ಬೆಂಗಳೂರು: ಕೇಂದ್ರ ಸರ್ಕಾರ ಸಿಬಿಎಸ್​ಇ 12 ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಿದ ಬೆನ್ನಲ್ಲೇ ಇಂದು ಸುದ್ದಿಗೋಷ್ಠಿ ಕರೆದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್.. ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಹೇಳಿದರು. ಅಲ್ಲದೇ ಜುಲೈ 3 ನೇ ವಾರದಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯ ಮುಖ್ಯಾಂಶಗಳು..

  1. ಎಸ್ಎಸ್​ಎಲ್​ಸಿ ಪರೀಕ್ಷೆ ವಿಚಾರದಲ್ಲೂ ಬೇಕು, ಬೇಡ ಎಂಬ ಅಭಿಪ್ರಾಯಗಳು ಕೇಳಿಬರ್ತಿವೆ.
  2. ಆದರೆ ನಾವು ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರದ್ದು ಮಾಡಲಾಗುವುದಿಲ್ಲ.
  3. ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ.
  4. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿದಂತೆ ಒಂದು ಪರೀಕ್ಷೆ ನಡೆಯಲಿದೆ..
  5. ಭಾಷೆಗಳ ವಿಷಯದ ಪರೀಕ್ಷೆ ಮತ್ತೊಂದು ಹಂತದಲ್ಲಿ ನಡೆಯಲಿದೆ.
  6. ಮಲ್ಟಿ ಚಾಯ್ಸ್ ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳು ಸರಳವಾಗಿ ನೇರವಾಗಿ ಇರುತ್ತವೆ.
  7. ಒಂದು ಕೊಠಡಿಗೆ 10-12 ಮಂದಿ ಕೂರಿಸುತ್ತೇವೆ.
  8. ಎಲ್ಲ ಮಕ್ಕಳಿಗೂ ಎನ್​-95 ಮಾಸ್ಕ್ ನೀಡುತ್ತೇವೆ.
  9. ಪರೀಕ್ಷೆಗೂ 20 ದಿನಗಳ ಮೊದಲು ವೇಳಾಪಟ್ಟಿ ಪ್ರಕಟಿಸುತ್ತೇವೆ.

The post SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಲ್ಲ- ಸುರೇಶ್ ಕುಮಾರ್ appeared first on News First Kannada.

Source: newsfirstlive.com

Source link