ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಸೆಮಿಫೈನಲ್ಗೆ ಪ್ರವೇಶಿಸಿದೆ. ಇಂದು ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಬಂಗಾಳ ತಂಡವನ್ನ ಎದುರಿಸಿದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ಸೂಪರ್ ಓವರ್ನ ಸೂಪರ್ ಗೆಲುವಿನೊಂದಿಗೆ ನಾಲ್ಕರ ಘಟ್ಟಕ್ಕೆ ಎಂಟ್ರಿಕೊಟ್ಟಿದೆ. ಈ ಪಂದ್ಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಅನುಭವಿ ಕರುಣ್ ನಾಯರ್ ಅಜೇಯ 55 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಇದರೊಂದಿಗೆ 161 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಬೆಂಗಾಲ್, 108 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ರಿತ್ವಿಕ್ ಚೌದರಿ 18 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಒಳಗೊಂಡ 36 ರನ್ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಕೊನೆ ಓವರ್ನ ಅಂತಿಮ ಏಸೆತದಲ್ಲಿ 1 ರನ್ ಬೇಕಿದ್ದಾಗ ನಾಯಕ ಮನೀಶ್ ಪಾಂಡೆ, ಬೆಂಗಾಲ್ ಬ್ಯಾಟ್ಸ್ಮನ್ ಅಕಾಶ್ ದೀಪ್ನ ರನೌಟ್ ಮಾಡಿದರು. ಇದೊಂದಿಗೆ 160 ರನ್ಗೆ ಗಳಿಸಲಷ್ಟೇ ಶಕ್ತವಾಗಿ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ICYMI: @karun126‘s brisk 55* (29) 👍 👍
The Karnataka right-hander hit 4 fours & 3 sixes in his stroke-filled innings in the #QF2 of the #SyedMushtaqAliT20. 👌 👌 #BENvKAR
Watch his knock 🎥 🔽https://t.co/7727CESJ12 pic.twitter.com/waEWHs5DKp
— BCCI Domestic (@BCCIdomestic) November 18, 2021
ಸೂಪರ್ ಓವರ್ನಲ್ಲಿ ಬೆಂಗಾಲ್ ಪರ ಕಣಕ್ಕಿಳಿದ ಸುದಿಪ್ ಚಟರ್ಜಿ ಹಾಗೂ ಕೈಫ್ ಅಹ್ಮದ್, ಕರ್ನಾಟದ ಕಾರ್ಯಪ್ಪ ಎದುರು ಮಂಡಿಯೂರಿದರು. ಕಾರ್ಯಪ್ಪ ಎಸೆದ ಮೊದಲ ಎಸೆತ ಡಾಟ್ ಮಾಡಿದ್ದ ಕೈಫ್ ಅಹ್ಮದ್, 2ನೇ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮೂರನೇ ಎಸೆತದದಲ್ಲಿ ಬೌಂಡರಿ ಬಾರಿಸಿದ ಚಟರ್ಜಿ, 4ನೇ ಎಸೆತದಲ್ಲಿ ಎರಡು ರನ್ ಕದಿಯಲು ಯತ್ನಿಸಿ ರನೌಟ್ ಬಲೆಗೆ ಸಿಲುಕಿದರು.. ಇದರೊಂದಿಗೆ 5 ರನ್ ಗಳಿಸಲಷ್ಟೇ ಶಕ್ತವಾದ ಬೆಂಗಾಲ್, ಸೂಪರ್ ಓವರ್ನಲ್ಲಿ ಕರ್ನಾಟಕಕ್ಕೆ 6 ರನ್ ಟಾರ್ಗೆಟ್ ನೀಡಿತ್ತು. ಇದನ್ನ ಬೆನ್ನತ್ತಿದ ಕರ್ನಾಟಕ ಎರಡೇ ಎಸೆತಗಳಲ್ಲಿ ಗೆಲುವಿನ ನಗೆ ಬೀರಿತು. ಕ್ರೀಸ್ಗೆ ಇಳಿದಿದ್ದ ಮನೀಶ್ ಪಾಂಡೆ, ಮೊದಲ ಎಸೆತದಲ್ಲಿ 2 ರನ್, 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ ಸೂಪರ್ ಗೆಲುವು ಸಾಧಿಸಿತು. ಇದರೊಂದಿಗೆ ಸೆಮಿಫೈನಲ್ಗೆ ಲಗ್ಗೆಟ್ಟಿತ್ತು.
ಇನ್ನೂ ನವೆಂಬರ್ 20ರಂದು ಇದೇ ಕ್ರಿಡಾಂಗಣದಲ್ಲಿ ಸೆಮಿಫೈನಲ್ ಪಂದ್ಯ ವಿಧರ್ಭ ಎದುರು ನಡೆಯಲಿದ್ದು, ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿದೆ.
Things went down to the wire as Karnataka beat Bengal in a Super Over thriller to enter the semis of #SyedMushtaqAliT20 👏👏
Watch how things panned out in the Super Over 📽️ #BENvKAR #QF2
— BCCI Domestic (@BCCIdomestic) November 18, 2021