ತಾರಕ್ ಹಾಗೂ ಚರಣ್ ನಿಮಗೂ ಧನ್ಯವಾದ. ನಾನು ನಿಮಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಅದಕ್ಕೆ ಕ್ಷಮೆ ಇರಲಿ ಎಂದಿರುವ ರಾಜಮೌಳಿ ಈ ಹಾಡಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

‘ಆರ್ಆರ್ಆರ್’ ಚಿತ್ರದಲ್ಲಿ ಜೂ.ಎನ್ಟಿಆರ್, ರಾಮ್ ಚರಣ್
‘ಆರ್ಆರ್ಆರ್’ ಚಿತ್ರದ (RRR Movie) ‘ನಾಟು ನಾಟು..’ ಹಾಡು ಹೊಸ ದಾಖಲೆ ಸೃಷ್ಟಿಸಿದೆ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ನಾಮಿನೇಷನ್ಗೆ ಆಯ್ಕೆ ಆಗಿದೆ. ಈ ಹಾಡಿನ ಜತೆಗೆ ಭಾರತದ ಎರಡು ಕಿರುಚಿತ್ರಗಳು ನಾಮನಿರ್ದೇಶನಗೊಂಡಿವೆ. 95ನೇ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಈಗ ‘ನಾಟು ನಾಟು..’ ಆಸ್ಕರ್ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ರಾಜಮೌಳಿ (SS Rajamouli) ಅವರು ಪ್ರತಿಕ್ರಿಯಿಸಿದ್ದಾರೆ.
‘ನನ್ನ ದೊಡ್ಡಣ್ಣ (ಎಂಎಂ ಕೀರವಾಣಿ) ಅವರು ನನ್ನ ಚಿತ್ರದಲ್ಲಿನ ಹಾಡಿಗೆ ಆಸ್ಕರ್ ನಾಮನಿರ್ದೇಶನ ಪಡೆದಿದ್ದಾರೆ. ನಾನು ಹೆಚ್ಚಿನದನ್ನು ಕೇಳಲಾರೆ. ಚರಣ್ ಹಾಗೂ ತಾರಕ್ಗಿಂತ ಹೆಚ್ಚಿನ ಹುರುಪಿನೊಂದಿಗೆ ನಾಟು ನಾಟು ಹಾಡಿಗೆ ನಾನು ಡಾನ್ಸ್ ಮಾಡುತ್ತಿದ್ದೇನೆ. ಚಂದ್ರ ಬೋಸ್ ಅವರೇ ಅಭಿನಂದನೆಗಳು. ಆಸ್ಕರ್ ವೇದಿಕೆ ಮೇಲೆ ನಮ್ಮ ಹಾಡು’ ಎಂದು ರಾಜಮೌಳಿ ಪತ್ರ ಆರಂಭಿಸಿದ್ದಾರೆ.
ತಾಜಾ ಸುದ್ದಿ
‘ಪ್ರೇಮ್ ಮಾಸ್ಟರ್ ನಿಮಗೆ ನನ್ನ ಧನ್ಯವಾದ. ಹಾಡಿಗೆ ನಿಮ್ಮ ಕೊಡುಗೆ ಬೆಲೆ ಕಟ್ಟಲಾಗದ್ದು. ನನ್ನ ವೈಯಕ್ತಿಕ ಆಸ್ಕರ್ ನಿಮಗೆ ಸಲ್ಲುತ್ತದೆ. ತಾರಕ್ ಹಾಗೂ ಚರಣ್ ನಿಮಗೂ ಧನ್ಯವಾದ. ನಾನು ನಿಮಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಅದಕ್ಕೆ ಕ್ಷಮೆ ಇರಲಿ’ ಎಂದಿರುವ ರಾಜಮೌಳಿ ಈ ಹಾಡಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
#NaatuNaatu #RRRMovie pic.twitter.com/Dvy2qK0qDB
— rajamouli ss (@ssrajamouli) January 24, 2023
‘ನಾನು ಆಸ್ಕರ್ಗಾಗಿ ಎಂದಿಗೂ ಕನಸು ಕಂಡವನಲ್ಲ. ನಾಟು ನಾಟು ಹಾಗೂ ಆರ್ಆರ್ಆರ್ ಚಿತ್ರದ ಅಭಿಮಾನಿಗಳು ಇದರಲ್ಲಿ ನಂಬಿಕೆ ಇಟ್ಟಿದ್ದರು. ಅವರು ನಮ್ಮ ಮನಸ್ಸಿನಲ್ಲಿ ಕಲ್ಪನೆಯನ್ನು ಹುಟ್ಟುಹಾಕಿದರು ಮತ್ತು ನಮ್ಮನ್ನು ಮುಂದಕ್ಕೆ ಹೋಗುವಂತೆ ಬೆಂಬಲಿಸಿದರು. ಹುಚ್ಚು ಅಭಿಮಾನಿಗಳಿಗೆ ನನ್ನ ದೊಡ್ಡ ಅಪ್ಪುಗೆ’ ಎಂದಿದ್ದಾರೆ ರಾಜಮೌಳಿ.