Tabebuia Rosea: ಎಲೆಯೇ ಇಲ್ಲದೆ ಹೂವನ್ನೇ ಹೊದ್ದು ನಿಂತ ಗುಲಾಬಿ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ ಬೆಂಗಳೂರು – Tabebuia Rosea bengaluru is in pretty pink

ಬೆಂಗಳೂರಿನ ಲಾಲ್ ಬಾಗ್, ಕಬ್ಬನ್ ಪಾರ್ಕ್​ಗೆ ಹೋದರೆ ಟಬಿಬಿಯಾ ಸೌಂದರ್ಯವನ್ನು ಸವಿಯಬಹುದು. ಅಲ್ಲದೆ ನಗರದ ಅನೇಕ ಕಡೆ ರಸ್ತೆಗಳಲ್ಲಿ ಟಬಿಬಿಯಾ ಮರಗಳನ್ನು ನೋಡಬಹುದು.

Nov 21, 2022 | 4:11 PM

TV9kannada Web Team

| Edited By: Ayesha Banu

Nov 21, 2022 | 4:11 PM

ಉದ್ಯಾನ ನಗರಿಯಲ್ಲಿ ಈಗ ವಸಂತ ಸಂಭ್ರಮ ಮನೆ ಮಾಡಿದೆ. ನಗರದ ಸುತ್ತಮುತ್ತ ಗುಲಾಬಿ ಬಣ್ಣದ ಹೂಗಳ ಕಲರವ ಹೆಚ್ಚಾಗಿದೆ. ಮೈ ನಡುಗುವ ಚಳಿಯಲ್ಲಿ ಹಲ್ಲು ಬಿಗಿಹಿಡಿದು ರಸ್ತೆಯಲ್ಲಿ ನಡೆದುಕೊಂಡು ಹೂಗುವವರಿಗೆ ಪಿಂಕ್ ಪೋಯ್ ಅಥವಾ ಟಬಿಬಿಯಾ ರೋಸಿಯಾ ಹೂಗಳು ಗಮನ ಸೆಳೆಯುತ್ತಿವೆ. ಪುಷ್ಪ ಪ್ರಿಯರಂತೂ ಹೂಗಳ ಜೊತೆ ಚಂದ ಚಂದದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಪ್ರತಿಯೊಂದು ಋತುವೂ ತನ್ನದೇ ಸೊಬಗನ್ನು ಹೊತ್ತುನಿಂತಿದೆ. ಚಳಿಗಾಲ ಅಂದರೆ ನವೆಂಬರ್ ತಿಂಗಳಲ್ಲಿ ಅರಳುವ ಅಮೆರಿಕ ಮೂಲದ ಟಬಿಬಿಯಾ ರೋಸಿಯಾ ಹೂವುಗಳು ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿದೆ. ಹಿಂದಿಯಲ್ಲಿ ಇದನ್ನು 'ಬಸಂತ್ ರಾಣಿ' ಎಂದು ಕರೆಯುತ್ತಾರೆ.

ಪ್ರತಿಯೊಂದು ಋತುವೂ ತನ್ನದೇ ಸೊಬಗನ್ನು ಹೊತ್ತುನಿಂತಿದೆ. ಚಳಿಗಾಲ ಅಂದರೆ ನವೆಂಬರ್ ತಿಂಗಳಲ್ಲಿ ಅರಳುವ ಅಮೆರಿಕ ಮೂಲದ ಟಬಿಬಿಯಾ ರೋಸಿಯಾ ಹೂವುಗಳು ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿದೆ. ಹಿಂದಿಯಲ್ಲಿ ಇದನ್ನು ‘ಬಸಂತ್ ರಾಣಿ’ ಎಂದು ಕರೆಯುತ್ತಾರೆ.

ಬೆಂಗಳೂರಿನ ಲಾಲ್ ಬಾಗ್, ಕಬ್ಬನ್ ಪಾರ್ಕ್​ಗೆ ಹೋದರೆ ಟಬಿಬಿಯಾ ಸೌಂದರ್ಯವನ್ನು ಸವಿಯಬಹುದು. ಅಲ್ಲದೆ ನಗರದ ಅನೇಕ ಕಡೆ ರಸ್ತೆಗಳಲ್ಲಿ ಟಬಿಬಿಯಾ ಮರಗಳನ್ನು ನೋಡಬಹುದು.

Tabebuia Rosea bengaluru is in pretty pink

ಟಬಿಬಿಯಾದ ವೈಜ್ಞಾನಿಕ ಹೆಸರು ಬಿಗ್ನೋನಿಯೇಸಿ ಕುಟುಂಬಕ್ಕೆ ಸೇರಿದ್ದಾಗಿದೆ. ಇದು ಮೂಲತಃ ಪೆರು ದೇಶದ ಹೂವು. ಇವು ಕಾಲಕ್ಕನುಗುಣವಾಗಿ ಅರಳುತ್ತವೆ. ಈ ಹೂಗಳು ಕೇವಲ ಚಳಿಗಾಲದಲ್ಲಿ ಅರಳುತ್ತವೆ. ಹಾಗೂ ಒಂದು ತಿಂಗಳು ಮಾತ್ರ ಇವು ಮರದಲ್ಲಿ ಕಂಗೊಳಿಸುತ್ತವೆ.

ಟಿಬಿಬಿಯಾದಲ್ಲಿ ಹಲವು ಬಗೆಯ 90 ಕ್ಕೂ ಹೆಚ್ಚು ತಳಿಗಳಿವೆ. ಇದು ಕ್ಯೂಬಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೆಕ್ಸಿಕೊ, ಕೆರಿಬಿಯನ್, ಅರ್ಜೆಂಟೀನಾ, ಅಮೆರಿಕ ಸೇರಿದಂತೆ ಉಪಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು.

ಉಪ ಉಷ್ಣವಲಯದಲ್ಲಿ ಬೆಳೆಯುವ ಇವು ಸುಮಾರು 100 ಅಡಿಗಳಷ್ಟು (30 ಮೀಟರ್‌) ಎತ್ತರ ಇರುತ್ತವೆ. ಕೋಸ್ಟಾರಿಕಾದಲ್ಲಿ ಇದನ್ನು 'ಸವನ್ನಾ ಓಕ್‌' ಎಂದೇ ಕರೆಯುತ್ತಾರೆ. ಇದಕ್ಕೆ 20 ರಿಂದ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಬೇಕು. ಎಲ್ಲ ವಿಧದ ಮಣ್ಣುಗಳಲ್ಲೂ ಬೆಳೆಯಬಲ್ಲ ಟಬಿಬಿಯಾಗೆ ವಾರ್ಷಿಕ 500 ಮಿಲಿಮೀಟರ್ ಮಳೆ ಬೇಕು. ಈ ಹೂವನ್ನು ಎಲ್‌-ಸಾಲ್ವೆಡಾರ್‌ ದೇಶ ತನ್ನ ರಾಷ್ಟ್ರೀಯ ಹೂವಾಗಿ ಘೋಷಿಸಿದೆ.

ಉಪ ಉಷ್ಣವಲಯದಲ್ಲಿ ಬೆಳೆಯುವ ಇವು ಸುಮಾರು 100 ಅಡಿಗಳಷ್ಟು (30 ಮೀಟರ್‌) ಎತ್ತರ ಇರುತ್ತವೆ. ಕೋಸ್ಟಾರಿಕಾದಲ್ಲಿ ಇದನ್ನು ‘ಸವನ್ನಾ ಓಕ್‌’ ಎಂದೇ ಕರೆಯುತ್ತಾರೆ. ಇದಕ್ಕೆ 20 ರಿಂದ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಬೇಕು. ಎಲ್ಲ ವಿಧದ ಮಣ್ಣುಗಳಲ್ಲೂ ಬೆಳೆಯಬಲ್ಲ ಟಬಿಬಿಯಾಗೆ ವಾರ್ಷಿಕ 500 ಮಿಲಿಮೀಟರ್ ಮಳೆ ಬೇಕು. ಈ ಹೂವನ್ನು ಎಲ್‌-ಸಾಲ್ವೆಡಾರ್‌ ದೇಶ ತನ್ನ ರಾಷ್ಟ್ರೀಯ ಹೂವಾಗಿ ಘೋಷಿಸಿದೆ.

ಟಬಿಬಿಯಾ ಕೇವಲ ಗುಲಾಬಿ ಬಣ್ಣವಷ್ಟೇ ಅಲ್ಲದೆ, ಬಿಳಿ, ಹಳದಿ, ನೇರಳೆ ಬಣ್ಣದಲ್ಲೂ ಕಂಡುಬರುತ್ತವೆ. ನಗರದ ಸದಾಶಿವ ನಗರ, ಕೋರಮಂಗಲದಲ್ಲೂ ಜನರನ್ನು ಸೆಳೆಯುತ್ತಿವೆ.

ಇನ್ನು ಇವು ಬೆಂಗಳೂರಿಗೆ ಬಂದದ್ದು ಹೇಗೆ? ಬ್ರಿಟಿಷರ ಕಾಲದ ಕೊನೆಗೊಳ್ಳುವ ಸಮಯ ಆನ ತಾನೇ ಸ್ವಾತಂತ್ರ್ಯ ಬಂದಿತ್ತು. ಆ ಸಮಯದಲ್ಲಿ ನಮ್ಮ ತೋಟಗಾರಿಕಾ ತಜ್ಞರು ಬೆಂಗಳೂರಿನಲ್ಲಿ ವಿವಿಧ ಜಾತಿಯ ಹೂವುಗಳು ಮತ್ತು ಸಸ್ಯಗಳನ್ನು ಬೆಳೆಯುವ ಬಗ್ಗೆ ಚರ್ಚಿಸಿ ಈ ಹೂಗಳನ್ನು ಬೆಂಗಳೂರಿಗೆ ಉಡುಗೊರೆಯಾಗಿ ಕೊಟ್ಟರು.

ಬೆಂಗಳೂರು ವಾಸ್ತವವಾಗಿ ಒಣ ಪ್ರದೇಶವಾಗಿದ್ದು, ನಗರದ ಸಂಸ್ಥಾಪಕ ಕೆಂಪೇಗೌಡ ಮತ್ತು ಹಿಂದಿನ ಮೈಸೂರು ಸಾಮ್ರಾಜ್ಯದ ಅರಸರು ಪರಿಸರ ವ್ಯವಸ್ಥೆಯನ್ನು ವೈವಿಧ್ಯಗೊಳಿಸಲು ಕೆರೆಗಳನ್ನು ಅಭಿವೃದ್ಧಿಪಡಿಸಿ ಅನೇಕ ಜಾತಿಯ ಮರಗಳನ್ನು ನೆಟ್ಟಿದರು ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇವು ಬೆಂಗಳೂರಿಗೆ ಬಂದದ್ದು ಹೇಗೆ? ಬ್ರಿಟಿಷರ ಕಾಲದ ಕೊನೆಗೊಳ್ಳುವ ಸಮಯ ಆನ ತಾನೇ ಸ್ವಾತಂತ್ರ್ಯ ಬಂದಿತ್ತು. ಆ ಸಮಯದಲ್ಲಿ ನಮ್ಮ ತೋಟಗಾರಿಕಾ ತಜ್ಞರು ಬೆಂಗಳೂರಿನಲ್ಲಿ ವಿವಿಧ ಜಾತಿಯ ಹೂವುಗಳು ಮತ್ತು ಸಸ್ಯಗಳನ್ನು ಬೆಳೆಯುವ ಬಗ್ಗೆ ಚರ್ಚಿಸಿ ಈ ಹೂಗಳನ್ನು ಬೆಂಗಳೂರಿಗೆ ಉಡುಗೊರೆಯಾಗಿ ಕೊಟ್ಟರು.

Most Read Stories

TV9 Kannada

Leave a Reply

Your email address will not be published. Required fields are marked *