ಬೆಂಗಳೂರು: ಈ ತಿಂಗಳ ಕೊನೆಯ ವಾರದಲ್ಲಿ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ವೆಬ್​ಸೈಟ್​ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದೆ. www.sslc.Karnataka.gov.in ಈ ಲಿಂಕ್​​ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಾಗಲಿದೆ.

ಎಲ್ಲ ಅಂದುಕೊಂಡಂತೆ ಆದರೆ ಜುಲೈ 3ನೇ ವಾರ ಪರೀಕ್ಷೆ ಫಿಕ್ಸ್ ಆಗಲಿದೆ ಎನ್ನಲಾಗಿದೆ..ಇನ್ನು ಈ ಹಿಂದೆಯೇ ಸಚಿವ ಸುರೇಶ್ ಕುಮಾರ್ 20 ದಿನಗಳ ಮುಂಚೆ ಪರೀಕ್ಷೆ ದಿನಾಂಕ ಘೋಷಿಸುವುದಾಗಿ ಹೇಳಿದ್ದ್ದಾರೆ.

ಹೇಗಿರಲಿದೆ ಪರೀಕ್ಷೆ..?

ಬಹು ಆಯ್ಕೆಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಮೊದಲ ಪ್ರಶ್ನೆಪತ್ರಿಕೆ ಪ್ರಕಟವಾಗಿದ್ದು ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆಗಳನ್ನ ಹೊಂದಿದೆ. ಮೂರು ಗಂಟೆಗಳ ಕಾಲ ಪರೀಕ್ಷೆ ಜರುಗಲಿದ್ದು ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹುಆಯ್ಕೆಯ ಪ್ರಶ್ನೆಗಳೇ ಆಗಿವೆ. ಉತ್ತರಗಳನ್ನು ಓ ಎಂ ಆರ್ ಶೀಟ್ ನಲ್ಲಿ ನಮೂದಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದ್ದು ಓ ಎಂ ಆರ್ ಶೀಟ್ ಮಾದರಿಯನ್ನೂ ಸಹ ಪ್ರಕಟಿಸಲಾಗಿದೆ.

ಇನ್ನೆರಡು ದಿನದಲ್ಲಿ ಮಾತೃಭಾಷೆ ಸೇರಿ ಮೂರು ವಿಷಯಗಳ ಪ್ರಶ್ನೆಪತ್ರಿಕೆ ಪ್ರಕಟವಾಗಲಿದ್ದು ಪ್ರಶ್ನೆಪತ್ರಿಕೆಗಳನ್ನ ವೆಬ್ ಸೈಟ್​ನಲ್ಲಿ ಡೌನ್​ಲೋಡ್ ಮಾಡಿ ಅಭ್ಯಾಸ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಕರಿಗೂ ಈ ಕುರಿತು ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆ ರಿಲೀಸ್ ಮಾಡಿರೋದು ನೋಡಿದ್ರೆ ಎಸ್ಎಸ್ಎಲ್​ಸಿ ಪರೀಕ್ಷೆ ಬಹುತೇಕ ಶೀಘ್ರವೇ ಫಿಕ್ಸ್ ಆಗಲಿದೆ ಎನ್ನಲಾಗಿದೆ.

The post SSLC ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆ ರಿಲೀಸ್.. ಹೇಗಿರಲಿದೆ ಎಕ್ಸಾಂ..? appeared first on News First Kannada.

Source: newsfirstlive.com

Source link