Categories
Cinema

ಸೋಷಿಯಲ್ ಮೀಡಿಯಾ ಎಂಟ್ರಿಕೊಟ್ಟ ಮೊದಲ ದಿನವೇ ಕೋವಿಡ್ ಜಾಗೃತಿ ಮೂಡಿಸಿದ ರವಿಚಂದ್ರನ್​

ಬೆಂಗಳೂರು: ಕನ್ನಡ ಚಿತ್ರರಂಗದ ನೆಮ್ಮೆಲ್ಲರ ಪ್ರೀತಿಯ ರವಿಮಾಮ ಎಲ್ಲರಿಗೂ ಯುಗಾದಿ ಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ಪ್ರೇಮಲೋಕದ ದೊರೆ ಇಂದು ಅಧಿಕೃತವಾಗಿ ಸೋಷಿಯಲ್ ಮೀಡಿಯಾಗಳಿಗೆ ಎಂಟ್ರಿ ಕೊಟ್ಟಿದ್ದಾರೆ.

ಒನ್​ ಆ್ಯಂಡ್​ ಓನ್ಲಿ ರವಿಚಂದ್ರನ್​ ( @1n1ly_VRC) ಎಂಬುದು ಅವರ ಅಧಿಕೃತ ಖಾತೆಗಳ ಹೆಸರು. ಮೊದಲ ದಿನವೇ ಅವರು ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾಗಳಿಗೆ ಪದಾರ್ಪಣೆ ಮಾಡಿರುವ ರವಿಚಂದ್ರನ್ ಅವರು ತಮ್ಮ ಅಭಿಮಾನಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಯೂಟ್ಯೂಬ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೋವಿಡ್ ಪಿಡುಗಿನ ಕುರಿತು ಜಾಗೃತಿ ಮೂಡಿಸಿದ್ದಾರೆ. ‘ಧೂಮಪಾನ ಆರೋಗ್ಯಕ್ಕೆ ಹಾನಿಕರ. ಅದರಿಂದ ಸಾವು ಸಂಭವಿಸುತ್ತದೆ. ಈ ಮಾತನ್ನು ಎಲ್ಲ ಸಿಗರೇಟ್​ ಪ್ಯಾಕ್​ ಮೇಲೆ ಬರೆದಿರುತ್ತಾರೆ. ಸಿನಿಮಾಗೆ ಹೋದರೆ ಮೊದಲು ತೋರಿಸೋದೇ ಇದು. ಆದರೂ ಯಾರೂ ಸಿಗರೇಟ್​ ಸೇದೋದು ಕಡಿಮೆ ಮಾಡಿಲ್ಲ. ಸರ್ಕಾರಕ್ಕೆ ಇದರಿಂದ ಆದಾಯವೂ ಕಡಿಮೆ ಆಗಿಲ್ಲ. ಯಾಕೆಂದರೆ ನಮ್ಮಲ್ಲಿ ಒಂದು ಗುಣ ಇದೆ. ನಾವು ಎಲ್ಲದಕ್ಕೂ ಚಾನ್ಸ್​ ತಗೊಳ್ತೀವಿ. ತಪ್ಪು ಅಂತ ಗೊತ್ತಿದ್ದರೂ ತಪ್ಪು ಮಾಡುವ ಗುಣ ನಮ್ಮಲ್ಲಿದೆ. ಅಬ್ಬಬ್ಬಾ ಎಂದರೆ ಕ್ಷಮೆ ಕೇಳಿ ಸರಿಮಾಡಿಕೊಳ್ಳಬಹುದು ಎಂದುಕೊಳ್ಳುತ್ತೇನೆ. ಕೋವಿಡ್ ಜೊತೆ ಚಾನ್ಸ್​ ತಗೋಬೇಡಿ. ಒಳ್ಳೇದಲ್ಲ. ನಾನು ಸಿಗರೇಟ್​ ಸೇದೋದು ಸಿನಿಮಾದಲ್ಲಿ ಮಾತ್ರ. ಪಾತ್ರಗಳಿಗಾಗಿ ಮಾತ್ರ’ಎಂದು ರವಿಚಂದ್ರನ್​ ಹೇಳಿದ್ದಾರೆ.

ಇನ್ನು ರವಿಚಂದ್ರನ್ ಅವರ ಟ್ವಿಟರ್, ಫೇಸ್‍ಬುಕ್ ಹಾಗೂ ಯುಟ್ಯೂಬ್‍ ಎಂಟ್ರಿಗೆ ಕನ್ನಡದ ಚಿತ್ರರಂಗದಿಂದ ಹಾಗೂ ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿದೆ.

ಸಿನೆಮಾ – Udayavani – ಉದಯವಾಣಿ
Read More

Categories
Cinema

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟ ಡಾ. ರಾಜಕುಮಾರ್‌ ಅವರ 15ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ. ರಾಜಕುಮಾರ್‌ ಸಮಾಧಿ ಬಳಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಡಾ. ರಾಜಕುಮಾರ್‌ ಹಿರಿಯ ಪುತ್ರ ಹಾಗೂ ನಟ ಶಿವರಾಜಕುಮಾರ್‌ ದಂಪತಿ ಸೇರಿದಂತೆ ರಾಜ್‌ ಕುಟುಂಬ ವರ್ಗದವರು ಹಾಜರಿದ್ದು ಡಾ. ರಾಜಕುಮಾರ್‌ ಹಾಗೂ ಪಾರ್ವತಮ್ಮ ರಾಜಕುಮಾರ್‌ ಅವರ ಪುಣ್ಯಭೂಮಿಗೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಿದರು.

ಇದೇ ವೇಳೆ ಡಾ. ರಾಜಕುಮಾರ್‌ ಅವರ ಕುರಿತಾಗಿ ರಚಿಸಲಾದ “ವಿಶ್ವ ಮಾನವ ಡಾ. ರಾಜಕುಮಾರ್‌’ ಪುಸ್ತಕವನ್ನು ನಟ ಶಿವರಾಜಕುಮಾರ್‌ ಬಿಡುಗಡೆ ಮಾಡಿದರು. ಡಾ.ರಾಜಕುಮಾರ್‌ ಅಭಿಮಾನಿಗಳೇ ಸೇರಿ ರಚಿಸಿರುವ ಈ ಕೃತಿಯಲ್ಲಿ ಡಾ. ರಾಜ ಕುಮಾರ್‌ ಅವರ ವ್ಯಕ್ತಿತ್ವ, ಅವರ ಬದುಕಿನ ಅಪರೂಪದ ಘಟನೆಗಳನ್ನು ದಾಖಲಿಸಲಾಗಿದೆ.

ಇನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅಭಿಮಾನಿಗಳು ಕೂಡ ಬೆಳಿಗ್ಗೆಯಿಂದಲೇ ಸಮಾಧಿ ಬಳಿ ಪೂಜೆ ಸಲ್ಲಿಸಿ, ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದರು. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, ವರನಟನ ಸ್ಮರಣೆ ಮಾಡಿದರು.

ಡಾ. ರಾಜಕುಮಾರ್‌ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳು ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ಹಲವು ಸಮಾಜಮುಖೀ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಕಳೆದ ವರ್ಷದಂತೆ, ಈ ಬಾರಿಯೂ ಕೊರೋನಾ ಆತಂಕ ಇನ್ನೂ ಹೆಚ್ಚಾಗುತ್ತಿರುವುದರಿಂದ, ಆದಷ್ಟು ಸರಳವಾಗಿ ಡಾ. ರಾಜಕುಮಾರ್‌ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಅಣ್ಣಾವ್ರನ್ನು ನೆನೆದ ಗಣ್ಯರು

ಡಾ. ರಾಜಕುಮಾರ್‌ 15ನೇ ಪುಣ್ಯತಿಥಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅಣ್ಣಾವ್ರನ್ನು ಸ್ಮರಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ, “ಅಪ್ರತಿಮ ಕಲಾವಿದ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್‌ ಕುಮಾರ್‌ ಅವರ ಪುಣ್ಯತಿಥಿಯಂದು ಅವರಿಗೆ ಅಭಿಮಾನ ಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ “ಅಣ್ಣಾವ್ರು’, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಟ್ವಿಟ್ಟರ್‌ ನಲ್ಲಿ ನಮನ ಸಲ್ಲಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ, “ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್‌ ಅವರ ಪುಣ್ಯತಿಥಿಯಂದು ನನ್ನ ನಮನಗಳು’ ಎಂದು ಟ್ವೀಟ್‌ ಮಾಡಿದ್ದಾರೆ. ಉಳಿದಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ರಾಜಕೀಯ ರಂಗದ ಅನೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಡಾ. ರಾಜಕುಮಾರ್‌ ಅವರನ್ನು ಸ್ಮರಿಸಿದ್ದಾರೆ

ಸಿನೆಮಾ – Udayavani – ಉದಯವಾಣಿ
Read More

Categories
Cinema

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ದೇಶದಲ್ಲಿರುವ ಇತರ ಉದ್ಯಮಗಳು ಮತ್ತು ಕ್ಷೇತ್ರಗಳು ಸಂಘಟಿತರಾಗಿರುವಂತೆ, ಚಿತ್ರರಂಗ ಕೂಡ ಸಂಘಟಿತವಾಗಿರಬೇಕು. ಅದರಲ್ಲೂ ಚಿತ್ರರಂಗದಲ್ಲಿ ಕಲಾವಿದರಾದವರಿಗೆ ಜೀವನ ಭದ್ರತೆ ಇರುವುದಿಲ್ಲ. ಹಾಗಾಗಿ, ಕಲಾವಿದರು ಮೊದಲು ಸಂಘಟಿತರಾಗಬೇಕು ಎಂಬ ಯೋಚನೆಯನ್ನು ಹೊಂದಿದ್ದವರು ವರನಟ ಡಾ. ರಾಜಕುಮಾರ್‌. ಅಂದಹಾಗೆ, ಡಾ. ರಾಜಕುಮಾರ್‌ ಅವರಿಗೆ ಇಂಥದ್ದೊಂದು ಯೋಚನೆ ಬರಲು ಕಾರಣವಾಗಿದ್ದು “ಬಸವೇಶ್ವರ’ ಚಿತ್ರ.

“ಬಸವೇಶ್ವರ’ ಚಿತ್ರ ಕೆಲ ತೊಂದರೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಈ ವೇಳೆ ಅದರಲ್ಲಿ ಅಭಿನಯಿಸಬೇಕಾದ ಕಲಾವಿದರು, ತಂತ್ರಜ್ಞರು ಸಂಕಷ್ಟಕ್ಕೆ ಒಳಗಾದರು. ಸಹ ಕಲಾವಿದರು ಮತ್ತು ತಂತ್ರಜ್ಞರ ಈ ಸ್ಥಿತಿಯನ್ನು ಹತ್ತಿರದಿಂದ ಕಂಡ ಡಾ. ರಾಜ್‌, ಕಲಾವಿದರು ಮತ್ತು ತಂತ್ರಜ್ಞರ ನೆರವಿಗಾಗಿ ಸಂಘಟನೆಯೊಂದರ ಅಗತ್ಯತೆಯನ್ನು ಮನಗೊಂಡರು. ಆಗ ಪ್ರಾರಂಭವಾಗಿದ್ದೇ, “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’.

ಇದನ್ನೂ ಓದಿ:ನಮ್ಮ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಡಾ. ರಾಜಕುಮಾರ್‌, ಅಯ್ಯರ್‌, ಬಾಲಕೃಷ್ಣ, ನರಸಿಂಹರಾಜು ಈ ನಾಲ್ವರು ಗಳಿಸಿ, ಉಳಿಸಿದ ಒಂದಷ್ಟು ಭಾಗವೇ ಆರಂಭದಲ್ಲಿ ಈ ಸಂಘಕ್ಕೆ ಬಂಡವಾಳವಾಯಿತು. ಸಾಕಷ್ಟು ನಾಟಕಗಳಲ್ಲಿ ನಟಿಸಿದ ಅನುಭವವಿದ್ದ ಹಿರಿಯ ನಿರ್ದೇಶಕ ಭಗವಾನ್‌ ಆ ಸಂಸ್ಥೆಯ ಮೊದಲ ವ್ಯವಸ್ಥಾಪಕರಾದರು. ಆ ನಂತರ “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’ಕ್ಕೆ ಬೆನ್ನೆಲುಬಾಗಿ ನಿಂತು ಹೊಸ ಆಯಾಮ ಕೊಟ್ಟವರು ನಟ ರೆಬಲ್‌ಸ್ಟಾರ್‌ ಅಂಬರೀಶ್‌.

ಅಂದು ಚಿಕ್ಕದಾಗಿ ಪ್ರಾರಂಭವಾದ “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’ ಇಂದು ತನ್ನದೇಯಾದ ಭವ್ಯವಾದ ಸ್ವಂತ ಕಟ್ಟಡ, ಆಡಿಟೋರಿಯಂ ಹೀಗೆ ಹತ್ತಾರು ಸೌಕರ್ಯಗಳನ್ನು ಹೊಂದಿದೆ. ಕಳೆದ ವರ್ಷ ಕೋವಿಡ್‌ನ‌ಂತಹ ಸಂದರ್ಭದಲ್ಲೂ ಕಲಾವಿದರ ಸಂಘ ಸಾವಿರಾರು ಕಲಾವಿದರಿಗೆ ನೆರವಾಯಿತು.

ಅಂದಹಾಗೆ, ಇಡೀ ಭಾರತದಲ್ಲಿಯೇ “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’ವನ್ನು ಹೊರತುಪಡಿಸಿದರೆ, ಇಂತಹ ಸುಸಜ್ಜಿತವಾದ ಕಟ್ಟಡ ವ್ಯವಸ್ಥೆಯನ್ನು ಹೊಂದಿರುವ ಮತ್ತೂಂದು ಕಲಾವಿದರ ಸಂಘ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಅನ್ನೋದು ಇದರ ಹೆಗ್ಗಳಿಕೆ.

ಸಿನೆಮಾ – Udayavani – ಉದಯವಾಣಿ
Read More

Categories
Cinema

ಚೊಚ್ಚಲ ನಿರ್ದೇಶಕ ಸಂತೋಷ್ ಜಿ. ಸಿನಿಮಾಗೆ ಪುಟ್ಟಣ್ಣನವರ ಕ್ಲಾಸಿಕ್ ಚಿತ್ರ 'ಶುಭಮಂಗಳ' ಹೆಸರು

ಹಳೆಯ ಕ್ಲಾಸಿಕ್ ಚಿತ್ರಗಳ ಶೀರ್ಷಿಕೆಗಳನ್ನು ತಮ್ಮ ಹೊಸ ಚಿತ್ರಗಳಿಗಿಡುವುದು ಕನ್ನಡ ಸಿನಿ ಉದ್ಯಮದಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್. ಇದಾಗಲೇ ಗಣೇಶ್ ಅಭಿನಯದ "ಗೀತಾ", ಶರಣ್ ಅಭಿನಯದ "ಗುರು ಶಿಷ್ಯರು"  ಇಂತಹಾ ಕ್ಲಾಸಿಕ್ ಶೀರ್ಷಿಕೆಗಳನ್ನು ಪಡೆದುಕೊಂಡಿದೆ. ಇದೀಗ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಶುಭಮಂಗಳ" ಚಿತ್ರದ ಸರದಿ.

ಸ್ಯಾಂಡಲ್ ವಿಡ್ ಗೆ ಹೊಸಬರಾದ ನಿರ್ದೇಶಕ ಸಂತೋಷ್ ಜಿ. ತಮ್ಮ ಚಿತ್ರಕ್ಕೆ "ಶುಭಮಂಗಳ" ಶೀರ್ಷಿಕೆ ಫೈನಲ್ ಮಾಡಿದ್ದಾರೆ. ಸಿನಿಮಾದಲ್ಲಿ ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ಸಿದ್ಧಾರ್ಥ್ ಮಾದ್ಯಮಿಕ, ರಾಕೇಶ್ ಮಯ್ಯ  ಅಭಿನಯಿಸಿದ್ದು ಶೂಟಿಂಗ್ ಪೂರ್ಣಗೊಳಿಸಿದ್ದ ಈ ಚಿತ್ರಕ್ಕೆ ಇದೀಗ ಕನ್ನಡದ ಕ್ಲಾಸಿಕ್ ಚಿತ್ರದ ಹೆಸರನ್ನಿಡಲಾಗಿದೆ.

ಆರತಿ, ಶ್ರೀನಾಥ್, ಅಂಬರೀಶ್, ಶಿವರಾಮ್ ನಟಿಸಿದ 1975ರ ಚಿತ್ರ ಇಂದಿಗೂ ಸಿನಿ ಅಭಿಮಾನಿಗಳ ಎದೆಯಲ್ಲಿ ಸ್ಥಾನ ಪಡೆದಿದೆ. ಹಿರಿಯ ನಿರ್ದೇಶಕ ಭಗವಾನ್(ದೊರೆ ಭಗವಾನ್) ಅನಾವರಣಗೊಳಿಸಿದ ಶೀರ್ಷಿಕೆ ಲಾಂಚ್ ಸಂಬಂಧ ತಂಡ ವಿಶೇಷವಾದ ಟೀಸರ್ ಸಹ ಬಿಡುಗಡೆ ಮಾಡಿದೆ. ಕಿರುಚಿತ್ರ ನಿರ್ದೇಶಕ ಸಂತೋಷ್ ಅವರ  ಕಥೆ ವಿವಾಹ, ಪ್ರೀತಿ, ಕಾಮನೆ, ಮಕ್ಕಳು, ವೃದ್ದರನ್ನು ಒಳಗೊಂಡಿದೆ. ಜುದಾ ಸ್ಯಾಂಡಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದರೆ ರಾಕೇಶ್ ಕ್ಯಾಮರಾ ನಿರ್ವಹಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ. 100 ಪ್ರೇಕ್ಷಕರಿಗೆ  ಅವಕಾಶ ಸಿಕ್ಕಿದ ನಂತರ ಬಿಡುಗಡೆಯಾಗಲು ಕಾಯುತ್ತಿರುವ ಚಿತ್ರಗಳಲ್ಲಿ "ಶುಭಮಂಗಳ" ಕೂಡ ಒಂದಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಡಾ.ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ: ಮುಖ್ಯಮಂತ್ರಿ ಸೇರಿದಂತೆ ಗಣ್ಯರು, ಕಲಾವಿದರು, ಅಭಿಮಾನಿಗಳು, ಕುಟುಂಬ ವರ್ಗ ಸ್ಮರಣೆ 

ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ, ಅನಭಿಷಿಕ್ತ ನಟಸಾರ್ವಭೌಮ ಡಾ ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ.  ಭಾರತೀಯ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಡಾ ರಾಜ್ ಕುಮಾರ್ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದವರು.

ಇಂದಿಗೂ ಅವರನ್ನು ನೆನೆಸಿಕೊಳ್ಳದವರು ಬಹುಶಃ ಕರ್ನಾಟಕದಲ್ಲಿ ಯಾರೂ ಇರಲಿಕ್ಕಿಲ್ಲ. ಅಭಿಮಾನಿಗಳ ಹೃದಯದಲ್ಲಿ ಅವರು ಅಜರಾಮರಾಗಿದ್ದಾರೆ. ಅವರ ಅಚ್ಚಳಿಯದ ಚಿತ್ರಗಳು, ನಟನೆ, ಅದ್ಬುತ ಕಂಠಕ್ಕೆ ಮನಸೋಲದವರಿಲ್ಲ. 2006ರ ಏಪ್ರಿಲ್ 12ರಂದು ಡಾ ರಾಜ್ ಕುಮಾರ್ ಭೌತಿಕವಾಗಿ ಅಗಲಿಹೋದರು. ಆಗ ಅವರಿಗೆ 76 ವರ್ಷವಾಗಿತ್ತು.

ಅವರ ನಿಧನ ನಂತರವೂ ಅವರ ಹೆಸರಿನಲ್ಲಿ ಜನ್ಮದಿನ ಮತ್ತು ಪುಣ್ಯದಿನದಂದು ಅಭಿಮಾನಿಗಳ ಸಂಘ, ಕುಟುಂಬ ವರ್ಗದವರು ಹತ್ತಾರು ಕಾರ್ಯಕ್ರಮಗಳು, ನೇತ್ರದಾನ, ರಕ್ತದಾನ, ಅನ್ನದಾನ , ಆರೋಗ್ಯ ತಪಾಸಣೆ ಇತ್ಯಾದಿಗಳನ್ನು ಹಮ್ಮಿಕೊಂಡು ಬಂದಿದ್ದಾರೆ.

ಇಂದು 15ನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅವರ ಮಕ್ಕಳು, ಕುಟುಂಬ ವರ್ಗ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು, ಸ್ಯಾಂಡಲ್ ವುಡ್ ಕಲಾವಿದರು, ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ನಿರ್ದೇಶಕ ಪವನ್ ಕುಮಾರ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್?

ನಿರ್ದೇಶಕ ಸಂತೋಷ್ ಆನಂದರಾಮ್ ಅವರು "ಯುವರತ್ನ"ದ ನಂತರ ಪುನೀತ್ ರಾಜ್‌ಕುಮಾರ್ ಉತ್ತಮ ಆಫರ್ ಗಳನ್ನು ಹೊಂದಿದ್ದಾರೆ. ಅವರೀಗ ನಿರ್ದೇಶಕ ಪವನ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ.  ಪ್ರಮುಖ ಪ್ರೊಡಕ್ಷನ್ ಹೌಸ್‌ ಒಂದರ ಪ್ರೋತ್ಸಾಹದೊಂದಿಗೆ ಈ ಚಿತ್ರ ತಯಾರಾಗಿತ್ತಿದ್ದು ಇದಾಗಲೇ ನಟನ ಅಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನವನ್ನುಂಟು ಮಾಡಿದೆ.

ಲೂಸಿಯಾ ಮತ್ತು ಯು-ಟರ್ನ್‌ ಚಿತ್ರದ ಮೂಲಕ ಪ್ರಸಿದ್ಧರಾಗಿರುವ ನಿರ್ದೇಶಕ ಪವನ್, ಪವರ್‌ಸ್ಟಾರ್ ಇದಾಗಲೇ ನಿರ್ಮಾಣ ಸಂಸ್ಥೆ ಅನುಮೋದಿಸಿದ ಸ್ಕ್ರಿಪ್ಟ್ ಗೆ ಒಪ್ಪಿದ್ದಾರೆ. ಆದರೂ ನಟ ಅಥವಾ ನಿರ್ದೇಶ್ಕರು ಇದುವರೆಗೆ ಯೋಜನೆ ಬಗ್ಗೆ ಯಾವ ಅಧಿಕೃತ ಹೇಳಿಕೆ ನೀಡಿಲ್ಲ.

ಏತನ್ಮಧ್ಯೆ, ಯುವರತ್ನದ ನಂತರ ಪುನೀತ್ ನಿರ್ದೇಶಕ ಚೇತನ್ ಕುಮಾರ್ ಅವರ ಆಕ್ಷನ್ ಎಂಟರ್ಟೈನರ್ ಜೇಮ್ಸ್ ಕಡೆಗೆ ಗಮನ ಹರಿಸಿದ್ದಾರೆ. . ಮತ್ತೊಂದೆಡೆ, ಪವನ್ ತಮ್ಮ ತೆಲುಗು ವೆಬ್‌ಸರೀಸ್‌ಗಳ ಪ್ರಿ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಘೋಷಣೆಯಾಗುವ ನಿರೀಕ್ಷೆಇರುವ ಪುನೀತ್ ಚಿತ್ರದ ಚಿತ್ರಕಥೆಯಲ್ಲಿ ನಿರ್ದೇಶಕ ಏಕಕಾಲದಲ್ಲಿ ಕೆಲಸ ಮಾಡಲಿದ್ದಾರೆ, ಏತನ್ಮಧ್ಯೆ, ಜಯಣ್ಣ ಫಿಲ್ಮ್ಸ್ ನಿರ್ಮಾಣ ಮಾಡಿದ ದಿನಕರ್ ತೂಗುದೀಪ ಚಿತ್ರದಲ್ಲಿ ಸಹ ಪುನೀತ್ ಅಭಿನಯಿಸುವವರಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆ. ಯೋಜನೆಯ ಬಹುಪಾಲು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದ್ದು ಪುನೀತ್ "ಪೈಲ್ವಾನ್" ನಿರ್ದೇಶಕ  ಎಸ್ ಕೃಷ್ಣ ಅವರೊಂದಿಗೂ ಕಮರ್ಷಿಯಲ್ ಎಂಟರ್ಟೈನರ್ ಒಂದರಲ್ಲಿ ಕಾಣಿಸಿಕೊಳ್ಳಲು ತೀರ್ಮಾನಿಸಿದ್ದಾರೆ, ಈ ಚಿತ್ರದಲ್ಲಿ ಪುನೀತ್ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ತಪ್ಪದೆ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ : ಜನರಲ್ಲಿ ನಟಿ ಸುಧಾರಾಣಿ ಮನವಿ

ಬೆಂಗಳೂರು: ಚಂದನವನದ ಹಿರಿಯ ನಟಿ ಸುಧಾರಾಣಿ ಅವರು ಕೋವಿಡ್-19 2ನೇ ಅಲೆಯ ವಿರುದ್ಧ ಜಾಗೃತಿ ಮೂಡಿಸಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿನಿತ್ಯ (ಏ.11 ರಂದು 10,250) ಸಾವಿರಗಟ್ಟಲೆ ಸಕ್ರಿಯ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಮಹಾಮಾರಿ ಕೋವಿಡ್ ಎರಡನೇ ಅಲೆಯ ಬೇರುಗಳು ಬಲವಾಗುವ ಸೂಚನೆ ನೀಡುತ್ತಿದೆ. ನಾಗಾಲೋಟದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.

ಕೋವಿಡ್ ಕಟ್ಟಿಹಾಕಲು ಪ್ರಯತ್ನ ನಡೆಸಿರುವ ಸರ್ಕಾರ ರಾಜ್ಯದ ಜನತೆಯಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ. ಕಡ್ಡಾಯ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ. ಇದೀಗ ಸ್ಯಾಂಡಲ್‍ವುಡ್ ನಟಿ ಸುಧಾರಾಣಿಯವರು ಸರ್ಕಾರದ ಜತೆ ಕೈಜೋಡಿಸಿದ್ದು, ಸಾರ್ವಜನಿಕರಲ್ಲಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸಿದ್ದಾರೆ.

ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಗುಂಪು ಗುಂಪಾಗಿ ಸೇರುವುದನ್ನು ನಿಲ್ಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಎಲ್ಲರೂ ತಪ್ಪದೆ ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಇನ್ನು ಸರ್ಕಾರ ಶುರು ಮಾಡಿರುವ ಲಸಿಕಾ ಅಭಿಯಾನದ ಬಗ್ಗೆಯೂ ಹೇಳಿರುವ ಸುಧಾರಾಣಿ, 45 ವರ್ಷ ವಯಸ್ಸು ಮೇಲ್ಪಟ್ಟವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಬಗ್ಗೆ ಕೇಳಿ ಬರುತ್ತಿರುವ ತಪ್ಪು ಮಾಹಿತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More

Categories
Cinema

ಕೋವಿಡ್‍-19 ಸೋಂಕಿನಿಂದ ಗುಣಮುಖರಾದ ನಟ ಅಕ್ಷಯ್ ಕುಮಾರ್ !

ಮುಂಬೈ: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ವಾಪಸ್ ಆಗಿದ್ದಾರೆ.

ಕೆಲ ದಿನಗಳ ಹಿಂದೆ ಅಕ್ಷಯ್ ಕುಮಾರ್ ಅವರಿಗೆ ಮಹಾಮಾರಿ ಕೋವಿಡ್‍ ಸೋಂಕು ತಗುಲಿತ್ತು. ಒಂದೆರಡು ದಿನ ಹೋಮ್ ಐಸೋಲೇಷನ್‍ಗೆ ಒಳಗಾಗಿದ್ದ ಅವರು, ನಂತರ ಸಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗಿದ್ದರು. ಕೋವಿಡ್ ವಿರುದ್ಧ ಹೋರಾಡಿ ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅಕ್ಷಯ್ ಕುಮಾರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದನ್ನು ಅವರ ಪತ್ನಿ ಟ್ವಿಂಕಲ್ ಖನ್ನಾ ಖಚಿತಪಡಿಸಿದ್ದಾರೆ. ಇಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ‘ಅಕ್ಷಯ್ ಕುಮಾರ್ ಸುರಕ್ಷಿತ ಹಾಗೂ ಆರೋಗ್ಯವಂತರಾಗಿ ಮನೆಗೆ ಮರಳಿರುವುದು ಸಂತಸ ತಂದಿದೆ. ಆಲ್‍ ಇಸ್ ವೆಲ್’ ಎಂದಿದ್ದಾರೆ.

ಇನ್ನು ರಾಮ್ ಸೇತು ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಝಿಯಾಗಿದ್ದ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಕೂಡಲೇ ಅವರು ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ನೀಡಿ ಆಸ್ಪತ್ರೆ ಸೇರಿದ್ದರು. ಹಾಗು ತಮ್ಮ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದರು. ಅಕ್ಷಯ್ ಕುಮಾರ್ ಅವರನ್ನು ಹೊರತು ಪಡಿಸಿ ರಾಮ್ ಸೇತು ಚಿತ್ರೀಕರಣದಲ್ಲಿ ಹಾಜರಾಗಿದ್ದ 45 ಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದೆ.

 

ಸಿನೆಮಾ – Udayavani – ಉದಯವಾಣಿ
Read More

Categories
Cinema

‘ರಾಜಕುಮಾರ್ ಕಾಲವಾದ ದಿನ’ ನೆನೆದು ಭಾವುಕರಾದ ನಟ ಜಗ್ಗೇಶ್

ಬೆಂಗಳೂರು: ಇಂದು ನಟಸಾರ್ವಭೌಮ ರಾಜಕುಮಾರ್ ಅವರ 15ನೇ ವರ್ಷದ ಪುಣ್ಯಸ್ಮರಣೆ. ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ವರನಟ ನಮ್ಮನ್ನು ಅಗಲಿ ಇಂದಿಗೆ 15 ವರ್ಷಗಳು ಗತಿಸಿವೆ.

ಮೊದಲಿನಿಂದಲೂ ದೊಡ್ಮನೆ ಕುಟುಂಬಕ್ಕೆ ಆಪ್ತರಾಗಿರುವ ನಟ ಜಗ್ಗೇಶ್, ರಾಜಕುಮಾರ ಅವರು ಕಾಲವಾದ ದಿನವನ್ನು ಇಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ರಾಜಣ್ಣನ ಸಾವಿನ ಸುದ್ದಿ ಕೇಳಿ ತಮಗಾಗಿದ್ದ ನೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.

ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆಯಲ್ಲಿ ಪಾಂಡವರು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಂಬರೀಶರವರ ಅಭಿಮಾನಿ ಮನೆಯಿಂದ ಬಂದಿದ್ದ ವಿಶೇಷ ಊಟದ ಸವಿದು ಕಾರಿನಲ್ಲಿ ಅರ್ಧಗಂಟೆ ಜಗ್ಗೇಶ್ ವಿಶ್ರಾಂತಿ ಪಡೆಯುತ್ತಿದ್ದರಂತೆ. ಇದ್ದಕ್ಕಿದ್ದಂತೆ ವಾಂತಿಬಾಬು ಎಂಬುವರು ಕಾರಿನ ಕಿಟಕಿ ಜೋರಾಗಿ ತಟ್ಟಿದರಂತೆ ಇದರಿಂದ ಜಗ್ಗೇಶ್ ಅವರ ಸಿಟ್ಟು ನೆತ್ತಿಗೇರಿತಂತೆ. ಕಾರಣ ಕೇಳಲು ಬಾಗಿಲು ತೆರೆದರೆ, ವಾಂತಿಬಾಬು ಹೇಳಿದ ‘ರಾಜಣ್ಣ ಹೋಗಿಬಿಟ್ಟರು’ ಎನ್ನುವ ಮಾತು ಜಗ್ಗೇಶ್ ಅವರಿಗೆ ಬರಸಿಡಿಲಿನಂತೆ ಅಪ್ಪಳಿಸತಂತೆ.

‘ಅಣ್ಣಾವ್ರ ಸಾವಿನ ಸುದ್ದಿ ಕೇಳಿ ಕೆಲ ನಿಮಿಷ ಏನು ಕಾಣಲಿಲ್ಲಾ, ಕೇಳಲಿಲ್ಲಾ. ನನ್ನ ತಂದೆ ಸತ್ತಾಗಲು ಹಾಗೆ ಆಯಿತು. ಯಾರಿಗೂ ಹೇಳದೆ ಹೊರಟವನೆ ಅಣ್ಣನ ಚಿತಾವಾಹನ ತಲುಪಿದೆ. ಕೊನೆವರೆಗು ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗು ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು. ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು. ರಾಜಣ್ಣ ನನ್ನ ಹೃದಯದಲ್ಲೆ ಲೀನವಾದರು.ಮತ್ತೆ ಬನ್ನಿ ಅಣ್ಣ’ ಎಂದು ಜಗ್ಗೇಶ್ ಅವರು ಭಾವುಕತೆಯಿಂದ ಟ್ವಿಟ್ ಮಾಡಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More

Categories
Cinema

ಪವರ್ ಸ್ಟಾರ್ ಚಿತ್ರಕ್ಕೆ ಪವನ್ ಕುಮಾರ್ ಆ್ಯಕ್ಷನ್ ಕಟ್ !

ಬೆಂಗಳೂರು : ಲೂಸಿಯಾ ಮತ್ತು ಯು-ಟರ್ನ್‌ ಚಿತ್ರಗಳ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಪವನ್ ಕುಮಾರ್ ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕ ನಟರಾಗಿ ಅಭಿನಯಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಕಲಾತ್ಮಕ ಹಾಗೂ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಪವನ್ ಕುಮಾರ್ ಅವರದು ಎತ್ತಿದ ಕೈ.ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದರೆ ಅದರ ಘಮ ಗೊತ್ತಾಗುತ್ತದೆ. ಇತ್ತ ಅಭಿನಯದಲ್ಲಿ ಅನರ್ಘ್ಯ ರತ್ನದಂತಿರುವ ಪುನೀತ್ ರಾಜಕುಮಾರ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಈ ಸಿನಿಮಾ ಮೇಲಿನ ನಿರೀಕ್ಷೆ ದುಪ್ಟಟ್ಟು ಆಗೋದರಲ್ಲಿ ಯಾವುದೇ ಅನುಮಾನವಿಲ್ಲ.

ಅಂದಹಾಗೆ ಈ ಚಿತ್ರದ ಟೈಟಲ್ ಹಾಗೂ ತಾರಾಬಳಗದ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪುನೀತ್ ಹಾಗೂ ಪವನ್ ಅವರಿಂದಲೂ ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ.

ಇನ್ನು “ಯುವರತ್ನ”ದ ಗೆಲುವಿನ ಸಂಭ್ರಮದಲ್ಲಿರುವ ಪುನೀತ್ ರಾಜ್‌ಕುಮಾರ್  ತಮ್ಮ ಮುಂದಿನ ಜೇಮ್ಸ್ ಸಿನಿಮಾದತ್ತ ಗಮನ ಹರಿಸಿದ್ದಾರೆ. ಇತ್ತ ದಿನಕರ್ ತೂಗುದೀಪ್ ಅವರ ಸಿನಿಮಾವೊಂದಕ್ಕೂ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಜೇಮ್ಸ್ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಜೇಮ್ಸ್ ಚಿತ್ರಕ್ಕೆ ಬಹದ್ದೂರ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಜಮ್ಮು-ಕಾಶ್ಮಿರದಲ್ಲಿ ಚಿತ್ರೀಕರಣ ಮುಗಿಸಿಕೊಂಡು ವಾಪಾಸ್ ಆಗಿದೆ.

ಸಿನೆಮಾ – Udayavani – ಉದಯವಾಣಿ
Read More