋ: ಮೊದಲ ಪ್ರಯತ್ನದಲ್ಲೇ ಫೈನಲ್​ ತಲುಪಿದ ನೀರಜ್​ ಚೋಪ್ರಾ

ಟೋಕಿಯೊ ಒಲಿಂಪಿಕ್ಸ್​ ಪುರುಷರ ಜಾವೆಲಿನ್ ಥ್ರೋನಲ್ಲಿ ಭಾರತದ ನಿರಾಜ್​​ ಚೋಪ್ರಾ ಮೊದಲ ಪ್ರಯತ್ನದಲ್ಲೇ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಪುರುಷರ ಜಾವೆಲಿನ್​ ಥ್ರೋ ಕ್ವಾಲಿಫೈಯರ್​ ಗ್ರೂಪ್​​ ‘ಎ’ನಲ್ಲಿದ್ದ ನೀರಜ್​ ಚೋಪ್ರಾ ಅವರು, ಮೊದಲ ಪ್ರಯತ್ನದಲ್ಲೇ 86.65 ಮೀಟರ್​​ ಸಾಧನೆಯೊಂದಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕ್ವಾಲಿಫಿಕೇಷನ್​ ವಿಭಾಗದಲ್ಲಿ ಚೋಪ್ರಾ 15ನೇ ಪೊಸಿಷನ್​​​ನಲ್ಲಿ ಲಾಂನ್​​ ಥ್ರೋನ್​ ಮಾಡಿದ್ದರು. ಫೈನಲ್​​ಗೆ ಅರ್ಹತೆ ಪಡೆಯಲು ಕನಿಷ್ಠ 83.50 ಮೀಟರ್ ಅಥವಾ ಸ್ಪರ್ಧೆಯಲ್ಲಿರುವ 12 ಮಂದಿಯ ಬೆಸ್ಟ್​ ಥ್ರೋ ಮಾಡಿದ ಆಟಗಾರರನ್ನು ಫೈನಲ್​​ಗೆ ಆಯ್ಕೆ ಮಾಡಲಾಗುತ್ತದೆ. ಆಗಸ್ಟ್​ 7 ರಂದು ಜಾವೆಲಿನ್​ ಥ್ರೋ ಫೈನಲ್​ ಸ್ಪರ್ಧೆ ನಡೆಯಲಿದೆ.

Source: newsfirstlive.com Source link