SSLC ಫಲಿತಾಂಶದ ದಿನಾಂಕ ಫಿಕ್ಸ್, ವಿದ್ಯಾರ್ಥಿಗಳ ಮೊಬೈಲಿಗೆ ಫಲಿತಾಂಶದ ಸಂದೇಶ ರವಾನೆ | SSLC Result Date Fix SSLC Board may send Students results to their phones on may 12


SSLC ಫಲಿತಾಂಶದ ದಿನಾಂಕ ಫಿಕ್ಸ್, ವಿದ್ಯಾರ್ಥಿಗಳ ಮೊಬೈಲಿಗೆ ಫಲಿತಾಂಶದ ಸಂದೇಶ ರವಾನೆ

ಪ್ರಾತಿನಿಧಿಕ ಚಿತ್ರ

Image Credit source: Representational Image. Credit: PTI Image

ಬೆಂಗಳೂರು: ಹಿಜಾಬ್(Hijab) ಗಲಾಟೆ ನಡುವೆಯೇ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ನೆರವೇರಿದೆ. ಸದ್ಯ 2021-22ನೇ ಸಾಲಿನ SSLC ಫಲಿತಾಂಶದ ದಿನಾಂಕ ಫಿಕ್ಸ್? ಮಾಡಲಾಗಿದೆ. ಮೇ 12ರಂದು SSLC ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ಫಲಿತಾಂಶ ಪ್ರಕಟಕ್ಕೆ SSLC ಬೋರ್ಡ್ ನಿಂದ ತಾತ್ಕಾಲಿಕ ಡೇಟ್ ನೀಡಲಾಗಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಮೇ 12ರಂದೇ ಫಲಿತಾಂಶ ಘೋಷಣೆ ಮಾಡಲಾಗುತ್ತೆ. ಕೀ ಉತ್ತರಗಳು ಏ.12ರಿಂದಲೇ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿವೆ. ಆಕ್ಷೇಪಣೆ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲು SSLC ಬೋರ್ಡ್ ನಿರ್ಧರಿಸಿದೆ. ಆಕ್ಷೇಪಣೆ ಬಳಿಕ ಮಾದರಿ ಉತ್ತರಗಳು ಮೌಲ್ಯಮಾಪಕರಿಗೆ ರವಾನಿಸಲಾಗುತ್ತೆ. ಏ.21ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿವೆ.

10 ದಿನಗಳ ಕಾಲ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ಮೌಲ್ಯಮಾಪನದ ಬಳಿಕ ವೆಬ್ ಸೈಟ್ ನಲ್ಲಿ ಅಂಕಗಳ ಅಪ್ಲೋಡ್ ಕಾರ್ಯ ನಡೆಯುತ್ತೆ. ಕಂಪ್ಯೂಟರ್ನಲ್ಲಿ ಅಂಕಗಳ ಫೈನಲೈಸ್ ಮಾಡಲಾಗುತ್ತೆ. ಈ ಕಾರ್ಯ ಮುಗಿದ ಒಂದು ವಾರದಲ್ಲೇ ಫಲಿತಾಂಶ ಪ್ರಕಟವಾಗುತ್ತೆ. ರಾಜ್ಯದ ಒಟ್ಟು 238 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಪ್ರತೀ ಜಿಲ್ಲೆಯಲ್ಲೂ ವಿಷಯವಾರು ಮೌಲ್ಯಮಾಪನ ಕೇಂದ್ರಗಳಿವೆ. ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶದ ಸಂದೇಶ ರವಾನಿಸಲಾಗುತ್ತೆ ಎಂದು ಟಿವಿ9 ಗೆ SSLC ಬೋರ್ಡ್ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published.