Syed Mushtaq Ali Trophy: ನಿರ್ಣಾಯಕ ಪಂದ್ಯಕ್ಕೆ ಕರ್ನಾಟಕ ತಂಡದ ನಾಲ್ವರು ಅಲಭ್ಯ | Syed Mushtaq Ali Trophy: Karnataka to miss out in Padikkal,Agarwal


Syed Mushtaq Ali Trophy: ನಿರ್ಣಾಯಕ ಪಂದ್ಯಕ್ಕೆ ಕರ್ನಾಟಕ ತಂಡದ ನಾಲ್ವರು ಅಲಭ್ಯ

ಸಾಂದರ್ಭಿಕ ಚಿತ್ರ

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ವೇದಿಕೆ ಸಿದ್ದವಾಗಿದೆ. ಮಂಗಳವಾರ ನಡೆಯಲಿರುವ ಪ್ರೀ ಕ್ವಾರ್ಟರ್​ನ 3ನೇ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಕರ್ನಾಟಕ ತಂಡದ ಪ್ರಮುಖ ಆಟಗಾರರು ಅಲಭ್ಯರಾಗಲಿದ್ದಾರೆ. ಅದರಂತೆ ನಿರ್ಣಾಯಕ ಪಂದ್ಯದಲ್ಲಿ ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್, ಕೃಷ್ಣಪ್ಪ ಗೌತಮ್ ಹಾಗೂ ಪ್ರಸಿದ್ಧ್ ಕೃಷ್ಣ ಕಣಕ್ಕಿಳಿಯುವುದಿಲ್ಲ. ಮಯಾಂಕ್ ಅಗರ್ವಾಲ್ ಹಾಗೂ ಪ್ರಸಿದ್ಧ್ ಕೃಷ್ಣ ನ್ಯೂಜಿಲೆಂಡ್ ವಿರುದ್ದದ ಸರಣಿಗಾಗಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

ಇನ್ನು ಕೃಷ್ಣಪ್ಪ ಗೌತಮ್ ಹಾಗೂ ದೇವದತ್ ಪಡಿಕ್ಕಲ್ ಭಾರತ ಎ ತಂಡದ ಭಾಗವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗಾಗಿ ತೆರಳಬೇಕಿದೆ. ಹೀಗಾಗಿ ಈ ನಾಲ್ವರು ಆಟಗಾರರು ಪ್ರೀ ಕ್ವಾರ್ಟರ್ ಫೈನಲ್​ಗೆ ಅಲಭ್ಯರಾಗಲಿದ್ದಾರೆ. ಈ ನಾಲ್ವರು ಆಟಗಾರರು ಮನೀಷ್ ಪಾಂಡೆ ಮುನ್ನಡೆಸುತ್ತಿರುವ ಕರ್ನಾಟಕ ತಂಡದ ಪ್ಲೇಯಿಂಗ್ ಇಲೆವೆನ್​​ನ ಭಾಗವಾಗಿದ್ದರು ಎಂಬುದು ಇಲ್ಲಿ ವಿಶೇಷ. ಹೀಗಾಗಿ ಸೌರಾಷ್ಟ್ರ ವಿರುದ್ದದ ಪಂದ್ಯದಲ್ಲಿ ಕರ್ನಾಟಕ ತಂಡವು ನಾಲ್ವರು ಬದಲಿ ಆಟಗಾರರನ್ನು ಕಣಕ್ಕಿಳಿಸಬೇಕಿದೆ.

ಸದ್ಯ ನಾಲ್ವರು ಬದಲಿ ಆಟಗಾರರನ್ನು ಕರ್ನಾಟಕ ತಂಡ ಘೋಷಿಸಿದ್ದು, ಅದರಂತೆ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್, ಮಧ್ಯಮ ವೇಗಿ ವಿ ಕೌಶಿಕ್ ಹಾಗೂ ಸ್ಪಿನ್ನರ್​ಗಳಾದ ರಿತೇಶ್ ಭಟ್ಕಳ್ ಹಾಗೂ ಆದಿತ್ಯ ಸೋಮಣ್ಣ ತಂಡವನ್ನು ಸೇರಲಿದ್ದಾರೆ.

ಕರ್ನಾಕಟ ತಂಡ ಹೀಗಿದೆ:

1. ಮನೀಷ್ ಪಾಂಡೆ (ನಾಯಕ),
2. ರವಿಕುಮಾರ್ ಸಮರ್ಥ್,
3. ಕರುಣ್ ನಾಯರ್,
4. ಸಿದ್ಧಾರ್ಥ್ ಕೆ.ವಿ.
5. ರೋಹನ್ ಕದಮ್,
6. ಅಭಿನವ್ ಮನೋಹರ್,
7. ಶ್ರೇಯಸ್ ಗೋಪಾಲ್,
8. ಪ್ರವೀಣ್ ದುಬೆ,
9. ಆದಿತ್ಯ ಸೋಮಣ್ಣ,
10. ಜಗದೀಶ ಸುಚಿತ್,
11. ಶರತ್ ಬಿ.ಆರ್​ (ವಿಕೆಟ್ ಕೀಪರ್),
12. ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್),
13. ವೈಶಾಕ್ ವಿಜಯಕುಮಾರ್,
14. ದರ್ಶನ್ ಎಂ.ಬಿ,
15. ಪ್ರತೀಕ್ ಜೈನ್,
16. ಕಾರ್ಯಪ್ಪ ಕೆಸಿ,
17. ಕೌಶಿಕ್ ವಿ,
18. ಅನಿರುಧ್ ಜೋಶಿ,
19. ವಿದ್ಯಾಧರ್ ಪಾಟೀಲ್,
20. ರಿತೇಶ್ ಭಟ್ಕಳ್.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ವೇಳಾಪಟ್ಟಿ ಹೀಗಿದೆ:

ಪ್ರೀ ಕ್ವಾರ್ಟರ್ ಫೈನಲ್
ನವೆಂಬರ್ 16 (ಮಂಗಳವಾರ)-
ಮಹಾರಾಷ್ಟ್ರ vs ವಿದರ್ಭ (8:30AM ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ)
ಹಿಮಾಚಲ ಪ್ರದೇಶ vs ಕೇರಳ (12:00PM ಪಾಲಂ ಎ ಸ್ಟೇಡಿಯಂ, ದೆಹಲಿ)
ಕರ್ನಾಟಕ vs ಸೌರಾಷ್ಟ್ರ (1:00PM ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ)

ಕ್ವಾರ್ಟರ್ ಫೈನಲ್
ನವೆಂಬರ್ 18 (ಗುರುವಾರ)
1 ನೇ ಕ್ವಾರ್ಟರ್ ಫೈನಲ್ ತಮಿಳುನಾಡು vs (ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ ತಂಡ) (8:30AM ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ)
2ನೇ ಕ್ವಾರ್ಟರ್ ಫೈನಲ್ ರಾಜಸ್ಥಾನ vs (ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ ತಂಡ) (8:30AM ಪಾಲಂ ಎ ಸ್ಟೇಡಿಯಂ, ದೆಹಲಿ)
3ನೇ ಕ್ವಾರ್ಟರ್ ಫೈನಲ್ ಬೆಂಗಾಲ್ ವಿರುದ್ಧ ((ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ ತಂಡ) (1:00PM ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ)
4ನೇ ಕ್ವಾರ್ಟರ್ ಫೈನಲ್ ಗುಜರಾತ್ vs ಹೈದರಾಬಾದ್ (1:00PM ಪಾಲಂ ಎ ಸ್ಟೇಡಿಯಂ, ದೆಹಲಿ)

ನವೆಂಬರ್ 20 ರಂದು ಎರಡು ಸೆಮಿಫೈನಲ್ಸ್​ ನಡೆಯಲಿದ್ದು, ಫೈನಲ್ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನವೆಂಬರ್ 22 ರಂದು ಜರುಗಲಿದೆ.

ಇದನ್ನೂ ಓದಿ: Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(Syed Mushtaq Ali Trophy: Karnataka to miss out in Padikkal,Agarwal)

 

TV9 Kannada


Leave a Reply

Your email address will not be published. Required fields are marked *