T20 World Cup: ಇದೇನಾ ಕ್ರೀಡಾ ಮನೋಭಾವ! ಡೆಡ್ ಬಾಲ್​ಗೆ ಸಿಕ್ಸರ್ ಬಾರಿಸಿದ ವಾರ್ನರ್​ಗೆ ಗಂಭೀರ್ ಕ್ಲಾಸ್ | T20 World Cup Pathetic display of spirit of game by David warner says gautam gambhir


T20 World Cup: ಇದೇನಾ ಕ್ರೀಡಾ ಮನೋಭಾವ! ಡೆಡ್ ಬಾಲ್​ಗೆ ಸಿಕ್ಸರ್ ಬಾರಿಸಿದ ವಾರ್ನರ್​ಗೆ ಗಂಭೀರ್ ಕ್ಲಾಸ್

ವಾರ್ನರ್

ಗುರುವಾರ ನಡೆದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ಅವರು ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾದ ಪಾಕಿಸ್ತಾನ ತಂಡವನ್ನು ಸೋಲಿಸಿದರು. ಮ್ಯಾಥ್ಯೂ ವೇಡ್, ಮಾರ್ಕಸ್ ಸ್ಟೊಯಿನಿಸ್ ಹೊರತುಪಡಿಸಿ, ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈ ರೋಚಕ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ವಾರ್ನರ್ ತಮ್ಮ ಆಟದ ಸಮಯದಲ್ಲಿ ಆಟದ ಉತ್ಸಾಹಕ್ಕೆ ವಿರುದ್ಧವಾಗಿ ಒಂದು ಹೊಡೆತವನ್ನು ಆಡಿದರು ಎಂದು ಮಾಜಿ ಭಾರತೀಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಆರೋಪಿಸಿದ್ದಾರೆ.

ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ 30 ಎಸೆತಗಳಲ್ಲಿ 49 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 163.33 ಆಗಿತ್ತು. ಪಂದ್ಯದ ವೇಳೆ, ವಾರ್ನರ್ ಡೆಡ್ ಬಾಲ್‌ನಲ್ಲಿ ಸಿಕ್ಸರ್ ಬಾರಿಸಿದರು, ಅದನ್ನು ನೋಡಿ ಗಂಭೀರ್ ವಾರ್ನರ್​ ಅವರನ್ನು ನಿಂದಿಸಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ವೇಳೆ ಮೊಹಮ್ಮದ್ ಹಫೀಜ್ ಬೌಲಿಂಗ್ ಮಾಡುವ ವೇಳೆ ಚೆಂಡು ಕೈ ಇದ್ದ ಸ್ಲಿಪ್ ಆಗಿ ಡೆಡ್ ಬಾಲ್ ಆಯಿತು. ಆದರೆ ಈ ಎಸೆತವನ್ನು ಬಿಡದ ವಾರ್ನರ್ ಸಿಕ್ಸರ್ ಬಾರಿಸಿದರು. ಅವರ ಈ ಶಾಟ್ ನೋಡಿದ ಗಂಭೀರ್ ಇದು ನೈತಿಕತೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಆಸ್ಟ್ರೇಲಿಯಾದ ದೈತ್ಯರಿಗೆ ಗಂಭೀರ್ ಪ್ರಶ್ನೆಗಳ ಸುರಿಮಳೆ
ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ವಾರ್ನರ್ ಅವರ ಈ ಶಾಟ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿ, ವಾರ್ನರ್ ಅವರ ಕ್ರೀಡಾ ಮನೋಭಾವದ ಕಳಪೆ ಪ್ರದರ್ಶನ! ನಾಚಿಕೆಗೇಡು. ಐಪಿಎಲ್‌ನಲ್ಲಿ ಮಂಕಾಡಿಂಗ್ ಮಾಡಿದಾಗ ಆರ್ ಅಶ್ವಿನ್ ಅವರ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ್ದ ಆಸ್ಟ್ರೇಲಿಯಾ ಆಟಗಾರರು ಏನು ಹೇಳುತ್ತಾರೋ ಎಂದು ಬರೆದುಕೊಂಡಿದ್ದಾರೆ.

ವಾರ್ನ್ ಮತ್ತು ಪಾಂಟಿಂಗ್ ಅವರನ್ನು ಪ್ರಶ್ನಿಸಿದ ಗಂಭೀರ್
ಇದಾದ ನಂತರ ಟಿವಿ ಸಂದರ್ಶನವೊಂದರಲ್ಲಿ ಗಂಭೀರ್, ಆಸ್ಟ್ರೇಲಿಯನ್ ದಂತಕಥೆ ಶೇನ್ ವಾರ್ನ್ ಮತ್ತು ರಿಕಿ ಪಾಂಟಿಂಗ್ ಈ ಬಗ್ಗೆ ಏನು ಹೇಳುತ್ತಾರೆಂದು ನೋಡಲು ನಾನು ಬಯಸುತ್ತೇನೆ. ಏಕೆಂದರೆ ಅವರು ಅಶ್ವಿನ್ ಅವರ ಮಂಕಡಿಂಗ್ ಬಗ್ಗೆ ದೊಡ್ಡ ಚರ್ಚೆ ನಡೆಸಿದರು. ಅಶ್ವಿನ್ ಅವರ ಕ್ರೀಡಾಸ್ಫೂರ್ತಿ ಬಗ್ಗೆ ಪ್ರಶ್ನೆ ಎದ್ದಿತ್ತು. ವಾರ್ನರ್‌ನಂತಹ ದೊಡ್ಡ ಆಟಗಾರನಿಗೆ ಈ ರೀತಿ ಮಾಡುವುದು ಸರಿಯಲ್ಲ. ಬಹುಶಃ ವಾರ್ನರ್ ಇಂದು 49 ರನ್ ಗಳಿಸಿ ಔಟಾಗಲು ಇದೇ ಕಾರಣ ಎಂದು ಅವರನ್ನು ಕಟುವಾಗಿ ಟೀಕಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *