
Image Credit source: AFP
ಇದಕ್ಕಾಗಿಯೇ ನಾವು ಇಂಧನಕ್ಕಾಗಿ ಸರದಿಯಲ್ಲಿ ಕಾಯದಂತೆ ನಾವು ಜನರನ್ನು ವಿನಂತಿಸಿದ್ದೇವೆ. ಡೀಸೆಲ್ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ದಯವಿಟ್ಟು ಪೆಟ್ರೋಲ್ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಡಿ. ನಾವು ಪೆಟ್ರೋಲ್ನ ಸೀಮಿತ ದಾಸ್ತಾನುಗಳನ್ನು ಹೊಂದಿದ್ದೇವೆ
ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ (Sri Lanka) ಸರ್ಕಾರ ತಮ್ಮ ಸಮುದ್ರದಲ್ಲಿ ಸುಮಾರು ಎರಡು ತಿಂಗಳ ಕಾಲ ಲಂಗರು ಹಾಕಲಾದ ಪೆಟ್ರೋಲ್ (Petrol) ಹಡಗಿಗೆ ಪಾವತಿಸಲು ವಿದೇಶಿ ವಿನಿಮಯ ಹೊಂದಿಲ್ಲ. ಹಾಗಾಗಿ ಇಂಧನಕ್ಕಾಗಿ “ಸರದಿಯಲ್ಲಿ ಕಾಯಬೇಡಿ” ಎಂದು ನಾಗರಿಕರಿಗೆ ಮನವಿ ಮಾಡಿದೆ. ಆದಾಗ್ಯೂ, ದೇಶವು ಸಾಕಷ್ಟು ಡೀಸೆಲ್ ದಾಸ್ತಾನುಗಳನ್ನು ಸ್ವೀಕರಿಸಿದೆ ಎಂದು ಸರ್ಕಾರ ಹೇಳಿದೆ. ಮಾರ್ಚ್ 28 ರಿಂದ ಪೆಟ್ರೋಲ್ ಹೊಂದಿರುವ ಹಡಗನ್ನು ಶ್ರೀಲಂಕಾದ ನೀರಿನಲ್ಲಿ ಲಂಗರು ಹಾಕಲಾಗಿದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ (Kanchana Wijesekera) ಸಂಸತ್ತಿಗೆ ತಿಳಿಸಿದರು. ದೇಶವು ಪೆಟ್ರೋಲ್ ಲಭ್ಯತೆಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ದೃಢಪಡಿಸಿದ್ದಾರೆ ಎಂದು ಆನ್ಲೈನ್ ಪೋರ್ಟಲ್ ನ್ಯೂಸ್ ಫಸ್ಟ್ ಡಾಟ್ ಎಲ್ ಕೆ ವರದಿ ಮಾಡಿದೆ. “ಪೆಟ್ರೋಲ್ ಪಡೆಯಲು ಹಡಗಿಗೆ ಪಾವತಿಯನ್ನು ಮಾಡಲು ನಮ್ಮ ಬಳಿ ಅಮೆರಿಕನ್ ಡಾಲರ್ಗಳಿಲ್ಲ” ಎಂದು ಅವರು ಹೇಳಿದರು. ಜನವರಿ 2022 ರಲ್ಲಿ ಹಿಂದಿನ ಸಾಗಣೆಯಲ್ಲಿ ಅದೇ ಹಡಗಿಗೆ 53 ಮಿಲಿಯನ್ ಯುಎಸ್ ಡಿ ಬಾಕಿ ಇದೆ ಎಂದು ಅವರು ಹೇಳಿದ್ದಾರೆ. ಎರಡೂ ಪಾವತಿಗಳು ಇತ್ಯರ್ಥವಾಗುವವರೆಗೆ ಹಡಗನ್ನು ಅಲ್ಲಿಂದ ಹೋಗಲು ಸಂಬಂಧಿಸಿದ ಹಡಗು ಕಂಪನಿ ನಿರಾಕರಿಸಿತ್ತು. ಹಿಂದಿನ ಪಾವತಿಯನ್ನು ಮಾಡಲು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನಿಂದ ಭರವಸೆ ನೀಡಿದ ನಂತರ, ಬಾಕಿ ಪಾವತಿ ಮಾಡಿದ ನಂತರ ಪ್ರಸ್ತುತ ಹಡಗನ್ನು ಬಿಡುಗಡೆ ಮಾಡಲು ಕಂಪನಿಯು ಒಪ್ಪಿಕೊಂಡಿದೆ ಎಂದು ವಿಜೆಶೇಖರ ಹೇಳಿದರು. ಆದಾಗ್ಯೂ, “ನಾವು ಈ ಉದ್ದೇಶಕ್ಕಾಗಿ ಇನ್ನೂ ನಿಧಿಯನ್ನು ಸಂಗ್ರಹಿಸಿಲ್ಲ” ಎಂದು ಅವರು ಹೇಳಿದರು. ಬುಧವಾರ ಅಥವಾ ಗುರುವಾರ ಹಡಗನ್ನು ಬಿಡುಗಡೆ ಮಾಡಲು ಸಚಿವಾಲಯವು ಕಾರ್ಯ ಪ್ರವೃತ್ತವಾಗಿದೆ ಎಂದು ಅವರು ಹೇಳಿದ್ದಾರೆ. “ಇದಕ್ಕಾಗಿಯೇ ನಾವು ಇಂಧನಕ್ಕಾಗಿ ಸರದಿಯಲ್ಲಿ ಕಾಯದಂತೆ ನಾವು ಜನರನ್ನು ವಿನಂತಿಸಿದ್ದೇವೆ. ಡೀಸೆಲ್ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ದಯವಿಟ್ಟು ಪೆಟ್ರೋಲ್ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಡಿ. ನಾವು ಪೆಟ್ರೋಲ್ನ ಸೀಮಿತ ದಾಸ್ತಾನುಗಳನ್ನು ಹೊಂದಿದ್ದೇವೆ ಮತ್ತು ಅಗತ್ಯ ಸೇವೆಗಳಿಗೆ, ವಿಶೇಷವಾಗಿ ಆಂಬ್ಯುಲೆನ್ಸ್ಗಳಿಗೆ ಅನುಗುಣವಾಗಿ ಅದನ್ನು ವಿತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು.
“ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಮೂರು-ಚಕ್ರ ವಾಹನಗಳು ದೈನಂದಿನ ಇಂಧನ ಖರೀದಿಯೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂಬುದು ನಮಗರ್ಥವಾಗುತ್ತದೆ . ಬುಧವಾರ ಮತ್ತು ಗುರುವಾರ ಇಂಧನಕ್ಕಾಗಿ ಸರದಿಯಲ್ಲಿ ನಿಲ್ಲದಂತೆ ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.