T20 World Cup: 6 ವರ್ಷ, 5 ಐಸಿಸಿ ಟೂರ್ನಮೆಂಟ್, 4 ಫೈನಲ್‌! ಇದು ಕಿವೀಸ್ ನಾಯಕ ವಿಲಿಯಮ್ಸನ್ ಸಾಧನೆ | T20 World Cup 2021 Kane Williamson leads New Zealand to 3rd Straight Final in 3 years in ODI Tests and now T20I


T20 World Cup: 6 ವರ್ಷ, 5 ಐಸಿಸಿ ಟೂರ್ನಮೆಂಟ್, 4 ಫೈನಲ್‌! ಇದು ಕಿವೀಸ್ ನಾಯಕ ವಿಲಿಯಮ್ಸನ್ ಸಾಧನೆ

ವಿಲಿಯಮ್ಸನ್

T20 ವಿಶ್ವಕಪ್ 2021 ಪ್ರಾರಂಭವಾಗುವ ಮೊದಲು, ಪಂದ್ಯಾವಳಿಯಲ್ಲಿ ಪ್ರಶಸ್ತಿಗಾಗಿ ದೊಡ್ಡ ಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟ ಮೂರು ತಂಡಗಳು ಈಗಾಗಲೇ ಹೊರಬಿದ್ದಿವೆ. ಭಾರತ ಮತ್ತು ವೆಸ್ಟ್ ಇಂಡೀಸ್ ಗುಂಪು ಹಂತದಲ್ಲಿ ಹಿನ್ನಡೆ ಕಂಡವು. ಆದರೆ, ವಿಶ್ವಕಪ್‌ನಲ್ಲಿ ಅತ್ಯಂತ ಅಪಾಯಕಾರಿ ತಂಡವೆಂದು ಪರಿಗಣಿಸಲ್ಪಟ್ಟ ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ ಕಿವೀಸ್ ವಿರುದ್ಧ ಸೋಲನುಭವಿಸಿತು. ತಮಾಷೆಯೆಂದರೆ.. ಸೆಮಿಫೈನಲ್ ತನಕ ಯಾರೂ ನಿರೀಕ್ಷಿಸದ ಮೊದಲ ಗುಂಪಿನ ಪಂದ್ಯದಲ್ಲಿ ಸೋತ ತಂಡ ಫೈನಲ್ ತಲುಪಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದಲ್ಲದೆ, ಕೇವಲ ಮೂರು ವರ್ಷಗಳಲ್ಲಿ ಯಾವ ನಾಯಕನೂ ಮಾಡದ ಸಾಧನೆಯನ್ನು ಮಾಡಿದೆ.

ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ 2015 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ನ್ಯೂಜಿಲೆಂಡ್ ನಂತರ ಐಸಿಸಿ ಟೂರ್ನಿಗಳಲ್ಲಿ ಸ್ಥಿರ ದಾಖಲೆಯನ್ನು ಕಾಯ್ದುಕೊಂಡಿದೆ. ಅದರಲ್ಲೂ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಕಳೆದ 3 ವರ್ಷಗಳಲ್ಲಿ ಇದೇ ಕೆಲಸ ಮಾಡಿದೆ.

ವಿಲಿಯಮ್ಸನ್ ವಿಶೇಷ ಗೆಲುವು
ವಿಲಿಯಮ್ಸನ್ ನ್ಯೂಜಿಲೆಂಡ್ ತಂಡಕ್ಕೆ ಈ ವಿಶೇಷ ಜಯ ತಂದುಕೊಟ್ಟರು. ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ ನ್ಯೂಜಿಲೆಂಡ್ ಸತತ ಮೂರನೇ ಐಸಿಸಿ ಟೂರ್ನಿಯಲ್ಲಿ ಫೈನಲ್ ತಲುಪಿದೆ. ಮೂರು ವರ್ಷಗಳಲ್ಲಿ ಮೂರನೇ ಫೈನಲ್ ಇದಾಗಿದೆ. ನ್ಯೂಜಿಲೆಂಡ್ ಹೊರತುಪಡಿಸಿದರೆ ಬೇರೆ ಯಾವ ತಂಡವೂ ಈ ಸಾಧನೆ ಮಾಡಿಲ್ಲ. ಕೇನ್ ವಿಲಿಯಮ್ಸನ್ ಅವರು ತಮ್ಮ ತಂಡವನ್ನು ಮೂರು ಸ್ವರೂಪಗಳಲ್ಲಿ ಐಸಿಸಿ ಪಂದ್ಯಾವಳಿಯ ಫೈನಲ್‌ಗೆ ಮುನ್ನಡೆಸಿದ ಮೊದಲ ನಾಯಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಫೈನಲ್ ತಲುಪಿತ್ತು. ಆದರೆ ಅಲ್ಲಿ ಇಂಗ್ಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತು. ನಂತರ ಈ ವರ್ಷ ಜೂನ್ 2021 ರಲ್ಲಿ, ನ್ಯೂಜಿಲೆಂಡ್ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿತು. ಅಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸದ್ಯ ಕಿವೀಸ್ ತಂಡ ಮೊದಲ ಬಾರಿಗೆ ಶಾರ್ಟ್ ಫಾರ್ಮೆಟ್​ನಲ್ಲಿ ಫೈನಲ್ ತಲುಪಿದೆ.

6 ವರ್ಷ, 5 ಪಂದ್ಯಾವಳಿಗಳು, 4 ಫೈನಲ್‌ಗಳು
ಕಳೆದ 6 ವರ್ಷಗಳಲ್ಲಿ ಐಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಆಡಿದ ಐದು ಟೂರ್ನಿಗಳ ಪೈಕಿ ನಾಲ್ಕನೇ ಟೂರ್ನಿಯಲ್ಲಿ ಕಿವೀಸ್ ತಂಡ ಫೈನಲ್ ತಲುಪಿದೆ. 2016ರ ಟಿ20 ವಿಶ್ವಕಪ್‌ನಲ್ಲಿ ಮಾತ್ರ ತಂಡ ಫೈನಲ್‌ನಿಂದ ಹೊರಗುಳಿದಿತ್ತು. ನಂತರ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಗೆಲುವು 2016 ರ ಟಿ20 ವಿಶ್ವಕಪ್ ಸೆಮಿಫೈನಲ್ ಮತ್ತು 2019 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಸೋಲಿಗೆ ಸೇಡು ತೀರಿಸಿಕೊಂಡಿತು.

TV9 Kannada


Leave a Reply

Your email address will not be published. Required fields are marked *