T20 World Cup 2021: ಕೆಎಲ್ ರಾಹುಲ್ ದಾಖಲೆ ಸರಿಗಟ್ಟಿದ ಶೊಯೇಬ್ ಮಲಿಕ್ | T20 World Cup 2021: Shoaib Malik equals KL Rahul’s Fastest Fifty Record


T20 World Cup 2021: ಕೆಎಲ್ ರಾಹುಲ್ ದಾಖಲೆ ಸರಿಗಟ್ಟಿದ ಶೊಯೇಬ್ ಮಲಿಕ್

Shoaib Malik

ಟಿ20 ವಿಶ್ವಕಪ್​ನ 37ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ ಓಪನರ್ ಕೆಎಲ್ ರಾಹುಲ್ ದಾಖಲೆ ಬರೆದಿದ್ದರು. 3 ಸಿಕ್ಸ್ ಹಾಗೂ 6 ಫೋರ್​ ಸಿಡಿಸಿ ರಾಹುಲ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದು ಈ ಬಾರಿಯ ಟಿ20 ವಿಶ್ವಕಪ್​ನ ಅತೀ ವೇಗದ ಅರ್ಧಶತಕದ ದಾಖಲೆ ಬರೆದಿತ್ತು. ಆದರೆ ಇದೀಗ ಇದೇ ದಾಖಲೆಯನ್ನು ಪಾಕಿಸ್ತಾನ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಶೊಯೇಬ್ ಮಲಿಕ್ ಸರಿಗಟ್ಟಿದ್ದಾರೆ.

ಸ್ಕಾಟ್ಲೆಂಡ್​ ವಿರುದ್ದದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಲಿಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ತುಸು ಎಚ್ಚರಿಕೆಯಿಂದ ಆಡಿದ ಮಲಿಕ್ ಆ ಬಳಿಕ ಅಬ್ಬರಿಸಲಾರಂಭಿಸಿದರು. ಅದರಂತೆ 18 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಅಜೇಯ ಅರ್ಧಶತಕ ಬಾರಿಸಿದರು. ಇದರೊಂದಿಗೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಬ್ಯಾಟರುಗಳ ಪಟ್ಟಿಯಲ್ಲಿ ಶೊಯೇಬ್ ಮಲಿಕ್ ಅಗ್ರಸ್ಥಾನಕ್ಕೇರಿದ್ದಾರೆ.

ಇಲ್ಲಿ ಕೆಎಲ್ ರಾಹುಲ್ ಅರ್ಧಶತಕ ಬಾರಿಸಿ ಔಟಾಗಿದ್ದರೆ, ಶೊಯೇಬ್ ಮಲಿಕ್ ಅಜೇಯರಾಗಿ ಉಳಿದಿದ್ದರು. ಹೀಗಾಗಿ ರಾಹುಲ್ ದಾಖಲೆಯನ್ನು ಸರಿಗಟ್ಟುವ ಮೂಲಕ ಮಲಿಕ್ ದಾಖಲೆಯ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(T20 World Cup 2021: Shoaib Malik equals KL Rahul’s Fastest Fifty Record)

TV9 Kannada


Leave a Reply

Your email address will not be published. Required fields are marked *