ಸೂರ್ಯ ಗ್ರಹಣ (ಸಂಗ್ರಹ ಚಿತ್ರ)
ಅಮಾವಾಸ್ಯೆಯ ದಿನ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ. ಈ ವರ್ಷದ ಎರಡನೇ ಸೂರ್ಯಗ್ರಹಣ (Solar Eclipse 2021) ಮತ್ತು 2021ರ ಕೊನೆಯ ಸೂರ್ಯಗ್ರಹಣವು ಶನಿವಾರ, ಡಿಸೆಂಬರ್ 4 ರಂದು ಸಂಭವಿಸಲಿದೆ. ಈ ಗ್ರಹಣ ಸುಮಾರು 4 ಗಂಟೆಗಳ ಕಾಲ ಇರಲಿದೆ. ಸೂರ್ಯಗ್ರಹಣವು ಬೆಳಿಗ್ಗೆ 10:59 ರಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 3:7 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಿಗೆ ಗೋಚರವಾಗಲಿದೆ. ಭೂಮಿಯ ಮೇಲ್ಮೈಯಲ್ಲಿ ಸೂರ್ಯಗ್ರಹಣದ ಹಾದಿಯನ್ನು ಪತ್ತೆಹಚ್ಚುವ ನಕ್ಷೆಯನ್ನು ನಾಸಾ ಬಿಡುಗಡೆ ಮಾಡಿದ್ದು, ಇದರ ಆಧಾರದಲ್ಲಿ ಡಿಸೆಂಬರ್ 4 ರ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ.
ಈ ವರ್ಷದ ಕೊನೆಯ ಸೂರ್ಯಗ್ರಹಣ (Total solar eclipse 2021)
2021 ರ ಕೊನೆಯ ಸೂರ್ಯಗ್ರಹಣವು ಈ ಮೊದಲು ಅಂದರೆ ಇದೇ ವರ್ಷ ಜೂನ್ 10 ರಂದು ಸಂಭವಿಸಿದ ಮಾದರಿಯಲ್ಲಿಯೇ ಇರಲಿದೆ. ಬೆಳಿಗ್ಗೆ 10.59ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 12:30 ಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. 01:03 ಕ್ಕೆ ಗರಿಷ್ಠವಾಗಿರುತ್ತದೆ ಮತ್ತು 01:36 ಕ್ಕೆ ಕೊನೆಗೊಳ್ಳುತ್ತದೆ. ಅಂತಿಮವಾಗಿ 3.07ಕ್ಕೆ ಮುಕ್ತಾಯವಾಗುತ್ತದೆ.
ಸೂರ್ಯಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿರುತ್ತದೆ? (Surya Grahan Effect on Zodiac Signs)
ಡಿಸೆಂಬರ್ 4ನೇ ತಾರೀಕು ಸಂಭವಿಸುವ ಸೂರ್ಯಗ್ರಹಣವು ಜೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಈ ಗ್ರಹಣ ತಲಾ 4 ರಾಶಿಗಳಿಗೆ ಶುಭ, ಅಶುಭ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಮೊದಲುಗೊಂಡು 3, 6, 10 ಹಾಗೂ 11ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆಯೋ ಅಂಥವರಿಗೆ ಶುಭ ಆಗುತ್ತದೆ. ಕನ್ಯಾ, ಮಿಥುನ, ಕುಂಭ ಹಾಗೂ ಮಕರ ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತದೆ. ಇನ್ನು ಅಶುಭ ಫಲಗಳು 1, 4, 8, 12ನೇ ರಾಶಿಯಾಗುವ ವೃಶ್ಚಿಕ, ಸಿಂಹ, ಮೇಷ ಹಾಗೂ ಧನುಸ್ಸು ರಾಶಿಯವರಿಗೆ ಇರಲಿದೆ. 2, 5, 7 ಹಾಗೂ 9ನೇ ಮನೆ ಆಗುವ ತುಲಾ, ಕರ್ಕಾಟಕ, ವೃಷಭ ಮತ್ತು ಮೀನ ರಾಶಿಯವರಿಗೆ ಮಿಶ್ರ ಫಲ ಇರಲಿದೆ.