ಬೆಂಗಳೂರು: SSLC ಪರೀಕ್ಷೆ ಮಾದರಿಯನ್ನ ರಾಜ್ಯ ಸರ್ಕಾರ ಪ್ರಕಟ ಮಾಡಿದೆ. ಆರು ವಿಷಯಗಳ ಎರಡು ಪ್ರಶ್ನೆಪತ್ರಿಕೆ ಇರಲಿದ್ದು, ಎರಡು ದಿನ ಪರೀಕ್ಷೆ ನಡೆಯಲಿದೆ. ಬಹು ಆಯ್ಕೆ ಮಾದರಿಯಲ್ಲಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ತಲಾ 40 ಅಂಕಗಳ ಒಟ್ಟು 120 ಅಂಕಗಳ ಎರಡು ಪ್ರಶ್ನೆಪತ್ರಿಕೆ ಇರಲಿದೆ. ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿಯೇ ಪರೀಕ್ಷೆ ನಡೆಸಲಾಗುತ್ತದೆ.

ಹೇಗಿದೆ ಗೈಡ್​​ಲೈನ್ಸ್​..?

 • ಈ ಬಾರಿ 6 ಸಾವಿರಕ್ಕೂ ಅಧಿಕ ಪರೀಕ್ಷಾ ಕೇಂದ್ರ
 • ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಅವಕಾಶ
 • ವಿದ್ಯಾರ್ಥಿಗಳ ನಡುವೆ ಆರು ಅಡಿ ಅಂತರ ಕಡ್ಡಾಯ
 • ಪ್ರತಿ ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 100 ವಿದ್ಯಾರ್ಥಿಗಳಿಗೆ ಅವಕಾಶ
 • ತಲಾ 40 ಅಂಕಗಳ ಒಟ್ಟು 120 ಅಂಕಗಳ ಎರಡು ಪ್ರಶ್ನೆಪತ್ರಿಕೆ ಇರಲಿದೆ. ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿಯೇ ಪರೀಕ್ಷೆ ನಡೆಸಲಾಗುತ್ತದೆ.
 • ಒಟ್ಟು 03 ಕೋರ್​ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆ ಪತ್ರಿಕೆ ನೀಡುವುದು
 • ಬೆಳಗ್ಗೆ 10.30 ರಿಂದ 1.30 ವರೆಗೆ ಪರೀಕ್ಷೆ ನಡೆಯಲಿದೆ
 • ಕೋರ್​ ಮತ್ತು ಭಾಷಾ ವಿಷಯಗಳ ಪರೀಕ್ಷೆಗಳ ನಡುವೆ ಅಂತರ ನೀಡಲಾಗುತ್ತದೆ
  ಉತ್ತರ ಪತ್ರಿಕೆಯು OMR ರೂಪದಲ್ಲಿರುತ್ತದೆ
 • ಜಿಟಿಎಸ್​ (ಜ್ಯುನಿಯರ್ ಟೆಕ್ನಿಕಲ್ ಸ್ಕೂಲ್​) ವಿದ್ಯಾರ್ಥಿಗಳಿಗೆ ರಾಜ್ಯದ 9 ಶಾಲೆಗಳಲ್ಲಿ ಸುಮಾರು 128 ವಿದ್ಯಾರ್ಥಿಗಳಿದ್ದಾರೆ. ಪ್ರ್ಯಾಕ್ಟಿಕಲ್ ಮತ್ತು ಥಿಯೆರಿ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸಲಾಗುತ್ತದೆ.

ಪರೀಕ್ಷಾ ಫಲಿತಾಂಶ:

 • ನಿಯಮಾನುಸಾರ ಯಾರನ್ನೂ ಫೇಲ್ ಮಾಡಲ್ಲ
 • ಅಂಕಗಳ ಆಧಾರದ ಮೇಲೆ ಗ್ರೇಡ್ ನೀಡಲಾಗುತ್ತದೆ
 • 90 ರಿಂದ 100 ಅಂಕ ಪಡೆದ್ರೆ ಎ+ ಗ್ರೇಡ್​
 • 80 ರಿಂದ 89 ಅಂಕ ಪಡೆದ್ರೆ ಎ ಗ್ರೇಡ್
 • 60 ರಿಂದ 79 ವರೆಗೆ ಅಂಕಪಡೆದ್ರೆ ಬಿ ಗ್ರೇಡ್
 • 35 ರಿಂದ 59 ವರೆಗೆ ಸಿ ಗ್ರೇಡ್

 

The post SSLC ಪರೀಕ್ಷಾ ವಿಧಾನದ ಬಗ್ಗೆ ಗೈಡ್​ಲೈನ್ಸ್​ ಪ್ರಕಟ; ಹೇಗೆ ನಡೆಯುತ್ತೆ ಎಕ್ಸಾಂ? appeared first on News First Kannada.

Source: newsfirstlive.com

Source link