ಟಿ20 ವಿಶ್ವಕಪ್ ರನ್ನರ್ಅಪ್ ಕಿವೀಸ್ ತಂಡಕ್ಕೆ ಮಣ್ಣು ಮುಕ್ಕಿಸೋದು, ಟೀಮ್ ಇಂಡಿಯಾಕ್ಕೆ ಸುಲಭದ ಮಾತಾಗಿರಲಿಲ್ಲ. ಆದರೆ ದ್ರಾವಿಡ್-ರೋಹಿತ್ ಹೆಣೆದ ರಣತಂತ್ರಕ್ಕೆ ಪ್ರವಾಸಿ ತಂಡ, ಯುವ ಭಾರತದೆದರು ಮಕಾಡೆ ಮಲಗಿತು. ಹಾಗಾದ್ರೆ ಈ ಗೆಲುವಿನ ಸಿಕ್ರೇಟ್ ಏನು.? ನೋಡೋಣ ಬನ್ನಿ
ಪ್ರವಾಸಿ ನ್ಯೂಜಿಲೆಂಡ್ ತಂಡವನ್ನ ಬಗ್ಗುಬಡಿದ ಟೀಮ್ ಇಂಡಿಯಾ, ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿತು. ಅನುಭವಿ ಆಟಗಾರರ ಅನುಪಸ್ಥಿತಿ ತಂಡಕ್ಕೆ ಕಾಡ್ತಿದ್ರೂ, ತಂಡದ ಗೆಲುವಿಗೆ ಕೋಚ್ – ಕ್ಯಾಪ್ಟನ್ ಬೇರೆಯದ್ದೇ ಮಾರ್ಗ ಹುಡುಕಿದ್ರು..!!! ಹೀಗಾಗಿ ದ್ರಾವಿಡ್ -ರೋಹಿತ್ ರೂಪಿಸಿದ ರಣವ್ಯೂಹದಲ್ಲಿ ಸಿಲುಕಿದ ಕಿವೀಸ್, ವಿಲವಿಲನೆ ಒದ್ದಾಡಿತು. ಆದರೆ ಕೋಚ್-ಕ್ಯಾಪ್ಟನ್ ವಿನ್ನಿಂಗ್ ಸಿಕ್ರೇಟ್ ಏನು ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಯುವ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ರೋಹಿತ್-ದ್ರಾವಿಡ್..!
ರೋಹಿತ್-ದ್ರಾವಿಡ್ರ ಮೊದಲ ವಿನ್ನಿಂಗ್ ಸೀಕ್ರೆಟ್, ಫಿಯರ್ಲೆಸ್ ಕ್ರಿಕೆಟ್. ಕಿವೀಸ್ ಸರಣಿಯಲ್ಲಿ ಕಣಕ್ಕಿಳಿದಿದ್ದು ಬಹುತೇಕ ಯುವ ಆಟಗಾರರೇ ಆಗಿದ್ರು. ಸರಣಿಗೂ ಮುನ್ನ ಆಟಗಾರರಲ್ಲಿ ಒತ್ತಡ ಹೆಚ್ಚಾಗಿತ್ತು. ಮುಂದಿನ ಸವಾಲನ್ನ ಹೇಗೆ ಎದುರಿಸಬೇಕೆಂಬ ಆತಂಕ ಮನೆ ಮಾಡಿತ್ತು. ಆದರೆ ಕೋಚ್-ಕ್ಯಾಪ್ಟನ್ ಎಲ್ಲರನ್ನ ಒಂದೆಡೆ ಕರೆಸಿ, ನಿರ್ಭೀತಿಯಿಂದ ಬ್ಯಾಟ್ಬೀಸಿ. ಒತ್ತಡವನ್ನ ಪಕ್ಕಕ್ಕಿಡಿ ಎಂದು ಭರವಸೆ ಹೆಚ್ಚಿಸಿದ್ರು.
ಯಾರೇ ಆಗಲಿ ಅವಕಾಶ ಕಳೆದುಕೊಳ್ಳುವ ಆತಂಕ ಬೇಡ.!
ರೋಹಿತ್-ದ್ರಾವಿಡ್ರ 2ನೇ ಗೆಲುವಿನ ಸೀಕ್ರೆಟ್ ಇದು. ಪ್ರದರ್ಶನ ನೀಡದಿದ್ದರೆ ಅವಕಾಶ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ರು ಆಟಗಾರರು. ವಿಶೇಷವಾಗಿ ಈ ಬಗ್ಗೆ ಮಾತನಾಡಿದ ಕೋಚ್-ಕ್ಯಾಪ್ಟನ್, ಕೆಟ್ಟ ಪ್ರದರ್ಶನದಿಂದ ಅವಕಾಶ ವಂಚಿತರಾಗ್ತೇವೆ ಎಂಬ ಆತಂಕ ಪಟ್ಟುಕೊಳ್ಳಬೇಡಿ. ಖಂಡಿತವಾಗೂ ಮತ್ತೆ ಅವಕಾಶ ನೀಡುತ್ತೇವೆ ಎಂದು ಧೈರ್ಯ ತುಂಬಿದ್ರು.
ಆಟಗಾರರ ಸಣ್ಣಪುಟ್ಟ ಕಾಣಿಕೆಯನ್ನ ನಿರ್ಲಕ್ಷಿಸೋದಿಲ್ಲ..!
ಆಟಗಾರರು ಆತಂಕಕ್ಕೆ ಒಳಗಾಗದೆ ಪ್ರದರ್ಶನ ನೀಡಿ. ಮೈದಾನದಲ್ಲಿ ನೀಡುವ ಸಣ್ಣ ಪುಟ್ಟ ಕಾಣಿಕೆಯನ್ನೂ ಕೂಡ ನಾವು ಗಮನಿಸುತ್ತೇವೆ. ನಿಮ್ಮ ಪರಿಶ್ರಮವನ್ನ ಯಾವುದೇ ರೀತಿ ವ್ಯರ್ಥವಾಗೋದಕ್ಕೆ ಬಿಡುವುದಿಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲವನ್ನೂ ಸೂಕ್ಷ್ಮವಾಗಿ ವೀಕ್ಷಿಸುತ್ತೇವೆ ಎಂದಿದ್ರು ಕೋಚ್-ಕ್ಯಾಪ್ಟನ್.
ಡ್ರೆಸ್ಸಿಂಗ್ ರೂಮ್ನಲ್ಲಿ ಆರೋಗ್ಯಕರ ವಾತಾವರಣ..!
ಡ್ರೆಸ್ಸಿಂಗ್ ರೂಮ್ನಲ್ಲಿ ಫ್ರೆಂಡ್ಲಿ ನೇಚರ್ ಕ್ರಿಯೇಟ್ ಮಾಡಿದ್ದು ಕೂಡ, ಆಟಗಾರರಿಗೆ ಲಾಭ ತಂದುಕೊಟ್ಟಿದೆ. ಕಟ್ಟುನಿಟ್ಟಿನ ವಾತಾವರಣ ನಿರ್ಮಿಸದೆ, ಎಲ್ಲರೂ ಫ್ರೀ ಆಗಿರುವಂತೆ ಸೂಚಿಸಲಾಗಿತ್ತು. ಶಾಂತ ರೀತಿಯ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸಿದರ ಹಿನ್ನೆಲೆ, ಆಟಗಾರರು ನಿರ್ಭೀತವಾಗಿ ಆಡಿ, ಸರಣಿ ಗೆಲ್ಲೋದಕ್ಕೂ ಸಹಾಯವಾಯ್ತು. ಒಟ್ನಲ್ಲಿ ಈ ನಿರ್ಧಾರಗಳಿಂದಲೇ ಟೀಮ್ ಇಂಡಿಯಾ ಗೆದ್ದಿದೆ. ಹೀಗಾಗಿ ಗೆಲುವಿನ ರೂವಾರಿಗಳಾದ ರೋಹಿತ್-ದ್ರಾವಿಡ್ಗೆ ಹ್ಯಾಟ್ಸ್ಅಪ್ ಹೇಳಲೇಬೇಕು.