ಕೊರೊನಾ ಮೊದಲನೇ ಅಲೆ ವಿಶ್ವದಾದ್ಯಂತ ಅಪ್ಪಳಿಸಿದ್ದಾಗಿಂದಲೂ ನಟ ಸೋನು ಸೂದ್​ ಭಾರತೀಯರಿಗೆ ಆಪತ್ಭಾದವರಾಗಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಬಹಳಷ್ಟು ಜನರಿಗೆ ತಾವೇ ಖುದ್ದಾಗಿ ನಿಂತು ನೆರವು ನೀಡಿದ್ದಾರೆ. ಊಟ ಇಲ್ಲದವರಿಗೆ ಊಟ ನೀಡಿ, ವಲಸಿಗರು ತಮ್ಮ ಮನೆ ಸೇರಿಕೊಳ್ಳುವುದಕ್ಕೂ ಸೋನು ಸೂದ್​ ಮಾಡಿರುವ ಸಹಾಯ ಮೆಚ್ಚುವಂತದ್ದು. ಇದೀಗ ಮತ್ತೆ ತಮ್ಮ ಸಹಾಯ ಹಸ್ತ ಚಾಚಿರುವ ಸೋನು ಸೂದ್​, ಭಾರತಕ್ಕೆ ಆಕ್ಸಿಜನ್​ ಪೂರೈಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ.

ಹೌದು.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೋನು, ‘ಎಲ್ಲರೂ ಧೈರ್ಯವಾಗಿರಿ. ನಿಮ್ಮೆಲ್ಲರಿಗೂ ನಾನು ಆಕ್ಸಿಜನ್​ ತರುತ್ತಿದ್ದೇನೆ’ ಅಂದಿದ್ದಾರೆ. ಕೊರೊನಾ ಶುರುವಾದಗಿನಿಂದಲೂ ಸೋನು ಸೂದ್​​ ಇದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕ ಫೋನ್​ ನಂಬರ್​ ಇಟ್ಟುಕೊಂಡಿರುವ ಸೋನು ಸೂದ್​ ಹಾಗೂ ತಂಡ, ಸಹಾಯಕ್ಕಾಗಿ ಈ ನಂಬರ್​ ಸಂಪರ್ಕಿಸುವಂತೆ ತಿಳಿಸಿದೆ. ಇದೀಗ ಭಾರತದಲ್ಲಿ ಆಕ್ಸಿಜನ್​ ಅಭಾವ ಎದುರಾಗಿದ್ದು, ಈ ವಿಚಾರದಲ್ಲೂ ನಟ ಸೋನು ಸೂದ್​ ಮತ್ತೆ ಎಲ್ಲಾ ಭಾರತೀಯರಿಗೂ ಹೀರೋ ಆಗಿದ್ದಾರೆ.

ಕೊರೊನಾ ಸಮಯದಲ್ಲಿ ಬೇರೆ ರಾಜ್ಯಗಳಲ್ಲಿ ಬಾಕಿಯಾಗಿದ್ದ ವಲಸೆ ಕಾರ್ಮಿಕರನ್ನ ಅವರವರ ರಾಜ್ಯಗಳಿಗೆ ಬಸ್ಸು, ಟ್ರೈನ್​ ಹತ್ತಿ ತಲುಪಿಸಿದ್ದು ಸೋನು ಸೂದ್​. ಸೋನುಗಾಗಿ ತೆಲಂಗಾಣ ರಾಜ್ಯದಲ್ಲಿ ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಸೋನು ಸಿನಿಮಾಗಳಿಂದ ಅಭಿಮಾನಿಗಳನ್ನ ಸಂಪಾದಿಸಿದ್ದಾರೋ ಗೊತ್ತಿಲ್ಲ, ಆದ್ರೆ ಅವರ ಈ ಮಹತ್ಕಾರ್ಯದಿಂದ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಮುಂಬೈ, ದೆಹಲಿ ಎನ್ನದೇ ರಾಜ್ಯದ ಮೂಲೆ ಮೂಲೆಗೂ ಸೋನು ನೆರವಿನ ಹಸ್ತ ಚಾಚುತ್ತಿದ್ದಾರೆ. ಸಾಮಾನ್ಯರಿಗಷ್ಟೇ ಅಲ್ಲದೇ ಪೊಲೀಸರ ನೆರವಿಗೂ ನಿಂತಿದ್ದಾರೆ. ​ ಇದೇ ಕಾರಣಕ್ಕೆ ಖ್ಯಾತ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪುತ್ರ ವಿಹಾನ್​, ಸೋನು ಸೂದ್​ ಚಿತ್ರ ಬಿಡಿಸಿ ‘ಕೊರೊನಾ ಹೀರೋ’ ಅನ್ನೋ ಟೈಟಲ್​ ಕೂಡ ನೀಡಿದ್ದರು.

The post Stay strong India ನನ್ನ ಕಡೆಯಿಂದ ಬರ್ತಿರೋ ಆಕ್ಸಿಜೆನ್ ಆನ್ ದಿ ವೇ ಇದೆ -ಸೋನು ಸೂದ್​ appeared first on News First Kannada.

Source: newsfirstlive.com

Source link