Taapsee Pannu: ‘ನನ್ನ ಲೈಂಗಿಕ ಜೀವನ ಇಂಟರೆಸ್ಟಿಂಗ್​ ಆಗಿಲ್ಲ, ಹಾಗಾಗಿ ಕರಣ್​ ನನ್ನ ಕರೆದಿಲ್ಲ’: ತಾಪ್ಸಿ ಪನ್ನು ನೇರ ಮಾತು | Dobaaraa actress Taapsee Pannu reveals why she is not invited to Koffee with Karan Show


Koffee with Karan | Karan Johar: ಸೆಲೆಬ್ರಿಟಿಗಳ ಲೈಂಗಿಕತೆ ಬಗ್ಗೆ ಬೇಕಂತಲೇ ಪ್ರಶ್ನೆ ಮಾಡಲಾಗುತ್ತದೆ ಎಂಬ ಕಾರಣಕ್ಕೆ ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮವನ್ನು ಅನೇಕರು ಟೀಕಿಸುತ್ತಿದ್ದಾರೆ. ಈಗ ತಾಪ್ಸಿ ಪನ್ನು ಕೂಡ ಆ ಬಗ್ಗೆ ಮಾತಾಡಿದ್ದಾರೆ.

Taapsee Pannu: ‘ನನ್ನ ಲೈಂಗಿಕ ಜೀವನ ಇಂಟರೆಸ್ಟಿಂಗ್​ ಆಗಿಲ್ಲ, ಹಾಗಾಗಿ ಕರಣ್​ ನನ್ನ ಕರೆದಿಲ್ಲ’: ತಾಪ್ಸಿ ಪನ್ನು ನೇರ ಮಾತು

ತಾಪ್ಸಿ ಪನ್ನು, ಕರಣ್ ಜೋಹರ್

ನಟಿ ತಾಪ್ಸಿ ಪನ್ನು (Taapsee Pannu) ಅವರು ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುತ್ತಾರೆ. ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ. ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ಅದೇ ಕಾರಣಕ್ಕಾಗಿ ತಾಪ್ಸಿ ಪನ್ನು ಅನೇಕ ಬಾರಿ ಕಾಂಟ್ರವರ್ಸಿ ಮಾಡಿಕೊಂಡಿದ್ದುಂಟು. ಈಗ ಅವರ ‘ಕಾಫಿ ವಿತ್​ ಕರಣ್​ ಸೀಸನ್​ 7’ (Koffee with Karan) ಬಗ್ಗೆ ಮಾತನಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರನ್ನು ಈ ಬಾರಿ ಆಹ್ವಾನಿಸಲಾಗಿಲ್ಲ. ಯಾಕೆ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ನನ್ನ ಲೈಂಗಿಕ ಜೀವನ ಅಷ್ಟೊಂದು ಇಂಟರೆಸ್ಟಿಂಗ್​ ಆಗಿಲ್ಲ. ಹಾಗಾಗಿ ಕರಣ್​ ಜೋಹರ್​ (Karan Johar) ಅವರು ನನ್ನನ್ನು ಕರೆದಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಪ್ಸಿ ಪನ್ನು ಅವರು ಸದ್ಯ ‘ದೋಬಾರಾ’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್​ 19ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಇದರ ಪ್ರಚಾರದ ಸಲುವಾಗಿ ಅವರು ಅನೇಕ ಕಡೆಗಳಿಗೆ ತೆರಳಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಆದರೆ ‘ಕಾಫಿ ವಿತ್​ ಕರಣ್​​’​ ಶೋನಲ್ಲಿ ಸಿನಿಮಾ ಪ್ರಚಾರ ಮಾಡಲು ತಾಪ್ಸಿಗೆ ಅವಕಾಶ ಸಿಕ್ಕಿಲ್ಲ. ಆ ಕುರಿತು ಕೇಳಿದ್ದಕ್ಕೆ ಹೀಗೆ ನೇರವಾಗಿ ಅವರು ಉತ್ತರ ನೀಡಿದ್ದಾರೆ.

‘ಕಾಫಿ ವಿತ್​ ಕರಣ್​​’ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಹಾಗಾಗಿ ಹೆಚ್ಚು ಬೋಲ್ಡ್​ ಪ್ರಶ್ನೆಗಳನ್ನು ಕರಣ್​ ಜೋಹರ್​ ಕೇಳುತ್ತಿದ್ದಾರೆ. ಅದಕ್ಕೆ ಕೆಲವು ಸೆಲೆಬ್ರಿಟಿಗಳು ಕೂಡ ನೇರವಾಗಿಯೇ ಉತ್ತರ ನೀಡುತ್ತಾರೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಇತ್ತೀಚಿನ ಎಪಿಸೋಡ್​ನಲ್ಲಿ ಅತಿಥಿಯಾಗಿ ಬಂದಿದ್ದ ಆಮಿರ್ ಖಾನ್​ ಅವರು ಕರಣ್​ ಜೋಹರ್​ಗೆ ತಿರುಗೇಟು ನೀಡಿದ್ದರು.

ಈ ಸೀಸನ್​ನಲ್ಲಿ ಅಕ್ಷಯ್​ ಕುಮಾರ್​, ಸಮಂತಾ ರುತ್​ ಪ್ರಭು, ಅನನ್ಯಾ ಪಾಂಡೆ, ವಿಜಯ್​ ದೇವರಕೊಂಡ, ಆಮಿರ್​ ಖಾನ್​, ಕರೀನಾ ಕಪೂರ್ ಖಾನ್​, ಸಾರಾ ಅಲಿ ಖಾನ್​, ಜಾನ್ವಿ ಕಪೂರ್​, ಆಲಿಯಾ ಭಟ್​, ರಣವೀರ್​ ಸಿಂಗ್​ ಅವರು ಅತಿಥಿಗಳಾಗಿ ಬಂದಿದ್ದಾರೆ. ನಟ, ನಿರ್ಮಾಪಕ, ನಿರ್ದೇಶಕನಾಗಿ ಮಾತ್ರವಲ್ಲದೇ ನಿರೂಪಕನಾಗಿಯೂ ಕರಣ್​ ಜೋಹರ್​ ಫೇಮಸ್​ ಆಗಿದ್ದಾರೆ. ಅವರು ತಮ್ಮದೇ ಶೈಲಿಯಲ್ಲಿ ‘ಕಾಫಿ ವಿತ್​ ಕರಣ್​’ ಶೋ ನಡೆಸಿಕೊಡುತ್ತಿದ್ದಾರೆ. ಆದರೆ ಸೆಲೆಬ್ರಿಟಿಗಳ ಲೈಂಗಿಕತೆ ಬಗ್ಗೆ ಬೇಕಂತಲೇ ಪ್ರಶ್ನೆ ಮಾಡಲಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಅನೇಕರು ಟೀಕಿಸುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *