SRH vs KKR Playing XI IPL 2022: ನೈಟ್​ ರೈಡರ್ಸ್​ಗೆ ಸನ್​ರೈಸರ್ಸ್​ ಸವಾಲು: ಉಭಯ ತಂಡಗಳ ಪ್ಲೇಯಿಂಗ್ 11 | SRH vs KKR Playing XI IPL Sunrisers Hyderabad vs Kolkata knight riders Team players to watch out for in today IPL Match 25 on 15th april In Kannada


SRH vs KKR Playing XI IPL 2022: ನೈಟ್​ ರೈಡರ್ಸ್​ಗೆ ಸನ್​ರೈಸರ್ಸ್​ ಸವಾಲು: ಉಭಯ ತಂಡಗಳ ಪ್ಲೇಯಿಂಗ್ 11

SRH vs KKR

ಐಪಿಎಲ್ 2022 ರ 25ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ . ಎರಡೂ ತಂಡಗಳು ಲೀಗ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ಹೈದರಾಬಾದ್ ತಂಡವು 2 ಸೋಲುಗಳ ಬಳಿಕ ಸತತ 2 ಗೆಲುವು ದಾಖಲಿಸಿ ಕಂಬ್ಯಾಕ್ ಮಾಡಿದೆ. ಮತ್ತೊಂದೆಡೆ ಕೆಕೆಆರ್ ತಂಡವು ಗೆಲುವು-ಸೋಲುಗಳ ಏರಿಳಿತವನ್ನು ಕಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಸನ್‌ರೈಸರ್ಸ್ ಹೈದರಾಬಾದ್ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಕೋಲ್ಕತ್ತಾ ತಂಡ ಐದು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ 11 ನಲ್ಲೂ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

ವಾಷಿಂಗ್ಟನ್ ಸುಂದರ್ ಸ್ಥಾನದಲ್ಲಿ ಯಾರಿಗೆ ಅವಕಾಶ?
ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ನಂತರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲನುಭವಿಸಿತ್ತು. ಆದಾಗ್ಯೂ, ನಂತರ ತಂಡವು ಗುಜರಾತ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ರಾಹುಲ್ ತ್ರಿಪಾಠಿ ಕಳೆದ ಪಂದ್ಯದಲ್ಲಿ ಗಾಯಗೊಂಡು ನಿವೃತ್ತಿ ಹೊಂದಬೇಕಾಯಿತು ಆದರೆ ಅವರ ಗಾಯವು ಗಂಭೀರವಾಗಿರಲಿಲ್ಲ. ಹೀಗಾಗಿ KKR ವಿರುದ್ಧದ ಪಂದ್ಯಕ್ಕೆ ಲಭ್ಯವಿರುತ್ತಾರೆ. ಆದರೆ, ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಮುಂದಿನ ಎರಡು ಪಂದ್ಯಗಳಿಗೆ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರ ಸ್ಥಾನದಲ್ಲಿ ಶ್ರೇಯಸ್ ಗೋಪಾಲ್ ಅಥವಾ ಜಗದೀಶ್ ಸುಚಿತ್ ಅವರಿಗೆ ಅವಕಾಶ ಸಿಗಬಹುದು.

ಆರೋನ್ ಫಿಂಚ್ ಎಂಟ್ರಿ:
ಕೆಕೆಆರ್ ತಂಡಕ್ಕೆ ಆರೋನ್ ಫಿಂಚ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಾಗಲಿದ್ದಾರೆ. ಫಿಂಚ್​ಗೆ ಸ್ಥಾನ ನೀಡಿದರೆ ಸ್ಯಾಮ್ ಬಿಲ್ಲಿಂಗ್ಸ್ ತಂಡದಿಂದ ಹೊರಬೀಳಬಹುದು. ಈ ಒಂದು ಬದಲಾವಣೆಯೊಂದಿಗೆ ಕೆಕೆಆರ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ.

KKR ಪ್ಲೇಯಿಂಗ್ XI – ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಸ್ಯಾಮ್ ಆರೋನ್ ಫಿಂಚ್, ಪ್ಯಾಟ್ ಕಮಿನ್ಸ್, ಸುನಿಲ್ ನರೈನ್, ಉಮೇಶ್ ಯಾದವ್, ರಸಿಖ್ ಸಲಾಮ್, ವರುಣ್ ಚಕ್ರವರ್ತಿ

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI – ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಏಡನ್ ಮಾರ್ಕ್ರಾಮ್, ಶಶಾಂಕ್ ಸಿಂಗ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಉಮ್ರಾನ್ ಮಲಿಕ್, ಟಿ ನಟರಾಜನ್, ಶ್ರೇಯಸ್ ಗೋಪಾಲ್.

TV9 Kannada


Leave a Reply

Your email address will not be published.