ಐಸಿಸಿ ಟಿ-20 ವಿಶ್ವಕಪ್ 2021ರ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಪೂರ್ಣಗೊಳಿಸಿದೆ. ಇಂದು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಬಾಯ್ಸ್ 9 ವಿಕೆಟ್ ಗೆಲುವು ಪಡೆದುಕೊಂಡಿದ್ದಾರೆ.
Another classy knock from the Indian opener 🙌#T20WorldCup | #INDvNAM | https://t.co/ICh1BVKEFJ pic.twitter.com/fQmV3fE1Wb
— T20 World Cup (@T20WorldCup) November 8, 2021
ಟಿ-20 ಮಾದರಿ ಕ್ರಿಕೆಟ್ನಲ್ಲಿ ನಮೀಬಿಯಾ ಹಾಗೂ ಭಾರತ ಇದೇ ಮೊದಲ ಬಾರಿಗೆ ಮುಖಾಮುಖಿ ಆಗಿದ್ದು, ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಗ್ರೂಪ್-2 ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ನಿರ್ಗಮನ ಪಡೆಯಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಮೀಬಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಸಿಡಿಸಿತು. ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ರೋಹಿತ್ ಶರ್ಮಾ (56 ರನ್), ಕೆಎಲ್ ರಾಹುಲ್ (ಅಜೇಯ 54 ರನ್)ರ ಅರ್ಧ ಶತಕ ನೆರವಿನಿಂದ ಟೀಂ ಇಂಡಿಯಾ 15.2 ಓವರ್ಗಳಲ್ಲಿ 136 ರನ್ ಸಿಡಿಸಿ ಗೆಲುವು ಪಡೆಯಿತು.