Suryakumar Yadav: ಸ್ಫೋಟಕ ಅರ್ಧಶತಕ ಸಿಡಿಸಿದ ವೇಳೆ ವಿಚಿತ್ರವಾಗಿ ಸೆಲೆಬ್ರೇಷನ್ ಮಾಡಿದ ಸೂರ್ಯಕುಮಾರ್ ಯಾದವ್ | Suryakumar Yadav special celebrations were as stylish as his shot making in 3rd T20 Viral Video


Suryakumar Yadav: ಸ್ಫೋಟಕ ಅರ್ಧಶತಕ ಸಿಡಿಸಿದ ವೇಳೆ ವಿಚಿತ್ರವಾಗಿ ಸೆಲೆಬ್ರೇಷನ್ ಮಾಡಿದ ಸೂರ್ಯಕುಮಾರ್ ಯಾದವ್

Suryakumar Yadav Celebration IND vs WI 3rd T20

ಭಾರತ ಕ್ರಿಕೆಟ್ ತಂಡದಲ್ಲಿ ಅದೆಷ್ಟೋ ಸಮಯದಿಂದ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಜಿಕೊಂಡ ಸೂರ್ಯ ಆಡಿದ ಬಹುತೇಕ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಇವರ ಆಟ ಬೊಂಬಾಟ್ ಆಗಿ ಸಾಗಿತು. ಇದಕ್ಕಾಗಿಯೇ ಪಂದ್ಯಶ್ರೇಷ್ಠ ಜೊತೆಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡರು. ಅದರಲ್ಲೂ ಭಾನುವಾರ ನಡೆದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಮೊತ್ತ 180 ತಲುಪಲು ಸೂರ್ಯಕುಮಾರ್ ಸ್ಫೋಟಕ ಆಟ ಪ್ರಮುಖ ಕಾರಣ. ಪವರ್‌ ಪ್ಲೇಯಲ್ಲಿ 1 ವಿಕಟ್​ಗೆ 43 ರನ್‌, 15 ಓವರ್‌ಗಳಲ್ಲಿ 4 ವಿಕೆಟ್​ಗೆ ಕೇವಲ 98 ರನ್‌ ಗಳಿಸಿದ್ದ ಭಾರತ ತಂಡದ ಮೊತ್ತ 184ರ ವರೆಗೆ ಸಾಗುತ್ತದೆಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಇದಕ್ಕೆ ಕಾರಣವಾಗಿದ್ದು ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಸೂರ್ಯಕುಮಾರ್‌ ಯಾದವ್ ಮತ್ತು ಇವರಿಗೆ ಸಾಥ್ ನೀಡಿದ ವೆಂಕಟೇಶ್‌ ಅಯ್ಯರ್‌ (Venkatesh Iyer) ಆಟ. 5ನೇ ವಿಕೆಟಿಗೆ ಈ ಜೋಡಿ ಕೇವಲ 37 ಎಸೆತಗಳಿಂದ 91 ರನ್‌ ರಾಶಿ ಹಾಕಿತು ಎಂದರೆ ನಂಬಲೇಬೇಕು.

ಹೌದು, ರುತುರಾಜ್ ಗಾಯಕ್ವಾಡ್ (4), ರೋಹಿತ್ ಶರ್ಮಾ (7) ಇಶಾನ್ ಕಿಶನ್ (34 ರನ್) ಮತ್ತು ಶ್ರೇಯಸ್ ಅಯ್ಯರ್ (25) ಒಂದುಕಡೆ ಬೇಗನೆ ಔಟಾಗಿದ್ದರಿಂದ ಕತ್ತಲು ಆವರಿಸಿದ್ದ ಟೀಮ್ ಇಂಡಿಯಾಕ್ಕೆ ಸೂರ್ಯಕುಮಾರ್ ಬೆಳಕಾದರು. ವಿಂಡೀಸ್ ತಂಡದ ಆರು ಬೌಲರ್‌ಗಳ ಎಸೆತಗಳನ್ನೂ ಪುಡಿಗಟ್ಟಿದ ಸೂರ್ಯ ಮತ್ತು ವೆಂಕಟೇಶ್ ಆಟ ರಂಗೇರಿತು. ಅದರಲ್ಲೂ ಸೂರ್ಯಕುಮಾರ್ ಅವರ ಅಬ್ಬರಕ್ಕೆ ನಲುಗಿದ ವೆಸ್ಟ್ ಇಂಡೀಸ್ ಬೌಲರುಗಳು ಕೊನೆಯ 5 ಓವರ್​ಗಳಲ್ಲಿ ನೀಡಿದ್ದು ಬರೋಬ್ಬರಿ 86 ರನ್​ಗಳು. ಡೆತ್​ ಓವರ್​ಗಳಲ್ಲಿ (16-20) ಟೀಮ್ ಇಂಡಿಯಾ ಕಲೆಹಾಕಿದ ಗರಿಷ್ಠ ಸ್ಕೋರ್ ಇದಾಗಿದೆ.

ಪಂದ್ಯದ ಅಂತಿಮ ಎಸೆತದಲ್ಲಿ ಔಟಾದ ಸೂರ್ಯಕುಮಾರ್‌ ಯಾದವ್‌ 31 ಎಸೆತಗಳಿಂದ 65 ರನ್‌ ಸಿಡಿಸಿದರು. ಇದರಲ್ಲಿ 7 ಪ್ರಚಂಡ ಸಿಕ್ಸರ್‌ ಒಳಗೊಂಡಿತ್ತು. ಬೌಂಡರಿ ಒಂದು ಮಾತ್ರ. ಇದು ಸೂರ್ಯಕುಮಾರ್‌ ಅವರ 4ನೇ ಅರ್ಧ ಶತಕ. ಅದರಲ್ಲೂ ಸೂರ್ಯಕುಮಾರ್ ಅರ್ಧಶತಕ ಸಿಡಿಸಿದ ವೇಳೆ ಅವರು ಮಾಡಿದ ಸೆಲೆಬ್ರೇಷನ್ ಮಾತ್ರ ವಿಚಿತ್ರವಾಗಿತ್ತು. ಬ್ಯಾಟ್ ಮೇಲೆತ್ತಿದ ಬಳಿಕ ಬ್ಯಾಟ್ ಹಿಡಿದುಕೊಂಡೆ ಪೆವಿಲಿಯನ್ ಕಡೆ ಎರಡೂ ಕೈಗಳಿಂದ ನಮಸ್ಕರಿಸಿ ವಿಶೇಷವಾಗಿ ಸಂಭ್ರಮಾಚರಣೆ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಯಾದವ್​ಗೆ ಸಾಥ್ ನೀಡಿದ ಹಾರ್ಡ್‌ ಹಿಟ್ಟರ್‌ ವೆಂಕಟೇಶ್‌ ಅಯ್ಯರ್‌ 19 ಎಸೆತಗಳಿಂದ 35 ರನ್‌ ಮಾಡಿ ಅಜೇಯರಾಗಿ ಉಳಿದರು. ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. ಇವರಿಬ್ಬರು ಸೇರಿ ಕೊನೆಯ 5 ಓವರ್‌ಗಳಲ್ಲಿ 7 ಸಿಕ್ಸರ್‌, 7 ಬೌಂಡರಿ ಬಾರಿಸಿ ಟಿ20 ಕ್ರಿಕೆಟ್​ನ ನೈಜ ರೋಮಾಂಚನವನ್ನು ತೋರ್ಪಡಿಸಿದರು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಅವರ ಸ್ಟ್ರೈಕ್‌ರೇಟ್ 209.68 ಆಗಿತ್ತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯಕುಮಾರ್, ಮೊದಲ ಪಂದ್ಯದಲ್ಲಿ ನಾನು ಯಾವರೀತಿ ಆಟ ಆಡಿದೆನೊ ಅದೇರೀತಿಯಲ್ಲಿ ಇಂದುಕೂಡ ಬ್ಯಾಟಿಂಗ್ ಮಾಡಲು ತೀರ್ಮಾನಿಸಿದೆ. ರೋಹಿತ್ ಔಟಾದ ಬಳಿಕ ಸವಾಲಿನ ಮೊತ್ತ ಕಲೆಹಾಕಲು ಕ್ರೀಸ್​ನಲ್ಲಿ ನಿಂತುಕೊಳ್ಳುವ ಒಬ್ಬ ಆಟಗಾರನ ಅವಶ್ಯತೆಯಿತ್ತು. ಪಂದ್ಯ ಆರಂಭಕ್ಕೂ ಮುನ್ನ ನಡೆದ ಟೀಮ್ ಮೀಟಿಂಗ್​ನಲ್ಲೂ ಇದರ ಬಗ್ಗೆ ಚರ್ಚಿಸಿದ್ದೆವು. ಅಲ್ಲಿ ಹೇಳಿದ ಮಾತುಗಳು ಇಲ್ಲಿ ಸಹಕಾರಿ ಆಯಿತು. ನಾನೀಗ ಮುಂದಿನ ಪಂದ್ಯವನ್ನು ಎದುದು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

IND vs WI T20: ಪಂದ್ಯದ ಗತಿಯನ್ನೇ ಬದಲಾಯಿಸಿತು ಡೈವ್ ಬಿದ್ದು ಇಶಾನ್ ಕಿಶನ್ ಹಿಡಿದ ಈ ರೋಚಕ ಕ್ಯಾಚ್

Rohit Sharma: ಪಂದ್ಯ ಮುಗಿದ ಬಳಿಕ ಖುಷಿಯಲ್ಲಿ ರೋಹಿತ್ ಶರ್ಮಾ ಆಡಿದ ಮಾತು ನೀವೇ ಕೇಳಿ

TV9 Kannada


Leave a Reply

Your email address will not be published. Required fields are marked *