Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000ಕ್ಕೂ ಹೆಚ್ಚು, ನಿಫ್ಟಿ 300ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ | Sensex Down More Thank 1000 Points And Nifty Fall 330 Points On February 7th


Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000ಕ್ಕೂ ಹೆಚ್ಚು, ನಿಫ್ಟಿ 300ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ

ಸಾಂದರ್ಭಿಕ ಚಿತ್ರ

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 7ನೇ ತಾರೀಕಿನ ಸೋಮವಾರದಂದು 1200 ಪಾಯಿಂಟ್ಸ್​​ನಷ್ಟು ಇಳಿಕೆ ಕಂಡಿತ್ತು. ಇನ್ನು ನಿಫ್ಟಿ ಸೂಚ್ಯಂಕವು 300ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದಿದೆ. ಕ್ಯಾಪಿಟಲ್​ ಗೂಡ್ಸ್, ಎಫ್​ಎಂಸಿಜಿ, ವಾಹನ ಸೂಚ್ಯಂಕಗಳು ಮಾರುಕಟ್ಟೆ ಇಳಿಕೆಗೆ ಪ್ರಮುಖ ಕಾರಣವಾಗಿದ್ದರೆ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಗಳಿಕೆ ಕಂಡಿತ್ತು. ವಲಯವಾರು ನೋಡುವುದಾದರೆ, ತೈಲ ಮತ್ತು ಅನಿಲ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು, ಲೋಹ ಮತ್ತು ವಿದ್ಯುತ್ ಹೊರತುಪಡಿಸಿ ಎಲ್ಲ ಇತರ ವಲಯಗಳಾದ ವಾಹನ, ಎಫ್​ಎಂಸಿಜಿ, ಮಾಹಿತಿ ತಂತ್ರಜ್ಞಾನ, ಬ್ಯಾಂಕ್, ಹೆಲ್ತ್​ಕೇರ್​, ರಿಯಾಲ್ಟಿ, ಕ್ಯಾಪಿಟಲ್​ ಗೂಡ್ಸ್ ಶೇ 1ರಿಂದ ಶೇ 2ರಷ್ಟು ಇಳಿಕೆ ಆಗಿತ್ತು.

ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1,103.82 ಪಾಯಿಂಟ್ಸ್ ಅಥವಾ ಶೇ 1.88ರಷ್ಟು ಇಳಿಕೆ ಆಗಿ, 57,541 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 320.50 ಪಾಯಿಂಟ್ಸ್ ಅಥವಾ ಶೇ 1.83ರಷ್ಟು ಕುಸಿದು, 17,195.80 ಪಾಯಿಂಟ್ಸ್​ನಲ್ಲಿ ವ್ಯವಹಾರ ಆಗುತ್ತಿತ್ತು. ನಿಫ್ಟಿ ಬ್ಯಾಂಕ್ 827.20 ಪಾಯಿಂಟ್ಸ್ ಅಥವಾ ಶೇ 2.13ರಷ್ಟು ಇಳಿದು, 37,962.15 ಪಾಯಿಂಟ್ಸ್​ನಲ್ಲಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಪವರ್​ ಗ್ರಿಡ್ ಕಾರ್ಪೊರೇಷನ್ ಶೇ 1.57

ಒಎನ್​ಜಿಸಿ ಶೇ 1.44

ಎನ್​ಟಿಪಿಸಿ ಶೇ 0.52

ಟಾಟಾ ಸ್ಟೀಲ್ ಶೇ 0.34

ಎಸ್​ಬಿಐ ಶೇ 0.17

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಎಚ್​ಡಿಎಫ್​ಸಿ ಬ್ಯಾಂಕ್​ ಶೇ -4.14

ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -3.87

ಬಜಾಜ್ ಫೈನಾನ್ಸ್ ಶೇ -3.40

ಎಚ್​ಡಿಎಫ್​ಸಿ ಲೈಫ್ ಶೇ-3.36

ಬಜಾಜ್ ಫಿನ್​ಸರ್ವ್​ ಶೇ -3.28

TV9 Kannada


Leave a Reply

Your email address will not be published.