T20 World Cup 2021: ಅಫ್ಘಾನಿಸ್ತಾನ್​ ತಂಡಕ್ಕೂ, ಟೀಮ್ ಇಂಡಿಯಾಗೂ ಸಿಹಿ ಸುದ್ದಿ | T20 World Cup 2021: Afghanistan off spinner Mujeeb Ur Rahman Fit For Last Match


T20 World Cup 2021: ಅಫ್ಘಾನಿಸ್ತಾನ್​ ತಂಡಕ್ಕೂ, ಟೀಮ್ ಇಂಡಿಯಾಗೂ ಸಿಹಿ ಸುದ್ದಿ

T20 World Cup 2021

ಟಿ20 ವಿಶ್ವಕಪ್​ನ 40ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇರಲಿದೆ. ಹೀಗಾಗಿ ಅಫ್ಘಾನ್-ಕಿವೀಸ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಅತ್ತ ಅಫ್ಘಾನಿಸ್ತಾನ್ ತಂಡಕ್ಕೆ ಕಳೆದೆರಡು ಪಂದ್ಯಗಳಲ್ಲಿ ತಮ್ಮ ಸ್ಟಾರ್ ಬೌಲರ್​ ಮುಜೀಬ್​ ಉರ್ ರೆಹಮಾನ್ ಅವರ ಅಲಭ್ಯತೆ ಕಾಡಿತ್ತು. ಇದೀಗ ನಿರ್ಣಾಯಕ ಪಂದ್ಯದಲ್ಲಿ ಮುಜೀಬ್ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡು ಕಳೆದೆರಡು ಪಂದ್ಯದಿಂದ ಹೊರಗುಳಿದಿದ್ದ ಮುಜೀಬ್ ಉರ್ ರೆಹಮಾನ್ ಫುಲ್ ಫಿಟ್​ ಆಗಿದ್ದಾರೆ. ಅದರಂತೆ ಶನಿವಾರ ಜಿಮ್​ನಲ್ಲಿ ತಾಲೀಮು ನಡೆಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಮುಜೀಬ್ ಆಗಮನದಿಂದಾಗಿ ಅಫ್ಘಾನ್​ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.

ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ 5 ವಿಕೆಟ್ ಪಡೆದ ಮೊದಲ ಬೌಲರ್ ದಾಖಲೆ ಮುಜೀಬ್ ಹೆಸರಿನಲ್ಲಿದೆ. ಸ್ಕಾಟ್ಲೆಂಡ್ ವಿರುದ್ಧ 20 ರನ್‌ಗಳಿಗೆ 5 ವಿಕೆಟ್ ಮುಜೀಬ್ ಆ ಬಳಿಕ ಪಾಕ್ ವಿರುದ್ದ 1 ವಿಕೆಟ್ ಪಡೆದಿದ್ದರು. ಇದೇ ವೇಳೆ ಗಾಯಗೊಂಡು ಮೈದಾನ ತೊರೆದಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿಯಲು ಅಭ್ಯಾಸ ಆರಂಭಿಸಿದ್ದಾರೆ.

ನ್ಯೂಜಿಲೆಂಡ್​ ವಿರುದ್ದದ ಪಂದ್ಯಕ್ಕೆ ಮುಜೀಬ್ ಅಲಭ್ಯರಾಗುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ್ದ ರವಿಚಂದ್ರನ್ ಅಶ್ವಿನ್, ಮುಜೀಬ್​ಗೆ ಬೇಕಿದ್ದರೆ ಟೀಮ್ ಇಂಡಿಯಾದ ಫಿಸಿಯೋ ಸಹಾಯ ಕೇಳಬಹುದು ಎಂದು ತಮಾಷೆಯಾಗಿ ತಿಳಿಸಿದ್ದರು. ಇತ್ತ ಟೀಮ್ ಇಂಡಿಯಾ ಕೂಡ ನ್ಯೂಜಿಲೆಂಡ್ ವಿರುದ್ದ ಮುಜೀಬ್ ಕಣಕ್ಕಿಳಿದರೆ ಅಫ್ಘಾನ್ ಬೌಲಿಂಗ್ ಲೈನಪ್ ಬಲಿಷ್ಠವಾಗಲಿದೆ ಎಂಬ ಲೆಕ್ಕಚಾರದಲ್ಲಿತ್ತು. ಇದೀಗ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಖುದ್ದು ಮುಜೀಬ್ ಉರ್ ರೆಹಮಾನ್ ಹಂಚಿಕೊಂಡಿದ್ದಾರೆ. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್​ ಯುವ ಸ್ಪಿನ್ನರ್ ಆಡೋದು ಬಹುತೇಕ ಖಚಿತ.

ಟಿ20ಯಲ್ಲಿ ಉತ್ತಮ ದಾಖಲೆ:
ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 20 ವರ್ಷದ ಮುಜೀಬ್ ಉರ್ ರೆಹಮಾನ್ ಉತ್ತಮ ದಾಖಲೆ ಹೊಂದಿದ್ದಾರೆ. 21 ಪಂದ್ಯಗಳಲ್ಲಿ 15ರ ಸರಾಸರಿಯಲ್ಲಿ 31 ವಿಕೆಟ್ ಪಡೆದಿದ್ದಾರೆ. ಇನ್ನು ಟಿ20ಯಲ್ಲಿ ಮುಜೀಬ್ ಉರ್ ರೆಹಮಾನ್ ಎಕಾನಮಿ 5.96 ಮಾತ್ರ. ಒಟ್ಟಾರೆ 152 ಟಿ20 ಪಂದ್ಯಗಳಲ್ಲಿ 171 ವಿಕೆಟ್‌ಗಳನ್ನು ಪಡೆದಿರುವ ಮುಜೀಬ್ ನ್ಯೂಜಿಲೆಂಡ್ ವಿರುದ್ದ ಗೇಮ್ ಚೇಂಜರ್ ಆಗಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(T20 World Cup 2021: Afghanistan off spinner Mujeeb Ur Rahman Fit For Last Match)

TV9 Kannada


Leave a Reply

Your email address will not be published. Required fields are marked *