Suryakumar Yadav: ಧೋನಿ, ಕೊಹ್ಲಿ, ರೋಹಿತ್​ರೊಂದಿಗೆ ವಿಶೇಷ ಸ್ಥಾನ ಹಂಚಿಕೊಳ್ಳಲು ತಯಾರಾದ ಸೂರ್ಯಕುಮಾರ್ | Suryakumar yadav will score the 24th run off his bat, he will become the 9th Indian batter with 1000 runs in the shortest format


India vs South Africa: ಅಕ್ಟೋಬರ್ 2 ರಂದು ಭಾನುವಾರ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ- ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಇದರಲ್ಲಿ ಸೂರ್ಯಕುಮಾರ್ ಹೊಸ ಮೈಲಿಗಲ್ಲು ತಲುಪುವ ಅವಕಾಶವಿದೆ.

ಭಾರತ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಟಿ20 ಸರಣಿ ಆಡುತ್ತಿದೆ. ಮೊದಲ ಟಿ20 ಮುಕ್ತಾಯಗೊಂಡಿದ್ದು ತಿರುವನಂತಪುರಂನ ಗ್ರೀನ್​ಫೀಲ್ಡ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್ ಮಿಂಚಿದರೆ, ಬ್ಯಾಟಿಂಗ್​ನಲ್ಲಿ ಕೆಎಲ್ ರಾಹುಲ್ (KL Rahul) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಬೊಂಬಾಟ್ ಆಟವಾಡಿದರು. ಅದರಲ್ಲೂ ಸೂರ್ಯ ಕೇವಲ 33 ಎಸೆತಗಳಲ್ಲಿ 5 ಫೋರ್, 3 ಸಿಕ್ಸರ್ ಬಾರಿಸಿ ಅಜೇಯ 50 ರನ್ ಚಚ್ಚಿದರು. ಇದರ ಜೊತೆಗೆ ಕೆಲ ದಾಖಲೆಗಳನ್ನೂ ನಿರ್ಮಿಸಿದರು. ಇದೀಗ ಭಾರತ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಲ್ಲೂ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.

ಅಕ್ಟೋಬರ್ 2 ರಂದು ಭಾನುವಾರ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ- ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಇದರಲ್ಲಿ ಸೂರ್ಯಕುಮಾರ್ ಹೊಸ ಮೈಲಿಗಲ್ಲು ತಲುಪುವ ಅವಕಾಶವಿದೆ. ಇನ್ನೂ 24 ರನ್​ ಗಳಿಸಿದರೆ ವರ್ಷವೊಂದರಲ್ಲಿ 1000 ರನ್​ ಪೂರೈಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ 2018 ರಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್​ ಧವನ್​ 689 ರನ್​ ಬಾರಿಸಿ ಕ್ಯಾಲೆಂಡರ್​ ವರ್ಷದಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದರು. ಇದೀಗ ಸೂರ್ಯಕುಮಾರ್​ ಯಾದವ್​ ಆ ದಾಖಲೆ ಮೀರಿದ್ದು, 1 ಸಾವಿರ ರನ್​ ಸನಿಹದಲ್ಲಿದ್ದಾರೆ.

ಸದ್ಯ ಸೂರ್ಯಕುಮಾರ್ 32 ಟಿ20 ಪಂದ್ಯಗಳಿಂದ 976 ರನ್ ಕಲೆಹಾಕಿದ್ದಾರೆ. 1000 ರನ್ ಪೂರೈಸಿದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ಜೊತೆ 1000 ರನ್​ಗಳ ಸರದಾರರ ಪಟ್ಟಿಗೆ ಸೇರಲಿದ್ದಾರೆ. ಇದಕ್ಕೆ 24 ರನ್​ಗಳು ಬೇಕಷ್ಟೆ. ಹೀಗಾದಲ್ಲಿ 1000 ರನ್​ಗಳ ಗಡಿ ಮುಟ್ಟಿದ ಭಾರತ 9ನೇ ಬ್ಯಾಟರ್ ಸೂರ್ಯ ಆಗಲಿದ್ದಾರೆ. ಈ ಸಾಲಿನಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದು 140 ಪಂದ್ಯಗಳಿಂದ 3694 ರನ್ ಗಳಿಸಿದ್ದಾರೆ. ಕೊಹ್ಲಿ 108 ಪಂದ್ಯಗಳಿಂದ 3663 ರನ್ ಕಲೆಹಾಕಿದ್ದಾರೆ. ಮೂರನೇ ಸ್ಥಾನದಲ್ಲಿ ಕೆಎಲ್ ರಾಹುಲ್ ಅವರಿದ್ದು 2080 ರನ್ ಬಾರಿಸಿದ್ದಾರೆ.

TV9 Kannada


Leave a Reply

Your email address will not be published.