ಐಪಿಎಲ್​ ದ್ವಿತೀಯಾರ್ಧ ಹಾಗೂ ಟಿ20 ವಿಶ್ವಕಪ್​​..! ಈ ಎರಡು ಟೂರ್ನಿಗಳ ಮೇಲೆಯೇ, ಈಗ ಎಲ್ಲರ ಗಮನ ನೆಟ್ಟಿದೆ. ಎಲ್ಲಾ ತಂಡಗಳು ಟಿ20 ವಿಶ್ವಕಪ್​ಗಾಗಿ ತಯಾರಿ ನಡೆಸ್ತಿವೆ. ಕೆಲ ವಿದೇಶಿ ಆಟಗಾರರು ಐಪಿಎಲ್​ ದ್ವಿತೀಯಾರ್ಧಕ್ಕೆ ಗೈರಾಗ್ತಿದ್ದಾರೆ.

ಕೊರೊನಾ ಕಾರಣದಿಂದ ಭಾರತದಿಂದಾಚೆಗೆ ಎರಡು ಮಹತ್ವದ ಟೂರ್ನಿಗಳು, ಶಿಫ್ಟ್​ ಆಗಿವೆ. ಒಂದು ಇಂಡಿಯನ್ ಪ್ರೀಮಿಯರ್ ಲೀಗ್, ಮತ್ತೊಂದು ಅಕ್ಟೋಬರ್​​ನಲ್ಲಿ ಬಿಸಿಸಿಐ ಅತಿಥ್ಯದಲ್ಲಿ ನಡೆಯಲಿರುವ, ಟಿ20 ವಿಶ್ವಕಪ್ ಟೂರ್ನಿ..! ಇವೆರೆಡು ಒಂದೇ ಫಾರ್ಮೆಟ್.. ಆದ್ರೆ​ ವಿಭಿನ್ನ ಟೂರ್ನಿಗಳಾಗಿದ್ದರೂ ಯುಎಇಯ ತಟಸ್ಥ ಸ್ಥಳಗಳಲ್ಲೇ ನಡೆಯಲಿವೆ. ಅದ್ರಲ್ಲೂ ಐಪಿಎಲ್​ನ ದ್ವಿತೀಯಾರ್ಧ, ಟಿ20 ವಿಶ್ವಕಪ್​​ ಟೂರ್ನಿಗೂ ಮುನ್ನ ನಡೆಯುತ್ತಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್​ ಲೀಗ್​,​ ವಿಶ್ವಕಪ್​ ಸಿದ್ಧತೆಗೆ ಸಹಕಾರಿಯಾಗಿದೆ.

ಹೌದು..! ಟಿ20 ವಿಶ್ವಕಪ್ ದೃಷ್ಟಿಯಿಂದಾಗಿ ಎಲ್ಲಾ ತಂಡಗಳು, ದ್ವಿಪಕ್ಷೀಯ ಟಿ20 ಸರಣಿಗಳಲ್ಲಿ ಬ್ಯುಸಿಯಾಗಿವೆ. ಆದ್ರೆ ದುರಾದೃಷ್ಟದಿಂದ ಐಪಿಎಲ್ ರದ್ದಾಗಿ, ಈಗ ವಿಶ್ವಕಪ್ ಟೂರ್ನಿಗೂ ಒಂದು ತಿಂಗಳ ಮುನ್ನ ಪುನಾರಂಭವಾಗ್ತಿದೆ. ಇದು ವಿದೇಶಿ ಆಟಗಾರರ ಪಾಲಿಗೆ ಅದೃಷ್ಟವೇ ಆಗಿದೆ. ಯಾಕಂದ್ರೆ ಐಪಿಎಲ್​ನಲ್ಲಿ ಆಡುವ ವಿದೇಶಿ ಆಟಗಾರರು, ಆಯಾ ತಂಡಗಳ ಪ್ರಮುಖ ಆಟಗಾರರು ಆಗಿದ್ದಾರೆ. ಹೀಗಾಗಿ ಐಪಿಎಲ್, ಟಿ20​ ವಿಶ್ವಕಪ್​​ನಲ್ಲಿ ಆಡುವ ವಿದೇಶಿಗರಿಗೆ, ಸಹಾಯವಾಗಲಿದೆ. ಇದನ್ನ ಸ್ವತಃ ಸೌತ್ ಆಫ್ರಿಕಾ ತಂಡದ ಕೋಚ್ ಮಾರ್ಕ್​ ಬೌಚರ್​ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್​ ವಿಶ್ವಕಪ್​ಗೆ ತಯಾರಿ..!
‘ನಾವು ಯುಎಇ ಕಂಡೀಷನ್​​ನಲ್ಲಿ ಆಡಬೇಕಿದೆ. ಐಪಿಎಲ್​​ ನಂತರ ಯುಎಇ ವಿಕೆಟ್, ಡ್ರೈ ಆಗಿರುತ್ತವೆ. ಸೌತ್​ ಆಫ್ರಿಕಾ ಪಿಚ್​ಗಳಂತೆ ನಾವು ಇಲ್ಲಿ 180-200 ರನ್ ಗಳಿಸೋದು ಕಷ್ಟ. ಆದ್ರೆ ಇಲ್ಲಿ ನಾವು ಚಾಣಾಕ್ಷತನ ಪ್ರದರ್ಶಿಸಬೇಕಿದೆ. ಸ್ಮಾರ್ಟ್​ ಕ್ರಿಕೆಟ್ ಆಡಬೇಕಿದೆ’-ಮಾರ್ಕ್​ ಬೌಚರ್, ಸೌತ್ ಆಫ್ರಿಕಾ ಕೋಚ್

ಹೌದು..! ಸೌತ್​ ಆಫ್ರಿಕನ್ ಕೋಚ್ ಮಾರ್ಕ್​ ಬೌಚರ್ ಹೇಳಿದಂತೆ, ಯುಎಇನಲ್ಲಿ ಹೊಡಿಬಡಿ ಆಟ ನಡೆಯೋದಿಲ್ಲ.. ಇಲ್ಲಿ ಒಮ್ಮೆಯೇ ಸ್ಪೋಟಕ ಬ್ಯಾಟಿಂಗ್​​ಗೆ ಮುಂದಾದರೆ, ಬ್ಯಾಟ್ಸ್​ಮನ್ ಹೋದ ದಾರಿಗೆ ಸುಂಕವಿಲ್ಲ ಎಂಬಂತೆ, ಕೈಸುಟ್ಟುಕೊಂಡು ಹಿಂತಿರುಗಬೇಕಾಗುತ್ತೆ. ಐಪಿಎಲ್,​ ಟಿ20 ವಿಶ್ವಕಪ್​ ಟೂರ್ನಿ ಹೇಗೆ ನೆರವಾಗುತ್ತೆ ಎಂಬ ಪ್ರಶ್ನೆ ನಿಮ್ಮದಾಗಿರಬಹುದು.. ಅದಕ್ಕೆ ಉತ್ತರ ನಮ್ಮಲ್ಲಿದೆ..!

ವಿಶ್ವಕಪ್​ ಸಿದ್ಧತೆಗೆ IPL​ ಸಹಕಾರಿ ಯಾಕೆ..?
* ಆಟಗಾರರು ವಾತಾವರಣಕ್ಕೆ ಹೊಂದಿಕೊಳ್ಳಲು ಸಹಕಾರಿ
* ಯುಎಇ ಪಿಚ್​ ಕಂಡೀಷನ್ಸ್​ ಕುರಿತು ತಿಳಿದುಕೊಳ್ಳಬಹುದು
* ಬ್ಯಾಟ್ಸ್​ಮನ್ಸ್​​ ಹಾಗೂ ಬೌಲರ್​ಗಳಿಗೆ ಸಿಗುತ್ತೆ ಅನುಭವ​
* ತಂಡಗಳ ನಾಯಕರಿಗೆ ಸ್ಟ್ರಾಟರ್ಜಿ ರೂಪಿಸಲು ನೆರವು
* ಐಪಿಎಲ್​​ ಅನುಭವ ವಿಶ್ವಕಪ್​​ನಲ್ಲಿ ಮಿಂಚಲು ಸಹಾಯ

ವಿಶ್ವಕಪ್ ಟೂರ್ನಿಗೂ ಮುನ್ನ ಐಪಿಎಲ್ ಆಡುವುದರಿಂದ, ಯುಎಇ ವಾತಾವರಣಕ್ಕೆ ಹೊಂದಿಕೊಳ್ಳಬಹುದಾಗಿದೆ. ಇದರ ಜೊತೆಗೆ ಪಿಚ್​ ಕಂಡೀಷನ್ಸ್​ ಹೇಗೆ ವರ್ತಿಸುತ್ತೆ ಎಂಬ ಸ್ಪಷ್ಟ ಬ್ಲೂ ಪ್ರಿಂಟ್ ಆಟಗಾರರಿಗೆ ಸಿಗುತ್ತೆ. ಬ್ಯಾಟ್ಸ್​​​​​​​​​​​​​​​​​​​ಮನ್​ಗಳು ಡ್ರೈ ಌಂಡ್ ಫ್ಲಾಟ್​​ ಪಿಚ್​ಗಳಲ್ಲಿ ಹೇಗೆ ಆಡಬೇಕೆಂಬ ಪಾಠ ಕಲಿತರೆ, ಬೌಲರ್​​ಗಳು ವಿಕೆಟ್ ಪಡೆಯುವ ಲೈನ್​ ಆ್ಯಂಡ್​ ಲೆನ್ತ್ ತಿಳಿದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ..! ಮುಖ್ಯವಾಗಿ ಐಪಿಎಲ್ ಆಡಿದ ಅನುಭವ ಆಯಾ ತಂಡಗಳ ನಾಯಕರಿಗೆ ಗೇಮ್​​​ಪ್ಲಾನ್​ ರೂಪಿಸಲು ನೆರವಾಗೋದರ ಜೊತೆಗೆ ವಿಶ್ವಕಪ್​ ಟೂರ್ನಿಯಲ್ಲಿ ಮಿಂಚಲು ಆಯಾ ಆಟಗಾರರಿಗೆ ಸಹಾಯಕವಾಗುತ್ತೆ.

ಸೇನಾ ರಾಷ್ಟ್ರಗಳಿಗೆ ಯುಎಇನಲ್ಲಿ ಆಡೋದೇ​ ಸವಾಲ್..!
ಹೌದು..! ಸದ್ಯ 2021ರ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರ ಆಗಿರೋದ್ರಿಂದ ಏಷ್ಯಾ ರಾಷ್ಟ್ರಗಳಿಗೆ ಹೊರತು ಪಡೆಸಿ, ಉಳಿದೆಲ್ಲಾ ರಾಷ್ಟ್ರಗಳಿಗೆ ಯುಎಇ ಕಂಡೀಷನ್ಸ್​ ಚಾಲೆಂಜ್ ಆಗಿದೆ. ಯಾಕಂದ್ರೆ ಯುಎಇ ಪಿಚ್​ಗಳು ಸ್ಲೋ ಌಂಡ್ ಲೋ ಟ್ರ್ಯಾಕ್​​ಗಳಾಗಿವೆ. ಹೀಗಾಗಿ ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್​​​ ತಂಡಗಳ ಆಟಗಾರರು, ಇಲ್ಲಿ ಪರದಾಟ ನಡೆಸಬೇಕಾಗುತ್ತೆ. ಹೀಗಾಗಿ ಯುಎಇ ಕಂಡೀಷನ್ಸ್​ ನಿಜಕ್ಕೂ ಕಠಿಣ ಸವಾಲೇ ಆಗಲಿದೆ.

ಮತ್ತೊಂದೆಡೆ ಯುಎಇ ಪಿಚ್​ಗಳು, ದಿನ ಕಳೆದಂತೆ ನಿಧಾನವಾಗುತ್ತವೆ. ಹೀಗಾಗಿ ಚೆಂಡು ವೇಗವಾಗಿ ಬ್ಯಾಟ್‌ ಕಡೆ ತೂರಿ ಬರುವುದಿಲ್ಲ. ಇದರಿಂದ ಬ್ಯಾಟ್ಸ್​ಮನ್​ಗಳೂ ತಾಳ್ಮೆ ಜೊತೆ ಚಾಣಾಕ್ಷತನದ ಬ್ಯಾಟಿಂಗ್​​ ತಂತ್ರ ಅನುಸರಿಸಬೇಕಾಗುತ್ತೆ. ಇನ್ನು ನಿಧಾನಗತಿಯ ಪಿಚ್​ ಸ್ಪಿನ್​​ ಸ್ನೇಹಿ.. ಅದ್ರಲ್ಲೂ ಸೆಕೆಂಡ್​​ ಇನಿಂಗ್ಸ್ ವೇಳೆ Dew Factor ಇದ್ದರೆ, ಸ್ಪಿನ್ ತಂತ್ರ ಮತ್ತಷ್ಟು ಫಲ ಕೊಡಲಿದೆ. ಹೀಗಾಗಿ ಇವೆಲ್ಲಾ ಸವಾಲುಗಳನ್ನ ಮೆಟ್ಟಿನಿಲ್ಲಲು, ಪರಿಸ್ಥಿತಿಗೆ ಹೊಂದಿಕೊಳ್ಳಲು ಐಪಿಎಲ್ ಉತ್ತಮ ವೇದಿಕೆಯೇ ಆಗಿದೆ.

ಒಟ್ನಲ್ಲಿ.. ಯುಎಇನಲ್ಲಿ ನಡೆಯಲಿರೋ ಐಪಿಎಲ್​ Phase-2, ವಿಶ್ವಕಪ್ ತಯಾರಿಯ ವೇದಿಕೆ ಅನ್ನೋದರಲ್ಲಿ, ಅನುಮಾನವೇ ಇಲ್ಲ..! ಹೀಗಾಗಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್, ಪ್ರತಿಯೊಬ್ಬ ಕ್ರಿಕೆಟಿಗನ ಪಾಲಿಗೆ ಅತ್ಯಂತ ಮಹತ್ವದ ಟೂರ್ನಿಯಾಗಿದೆ.

The post T20 ವಿಶ್ವಕಪ್​ ತಯಾರಿಗೆ ಐಪಿಎಲ್​ ಸಹಾಯಕಾರಿ.. ಫೇಸ್​ 2 ಟೂರ್ನಿ ಯಾಕೆ ಇಂಪಾರ್ಟೆಂಟ್..? appeared first on News First Kannada.

Source: newsfirstlive.com

Source link