Sugar Export Ban: ಸಕ್ಕರೆ ರಫ್ತು ನಿರ್ಬಂಧ ಒಂದು ವರ್ಷ ಮುಂದುವರಿಕೆ; ಕಾರಣ ಇಲ್ಲಿದೆ – Government extends curbs on sugar exports by one year till 2023 October 31 to curb price rise business news in Kannada


ಸಕ್ಕರೆ ರಫ್ತಿನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ 2023ರ ಅಕ್ಟೋಬರ್ 31ರ ವರೆಗೆ ವಿಸ್ತರಿಸಿದೆ.

Sugar Export Ban: ಸಕ್ಕರೆ ರಫ್ತು ನಿರ್ಬಂಧ ಒಂದು ವರ್ಷ ಮುಂದುವರಿಕೆ; ಕಾರಣ ಇಲ್ಲಿದೆ

ಸಾಂದರ್ಭಿಕ ಚಿತ್ರ

Image Credit source: Reuters

ನವದೆಹಲಿ: ಸಕ್ಕರೆ ರಫ್ತಿನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು (Sugar Export Ban) ಕೇಂದ್ರ ಸರ್ಕಾರ 2023ರ ಅಕ್ಟೋಬರ್ 31ರ ವರೆಗೆ ವಿಸ್ತರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಪ್ರಮಾಣ ಹೆಚ್ಚಿಸುವುದು ಮತ್ತು ಬೆಲೆ ಏರಿಕೆ ತಡೆಯುವುದಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈ ಹಿಂದೆ ಈ ವರ್ಷ ಅಕ್ಟೋಬರ್ 31ರ ವರೆಗೆ ಸಕ್ಕರೆ ರಫ್ತಿನ ಮೇಲೆ ಕೇಂದ್ರ ನಿರ್ಬಂಧ ಹೇರಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಹಿಂದಿನ ಅಧಿಸೂಚನೆಯಲ್ಲಿ ಸರ್ಕಾರ ತಿಳಿಸಿತ್ತು.

‘ಸಕ್ಕರೆಯ ರಫ್ತಿನ ಮೇಲೆ (ಕಚ್ಚಾ, ಸಂಸ್ಕರಿತ ಹಾಗೂ ಬಿಳಿ ಸಕ್ಕರೆ) ವಿಧಿಸಲಾಗಿದ್ದ ನಿರ್ಬಂಧವನ್ನು 2023ರ ಅಕ್ಟೋಬರ್ 31ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ವಿಸ್ತರಿಸಲಾಗಿದೆ. ಇತರ ಷರತ್ತುಗಳು ಈಗಿರುವಂತೆಯೇ ಮುಂದುವರಿಯಲಿವೆ’ ಎಂದು ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶನಾಲಯದ (DGFT) ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಯುರೋಪ್, ಅಮೆರಿಕಕ್ಕೆ ರಫ್ತು ಮಾಡಬಹುದು

ಸಿಎಲ್​ಕ್ಯೂ ಹಾಗೂ ಟಿಆರ್​ಕ್ಯೂ (ಟಾರಿಫ್ ರೇಟ್ ಕೋಟಾ) ತೆರಿಗೆ ವಿನಾಯಿತಿ ಕೋಟಾ ಅಡಿಯಲ್ಲಿ ಬರುವ, ಯುರೋಪ್ ಒಕ್ಕೂಟ, ಅಮೆರಿಕಗಳಿಗೆ ರಫ್ತು ಮಾಡುವುದಕ್ಕೆ ಈ ನಿರ್ಬಂಧಗಳು ಅನ್ವಯವಾಗುವುದಿಲ್ಲ ಎಂದೂ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

TV9 Kannada


Leave a Reply

Your email address will not be published.