ಟೂರ್ನಿಯ ಮೊದಲ ಸೋಲಿನ ಬಳಿಕ ಅಜೇಯ ಓಟ ಮುಂದುವರೆಸಿರುವ ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್​​ರೈಸರ್ಸ್​​ ಹೈದಾರಾಬಾದ್​​ ಇಂದು ಮುಖಾಮುಖಿಯಾಗಲಿವೆ.

ಉಭಯ ತಂಡಗಳು ತಲಾ 5 ಪಂದ್ಯಗಳನ್ನಾಡಿದ್ದು, ಸಿಎಸ್​ಕೆ ನಾಲ್ಕರಲ್ಲಿ ಗೆದ್ದಿದ್ರೆ, ಎಸ್​​ಆರ್​​ಎಚ್​​​ ಅಷ್ಟೇ ಪಂದ್ಯಗಳನ್ನ ಕೈ ಚೆಲ್ಲಿದೆ. ಗೆಲುವಿನ ಚಾರ್ಮ್​ ಮುಂದುವರಿಸಲು ಯಲ್ಲೋ ಆರ್ಮಿ ಸಿದ್ಧವಾಗಿದ್ದರೆ, ಆರೆಂಜ್​ ಆರ್ಮಿ ಗೆಲುವಿನ ಹಳಿಗೆ ಮರಳೋ ಯತ್ನದಲ್ಲಿದೆ. ಉಭಯ ತಂಡಗಳ ಕಾದಾಟಕ್ಕೆ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣ ಸಜ್ಜಾಗಿದೆ.

ಧೋನಿಗೆ ಕಾಡ್ತಿದೆ ಮಿಡಲ್​ ಆರ್ಡರ್​ ಬ್ಯಾಟಿಂಗ್​ ಚಿಂತೆ
ಕಳೆದ ಐಪಿಎಲ್​​ನಲ್ಲಿ ತೋರಿದ್ದ ಅಸ್ಥಿರ ಪ್ರದರ್ಶನದಿಂದ ಕಂಗೆಟ್ಟಿದ್ದ ಸಿಎಸ್​ಕೆ ಈ ಬಾರಿ ಭರ್ಜರಿ ಕಮ್​ಬ್ಯಾಕ್​ ಮಾಡಿದೆ. ಮೊದಲ ಸೋಲಿನ ಬಳಿಕ ಸತತ ನಾಲ್ಕರಲ್ಲಿ ಗೆಲುವು ದಾಖಲಿಸಿರುವ ಧೋನಿ ಪಡೆ, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಋತುರಾಜ್​ ಗಾಯಕ್ವಾಡ್ – ಫಾಫ್​ ಡು ಪ್ಲೆಸಿಸ್​​ ಡಿಸೆಂಟ್​ ಆರಂಭ ನೀಡ್ತಿದ್ರೆ, ರೈನಾ ಹಾಗೂ ರಾಯುಡು, ನಾಯಕ ಧೋನಿ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಇಂಜುರಿಗೆ ಒಳಗಾಗಿರುವ ರಾಯುಡು ಸ್ಥಾನಕ್ಕೆ ರಾಬಿನ್​ ಉತ್ತಪ್ಪ ಕಣಕ್ಕಿಳಿಯುವ ಸಾಧ್ಯತೆ ಇದೆ.

ಜಡೇಜಾ ಆಲ್​ರೌಂಡ್ ಪ್ರದರ್ಶನ – CSKಗೆ ಬಂತು ಆನೆಬಲ
ಕಳೆದ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಜಡೇಜಾ ಮತ್ತೆ ಅಬ್ಬರಿಸುವ ಭರವಸೆ ಮೂಡಿಸಿದ್ದಾರೆ. ಮೊಯಿನ್​ ಅಲಿ ಸ್ಥಾನಕ್ಕೆ ಕಣಕ್ಕಿಳಿದಿದ್ದ ಇಮ್ರಾನ್​ ತಾಹೀರ್ ಸೂಪರ್​ ಸ್ಪೆಲ್​ ಮಾಡಿದ್ದಾರೆ. ಹೀಗಾಗಿ ತಂಡದಲ್ಲಿ ಬದಲಾವಣೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ದೀಪಕ್​ ಚಾಹರ್, ಡ್ವೇನ್​ ಬ್ರಾವೋ, ಸ್ಯಾಮ್​ ಕರನ್​ ಅಟ್ಯಾಕಿಂಗ್​ ಬೌಲಿಂಗ್​ ಮಾಡ್ತಿದ್ರೆ, ಶಾರ್ದೂಲ್​ ಠಾಕೂರ್ ಲಯಕ್ಕೆ ಮರಳೋದು ಅನಿವಾರ್ಯವಾಗಿದೆ.

ಸದ್ದು ಮಾಡುತ್ತಿಲ್ಲ ಹೈದ್ರಾಬಾದ್ ತಂಡದ ಬ್ಯಾಟಿಂಗ್​ ವಿಭಾಗ​​
ಡೆಲ್ಲಿ ವಿರುದ್ಧ ಸೂಪರ್​ ಓಪನರ್​​ನಲ್ಲಿ ಸೋತು ಮತ್ತೆ ಪರಾಜಯದ ಹಾದಿ ಹಿಡಿದ ಸನ್ ​​‘ರೈಸ್​’ ಆಗೋ ಪ್ರಯತ್ನದಲ್ಲಿದೆ. ಓಪನಿಂಗ್​​ನಲ್ಲಿ ಡೇವಿಡ್​ ವಾರ್ನರ್​-ಜಾನಿ ಬೈರ್​​ಸ್ಟೋ ಹಾಗೂ 3ನೇ ಕ್ರಮಾಂಕದಲ್ಲಿ ಕೇನ್​ ವಿಲಿಯಮ್ಸನ್​ ಜವಾಬ್ದಾರಿಯುತ ಆಟ ಗಮನ ಸೆಳೆದಿದೆ. ಆದ್ರೆ, ವಿಜಯ್​​ ಶಂಕರ್​, ಕೇದಾರ್​​ ಜಾಧವ್​, ಅಭಿಷೇಕ್​ ಶರ್ಮಾ, ವಿರಾಟ್ ಸಿಂಗ್​​ ಮ್ಯಾಚ್​​ ವಿನ್ನಿಂಗ್​ ಪರ್ಫಾರ್ಮೆನ್ಸ್ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.

ಸಿಎಸ್​ಕೆ ಮುಂದೆ ಮ್ಯಾಜಿಕ್​ ಮಾಡ್ತಾರಾ ರಶೀದ್​​ ಖಾನ್​..?
ಎಸ್​ಆರ್​​ಎಚ್​​ನಲ್ಲಿ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಾಣ್ತಿದ್ರೆ, ಬೌಲಿಂಗ್​ ಉತ್ತಮ ಪ್ರದರ್ಶನ ಮೂಡಿಬರುತ್ತಿದೆ. ಅದ್ಭುತ ಸ್ಪೆಲ್​ನಿಂದಾಗಿ ಬ್ಯಾಟ್ಸ್​​ಮ್ಯಾನ್​ಗಳನ್ನ ಕಾಡ್ತಿರುವ ರಶೀದ್ ಖಾನ್​, ಈ ಪಂದ್ಯದಲ್ಲೂ ಬಲಿಷ್ಠ ಬ್ಯಾಟಿಂಗ್​ಗೆ​​ ಬ್ರೇಕ್​ ನೀಡೋ ಯೋಜನೆ ಹಾಕಿಕೊಂಡಿದ್ದಾರೆ. ಸಿದ್ಧಾರ್ಥ್ ಕೌಲ್, ಖಲೀಲ್​​ ಅಹ್ಮದ್​, ಜಗದೀಶ್​ ಸುಚಿತ್​ ಕೊಂಚ ದುಬಾರಿ ಎನಿಸಿಕೊಂಡಿದ್ದಾರೆ. ಜೊತೆಗೆ ಭುವನೇಶ್ವರ್​ ಇಂದು ಆಡ್ತಾರೋ ಇಲ್ವೋ ಅನ್ನೋದು ಕುತೂಹಲ ಮೂಡಿಸಿದೆ.

ಬಲಾಬಲಗಳ ಹೊರತಾಗಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, ಸಿಎಸ್​​ಕೆ ಮೇಲುಗೈ ಸಾಧಿಸಿದೆ. ಡೆಲ್ಲಿಯಲ್ಲಿ ನಡೆಯೋ ಮೊದಲ ಪಂದ್ಯಕ್ಕೆ ಎರಡೂ ತಂಡಗಳು ಬದಲಾವಣೆಯೊಂದಿಗೆ ಕಣಕ್ಕಿಳಿಯೋ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೂಲ್​​ ಕ್ಯಾಪ್ಟನ್​ ಧೋನಿಗೆ ಅಗ್ರೆಸ್ಸಿವ್​ ಕ್ಯಾಪ್ಟನ್​ ವಾರ್ನರ್​ ಹೇಗೆ ಸವಾಲೊಡ್ಡುತ್ತಾರೆ ಅನ್ನೋ ಕುತೂಹಲ ಹೆಚ್ಚಿದೆ.

The post SRH​​-CSK ಕದನ- ಮಿಡಲ್​ ಆರ್ಡರ್​ ಬ್ಯಾಟಿಂಗ್​ ಚಿಂತೆಯಲ್ಲಿ ಧೋನಿ appeared first on News First Kannada.

Source: newsfirstlive.com

Source link