T20 World Cup: ಕ್ಯಾಚ್ ಬಿಟ್ಟಿದ್ದು ಓಕೆ.. ನಂತರ 3 ಸಿಕ್ಸರ್ ಹೊಡೆಸಿಕೊಂಡಿದ್ಯಾಕೆ? ಶಾಹೀನ್ ಮೇಲೆ ಆಫ್ರಿದಿ ಗರಂ! | T20 World Cup Shaheen afridi should not have conceded three sixes in semi final says shahid afridi


T20 World Cup: ಕ್ಯಾಚ್ ಬಿಟ್ಟಿದ್ದು ಓಕೆ.. ನಂತರ 3 ಸಿಕ್ಸರ್ ಹೊಡೆಸಿಕೊಂಡಿದ್ಯಾಕೆ? ಶಾಹೀನ್ ಮೇಲೆ ಆಫ್ರಿದಿ ಗರಂ!

ಶಾಹೀನ್ ಅಫ್ರಿದಿ, ಶಾಹಿದ್ ಅಫ್ರಿದಿ

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್‌ನಂತಹ ಅತ್ಯಂತ ಮಹತ್ವದ ಪಂದ್ಯದಲ್ಲಿ, ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ವಿಶೇಷವೆಂದರೆ ಈ ಸೋಲಿನಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಎದುರಾಗಿದೆ. ತಂಡದ ‘ಸ್ಟಾರ್’ ಬೌಲರ್ ಶಾಹೀನ್ ಅಫ್ರಿದಿ ಅವರ ದುಬಾರಿ ಓವರೇ ಇದಕ್ಕೆಲ್ಲಾ ಕಾರಣ. ಶಹೀನ್ ಒಂದು ಓವರ್‌ನಲ್ಲಿ 22 ರನ್‌ ಬಿಟ್ಟುಕೊಟ್ಟು ಪಂದ್ಯವನ್ನು ಕೈಚೆಲ್ಲಿದರು. ಆದರೆ ಎಲ್ಲರೂ ಅಲಿ ಕ್ಯಾಚ್ ಬಿಟ್ಟಿದ್ದೆ ಈ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದು, ಸೋಲಿಗೆ ಶಾಹೀನ್ ಅವರೇ ಕಾರಣ ಎಂದು ಹೇಳಿದ್ದಾರೆ.

ಪಂದ್ಯದ ವೇಳೆ ಪಾಕಿಸ್ತಾನ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿತ್ತು. 100 ರನ್‌ಗೆ ತಲುಪುವ ಮೊದಲು 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಆಸ್ಟ್ರೇಲಿಯಾಕ್ಕೆ 177 ರನ್‌ಗಳ ದೊಡ್ಡ ಸವಾಲಾಗಿತ್ತು. ಆದರೆ ಈ ವೇಳೆ ಕ್ರೀಸ್​ಗೆ ಬಂದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯಾನಿಸ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಮ್ಯಾಥ್ಯೂ ಮೂರು ಪ್ರಮುಖ ಸಿಕ್ಸರ್‌ಗಳನ್ನು ಬಾರಿಸಿದರು. ಇದೇ ವೇಳೆ ಶಾಹೀನ್ ಅವರ ಓವರ್‌ನಲ್ಲಿ ಸಿಕ್ಸರ್ ಬಂದಿದ್ದು, ವಿಶ್ವಕಪ್ ಹೀರೋ ಒಂದೇ ಓವರ್‌ನಲ್ಲಿ ಶೂನ್ಯವಾದರು.

ಶಾಹೀನ್ ಮೇಲೆ ಅಫ್ರಿದಿ ಗರಂ
ಪಾಕಿಸ್ತಾನದ ಸೋಲಿಗೆ ಕಾರಣ ಹಸನ್ ಅಲಿ ಕ್ಯಾಚ್ ಬಿಟ್ಟಿದ್ದಲ್ಲ. ಬದಲಿಗೆ ಶಾಹೀನ್ ಅವರ ಓವರ್‌ನಲ್ಲಿ ಎಂದು ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದಾರೆ. ಹಸನ್ ಕ್ಯಾಚ್ ಕೈಬಿಟ್ಟಿದ್ದು ತಪ್ಪು. ಅದು ಹಾಗಿರಲಿ, ಆದರೆ ನಂತರ ಸತತ ಮೂರು ಸಿಕ್ಸರ್ ಹೊಡೆಸಿಕೊಂಡಿದ್ದು ಸರಿಯಲ್ಲ ಎಂದು ಆಫ್ರಿದಿ ಹೇಳಿಕೊಂಡಿದ್ದಾರೆ. ನನಗೆ ಶಾಹೀನ್‌ ಎಸೆದ ಎಸೆತಗಳು ಸರಿ ಎಂದೇನಿಸುತ್ತಿಲ್ಲ. ಕೊನೆಯ ಓವರ್​ನಲ್ಲಿ ಅವರ ವೇಗದೊಂದಿಗೆ ಯಾರ್ಕರ್ ಎಸೆದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *