T20 World Cup 2021: ಮೆಂಟರ್ ಧೋನಿ ಮಾಸ್ಟರ್​ ಪ್ಲ್ಯಾನ್: ಆರಂಭಿಕರಿಗೆ 3 ಟಾರ್ಗೆಟ್ | T20 World Cup 2021: How India’s Net Run Rate Improved After Chasing


T20 World Cup 2021: ಮೆಂಟರ್ ಧೋನಿ ಮಾಸ್ಟರ್​ ಪ್ಲ್ಯಾನ್: ಆರಂಭಿಕರಿಗೆ 3 ಟಾರ್ಗೆಟ್

team india

ಸ್ಕಾಟ್ಲೆಂಡ್​ ವಿರುದ್ದ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಸೆಮಿಫೈನಲ್ ಆಸೆಯನ್ನು ಜೀವಂತವರಿಸಿಕೊಂಡಿದೆ. ಈ ಬಾರಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಸ್ಕಾಟ್ಲೆಂಡ್​ ಅನ್ನು ಕೇವಲ 85 ರನ್​ಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಆ ಬಳಿಕ ಟೀಮ್ ಇಂಡಿಯಾ ಟಾರ್ಗೆಟ್ ಮಾಡಿದ್ದು ನೆಟ್​ ರನ್​ ರೇಟ್​ ಅನ್ನು.

ಹೌದು, 86 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ರೂಪಿಸಿ ಕಣಕ್ಕಿಳಿದಿತ್ತು. ಅದರಂತೆ ಟೀಮ್ ಇಂಡಿಯಾ ಮೆಂಟರ್ ಧೋನಿ ಹಾಗೂ ಕೋಚಿಂಗ್ ಸಿಬ್ಬಂದಿ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾಗೆ 3 ಟಾರ್ಗೆಟ್​ ನೀಡಿತ್ತು. ಒಂದು ಅಫ್ಘಾನಿಸ್ತಾನ್ ನೆಟ್​ ರನ್​ ರೇಟ್ ಟಾರ್ಗೆಟ್​, ಎರಡನೇಯದು ನ್ಯೂಜಿಲೆಂಡ್ ನೆಟ್​ ರನ್​ ರೇಟ್ ಟಾರ್ಗೆಟ್. ಮೂರನೇಯದು +1 ನೆಟ್​ ರನ್​ ರೇಟ್​ ಟಾರ್ಗೆಟ್​.

ಇಲ್ಲಿ ಅಫ್ಘಾನಿಸ್ತಾನ್ ನೆಟ್​ ರನ್​ ರೇಟ್​ ಅನ್ನು ಹಿಂದಿಕ್ಕಲು ಟೀಮ್ ಇಂಡಿಯಾ 7.1 ಓವರ್​ನಲ್ಲಿ ಚೇಸ್ ಮಾಡಬೇಕಿತ್ತು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನ್ಯೂಜಿಲೆಂಡ್ ರನ್​ ರೇಟ್​ ಟಾರ್ಗೆಟ್ ಮಾಡಲು ಸೂಚಿಸಲಾಗಿತ್ತು. ಅದರಂತೆ 8.5 ಓವರ್​ನಲ್ಲಿ ಚೇಸ್ ಮಾಡಲು ತಿಳಿಸಲಾಗಿತ್ತು. ಇದೂ ಸಾಧ್ಯವಾಗದಿದ್ದರೆ 11.2 ಓವರೊಳಗೆ ಚೇಸ್ ಮಾಡಿ +1 ರನ್​ ರೇಟ್​ ಪಡೆಯಲು ಸೂಚಿಸಲಾಗಿತ್ತು.

ಈ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 5 ಓವರ್​ನಲ್ಲಿ 70 ರನ್​ ಬಾರಿಸಿದ್ದರು. ಅಷ್ಟೇ 6.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ನೆಟ್ ರನ್​ ರೇಟ್​ ಅನ್ನು ಟೀಮ್ ಇಂಡಿಯಾ ಹಿಂದಿಕ್ಕಿದೆ. ಈ ಮೂಲಕ ಸೆಮಿಫೈನಲ್​ ಆಸೆಯನ್ನು ಜೀವಂತವಿರಿಸಿಕೊಂಡಿದೆ.

ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆದ್ದರೆ, ಅಂತಿಮ ಪಂದ್ಯದಲ್ಲಿ ನಮೀಬಿಯಾವನ್ನು ಮಣಿಸಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(T20 World Cup 2021: How India’s Net Run-Rate Improved After Chasing)

TV9 Kannada


Leave a Reply

Your email address will not be published. Required fields are marked *