Categories
News

ಕನ್ನಡದಲ್ಲೇ ಕೊರೊನಾ ಜಾಗೃತಿ ಮೂಡಿಸಿದ ಟಾಲಿವುಡ್ ಸ್ಟಾರ್

ಮುಂಬೈ: ಕೊರೊನಾ ವೈರಸ್ ಮಿತಿಮೀರಿ ಹರಡುತ್ತಿದೆ. ಬೆಡ್‍ಗಳು ಸಿಗದೇ ಸಾಕಷ್ಟು ಜನರು ಒದ್ದಾಡುತ್ತಿದ್ದಾರೆ. ಕೊರೊನಾ ಹೆಚ್ಚದಂತೆ ತಡೆಯಲು ಸಾಕಷ್ಟು ಜನರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಈಗ ಎಸ್‍ಎಸ್ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಚಿತ್ರ ತಂಡ ಕೂಡ ಇದೇ ಮಾದರಿಯ ಕೆಲಸದಲ್ಲಿ ತೊಡಗಿದೆ. ವಿಶೇಷ ಎಂದರೆ, ಚಿತ್ರತಂಡದ ಪ್ರತಿಯೊಬ್ಬರೂ ಬೇರೆ ಬೇರೆ ಭಾಷೆಯಲ್ಲಿ ಮಾತನಾಡಿದ್ದಾರೆ.

 

View this post on Instagram

 

A post shared by Jr NTR (@jrntr)

ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಲಿಯಾ ಭಟ್, ಜೂ. ಎನ್‍ಟಿಆರ್, ರಾಮ್ ಚರಣ್, ರಾಜಮೌಳಿ, ಅಜಯ್ ದೇವಗನ್ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಒಂದೊಂದು ಭಾಷೆಯಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ಜೂ.ಎನ್‍ಟಿಆರ್ ಕನ್ನಡಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

View this post on Instagram

 

A post shared by Jr NTR (@jrntr)

ವೀಡಿಯೋದಲ್ಲಿ ಕನ್ನಡದಲ್ಲಿ ಮಾತನಾಡಿರುವ ಜೂ.ಎನ್‍ಟಿಆರ್ ಎಲ್ಲರಿಗೂ ನಮಸ್ಕಾರ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ದೊಡ್ಡ ಅಸ್ತ್ರವಾಗಿದೆ. ಸದಾ ಮಾಸ್ಕ್ ಧರಿಸಿ. ಕೈ ಸ್ವಚ್ಛವಾಗಿಟ್ಟುಕೊಳ್ಳಿ. ಪಬ್ಲಿಕ್‍ನಲ್ಲಿ ಓಡಾಡುವಾಗ ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಧರಿಸುವುದಾಗಿ ಹಾಗೂ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ ಎಂದು ಕೋರಿದ್ದಾರೆ. ಜೂನೀಯರ್ ಎನ್‍ಟಿಆರ್ ಕನ್ನಡದಲ್ಲಿ ಜಾಗೃತಿಯ ಸಂದೇಶವನ್ನು ತಲುಪಿಸಿರುವುದು ವಿಶೇಷವಾಗಿದೆ.

The post ಕನ್ನಡದಲ್ಲೇ ಕೊರೊನಾ ಜಾಗೃತಿ ಮೂಡಿಸಿದ ಟಾಲಿವುಡ್ ಸ್ಟಾರ್ appeared first on Public TV.

Source: publictv.in

Source link

Categories
News

ದುಬಾರಿ ಬೆಲೆಗೆ ರೆಮ್​ಡಿಸಿವಿರ್​ ಇಂಜೆಕ್ಷನ್​ನನ್ನ ಮಾರ್ತಿದ್ದ ಆರೋಪಿಗಳು ಅರೆಸ್ಟ್​

ಬೆಂಗಳೂರು: ರೆಮ್​ಡಿಸಿವಿರ್​ ಇಂಜೆಕ್ಷನ್​ನನ್ನ ಮಾರ್ತಿದ್ದ ಆರತೋಪಿಗಳನ್ನ ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಒಟ್ಟು ಮೂವರು ಅರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಪೊಲೀಸರು. ಎಲ್ಲಾ ಆರೋಪಿಗಳು ಒಂದು ಡೋಸ್ ಅನ್ನು ಹದಿನೈದು ಸಾವಿರಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ಕಾರಣಕ್ಕೆ ಜಾನಿ, ದಿನೇಶ್, ಶಂಕರ್​ನನ್ನ ಪೋಲೀಸ್ರು ಅರೆಸ್ಟ್ ಮಾಡಿದ್ದಾರೆ.
ಅರೋಪಿ ನಂಬರ್ 1: ಜಾನಿ, ಹೆಸರಘಟ್ಟ ರೋಡ್ನಲ್ಲಿ,ಎಸ್​ಎಲ್​ವಿ ಮೆಡಿಕಲ್ ಸ್ಟೋರ್ ಇಟ್ಟಿದ್ದಾನೆ. ಈತನ ಬಳಿ ಒಟ್ಟು ಮೂರು ರೆಮಿಡಿಸಿವಿರ್​ನ್ನ ವಶಕ್ಕೆ ಪಡೆದಿದ್ದಾರೆ.
ಅರೋಪಿ ನಂಬರ್ 2: ದಿನೇಶ್, ಮಾರತ್ ಹಳ್ಳಿ ಬಳಿಯ ಲಿಟಲ್ ಫ್ಲವರ್ ನರ್ಸಿಂಗ್ ಕಾಲೇಜಿನವನು
ಅರೋಪಿ ನಂಬರ್ 3: ಶಂಕರ್, ನಾಗರಭಾವಿ ಬಳಿಯ ಗಾಯತ್ರಿ ಡಯಗ್ನಾಸಿಸ್ಟ್ ಸೆಂಟರ್​ನವನು.

The post ದುಬಾರಿ ಬೆಲೆಗೆ ರೆಮ್​ಡಿಸಿವಿರ್​ ಇಂಜೆಕ್ಷನ್​ನನ್ನ ಮಾರ್ತಿದ್ದ ಆರೋಪಿಗಳು ಅರೆಸ್ಟ್​ appeared first on News First Kannada.

Source: newsfirstlive.com

Source link

Categories
News

ರಾಜ್ಯದಲ್ಲಿ ಇಂದು 49,058 ಪಾಸಿಟಿವ್ ಕೇಸ್.. 328 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 11,071 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,53,370 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,64,441 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದ್ದು ಈ ಪೈಕಿ ಇಂದು ರಾಜ್ಯದಲ್ಲಿ 49,058 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಈವರೆಗೆ ರಾಜ್ಯದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 17,90,104 ಕ್ಕೆ ಏರಿಕೆಯಾಗಿದೆ.

ಇಂದು 18,943 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ, ಈವರೆಗೆ ರಾಜ್ಯದಲ್ಲಿ ಒಟ್ಟು 12,55,797 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ. ಇಂದು ಒಂದೇ ದಿನ 328 ಮಂದಿ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿವರೆಗೆ 17,212 ಮಂದಿ ಕೊರೊನಾ ಸೋಂಕಿಗೆ ಬಲಿಯಾದಂತಾಗಿದೆ. ರಾಜ್ಯದಲ್ಲಿ ಸದ್ಯ 5,17,075 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತನ್ನ ಬುಲೆಟಿನ್​ನಲ್ಲಿ ಹೇಳಿದೆ.

The post ರಾಜ್ಯದಲ್ಲಿ ಇಂದು 49,058 ಪಾಸಿಟಿವ್ ಕೇಸ್.. 328 ಮಂದಿ ಸಾವು appeared first on News First Kannada.

Source: newsfirstlive.com

Source link

Categories
News

ಸುನಾಮಿ ವೇಗದಲ್ಲಿ ಕೊರೊನಾ ಸ್ಫೋಟ- ರಾಜ್ಯದಲಿಂದು 49,058 ಮಂದಿಗೆ ಸೋಂಕು

– ರಾಜ್ಯದಲ್ಲಿ 328 ಮಂದಿ, ಬೆಂಗ್ಳೂರಲ್ಲಿ 139 ಮಹಾಮಾರಿಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಮಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಕಂಡುಬಂದಿಲ್ಲ. ಇಂದು 49,058 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ರಾಜ್ಯದ ಜನರಲ್ಲಿ ಆತಂಕ ಹುಟ್ಟಿಸಿದೆ.

ಇಂದು ಬರೋಬ್ಬರಿ 49,058 ಮಂದಿಗೆ ಸೋಂಕು ತಗುಲಿದ್ದು, 328 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 23,706 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 139 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಇಂದು 18,943 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17,90,104ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು 328 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 17,212ಕ್ಕೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.83 ಮತ್ತು ಮರಣ ಪ್ರಮಾಣ ಶೇ.0.66ರಷ್ಟಿದೆ. ರಾಜ್ಯದಲ್ಲಿ 45,17,075 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ಇಂದು ಒಟ್ಟು 1,64,441 ಸ್ಯಾಂಪಲ್ (ರಾಪಿಡ್ 11071+ಆರ್ ಟಿಪಿಸಿಆರ್ 1,53,370) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರು ಬಿಟ್ಟರೆ ಮೈಸೂರು ಮತ್ತು ತುಮಕೂರಿನಲ್ಲಿ ಇಂದು ಕೂಡ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 665, ಬಳ್ಳಾರಿ 922, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬೆಂಗಳೂರು ನಗರ 23,706, ಬೀದರ್ 336, ಚಾಮರಾಜನಗರ 707, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452, ಚಿತ್ರದುರ್ಗ 126, ದಕ್ಷಿಣ ಕನ್ನಡ 1,191, ದಾವಣಗೆರೆ 672, ಧಾರವಾಡ 824, ಗದಗ 191, ಹಾಸನ 1,403, ಹಾವೇರಿ 236, ಕಲಬುರಗಿ 1,652, ಕೊಡಗು 697, ಕೋಲಾರ 756, ಕೊಪ್ಪಳ 357, ಮಂಡ್ಯ 1,301, ಮೈಸೂರು 2,531, ರಾಯಚೂರು 819, ರಾಮನಗರ 413, ಶಿವಮೊಗ್ಗ 635, ತುಮಕೂರು 2,418, ಉಡುಪಿ 1,526, ಉತ್ತರ ಕನ್ನಡ 734, ವಿಜಯಪುರ 662 ಮತ್ತು ಯಾದಗಿರಿಯಲ್ಲಿ 721 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

The post ಸುನಾಮಿ ವೇಗದಲ್ಲಿ ಕೊರೊನಾ ಸ್ಫೋಟ- ರಾಜ್ಯದಲಿಂದು 49,058 ಮಂದಿಗೆ ಸೋಂಕು appeared first on Public TV.

Source: publictv.in

Source link

Categories
News

ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಹೆಚ್ಚಿಸುವಂತೆ ಹೈಕೋರ್ಟ್ ಆದೇಶ; ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಕೇಂದ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ ಹಾಗೂ ಆಕ್ಸಿಜನ್ ಕೊರತೆ ಹಿನ್ನೆಲೆ ರಾಜ್ಯದ ಹೈಕೋರ್ಟ್​ ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಹೇಳಿತ್ತು. ಇದೀಗ ಕರ್ನಾಟಕ ಹೈಕೋರ್ಟ್​ನ ಆದೇಶವನ್ನ ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಿದೆ.

ರಾಜ್ಯಕ್ಕೆ ನೀಡುತ್ತಿರುವ ಆಕ್ಸಿಜನ್ ಪ್ರಮಾಣವನ್ನ 1700 ಮೆಟ್ರಿಕ್ ಟನ್ ಗೆ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಸೂಚಿಸಿ ಕರ್ನಾಟಕ ಹೈಕೋರ್ಟ್​ ಆದೇಶ ನೀಡಿತ್ತು. ಕೇಂದ್ರ ಕೇವಲ ₹862 ಗೆ ಮಾತ್ರ ಹೆಚ್ಚಳ ಮಾಡಿತ್ತು. ದೆಹಲಿ ಆಕ್ಸಿಜನ್ ಪ್ರಕರಣ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಚಾರವನ್ನು ನ್ಯಾ. ಚಂದ್ರಚೂಡ ಅವರ ಪೀಠದ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಹೇಳಿಕೆ ನೀಡಿದ ನ್ಯಾ. ಚಂದ್ರಚೂಡ ಅವರ ಪೀಠ ಮುಖ್ಯನ್ಯಾಯಮೂರ್ತಿ ಎನ್​.ವಿ. ರಮಣ ಅವರ ಪೀಠದ ಮುಂದೆ ಪ್ರಸ್ತಾಪಿಸಲು ಸೂಚನೆ ನೀಡಿದೆ.

The post ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಹೆಚ್ಚಿಸುವಂತೆ ಹೈಕೋರ್ಟ್ ಆದೇಶ; ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಕೇಂದ್ರ appeared first on News First Kannada.

Source: newsfirstlive.com

Source link

Categories
News

ಬೆಂಗಳೂರಿನ BIG ಆಸ್ಪತ್ರೆಯಲ್ಲಿ ಆಕ್ಸಿಜನ್ ಎಮರ್ಜೆನ್ಸಿ.. ಆರೋಗ್ಯ ಸಚಿವರು ನೋ ರೆಸ್ಪಾನ್ಸ್

ಬೆಂಗಳೂರು: ನಗರದ ಬೆಂಗಳೂರು ಇನ್ಸ್​ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟಿರಾಲಜಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಈ ಆಸ್ಪತ್ರೆಯ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಸಪೋರ್ಟ್​ನಲ್ಲಿ 42 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ 550 ಲೀಟರ್ ಆಕ್ಸಿಜನ್ ಮಾತ್ರ ಉಳಿದಿದೆ ಎನ್ನಲಾಗಿದೆ. ದಿನವೊಂದಕ್ಕೆ ಈ ಆಸ್ಪತ್ರೆಗೆ 1.5 ಟನ್ ಆಕ್ಸಿಜನ್ ಅವಶ್ಯಕತೆ ಇದೆಯಂತೆ.

ಸದ್ಯ ಉಳಿದಿರುವ ಆಕ್ಸಿಜನ್ ಮುಂದಿನ 4 ರಿಂದ 5 ಗಂಟೆಗಳವರೆಗೆ ಮಾತ್ರ ಬಳಕೆಯಾಗಲಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆರೋಗ್ಯ ಸಚಿವರಿಗೆ ಹೇಳಿದ್ರೂ ಯಾವುದೇ ರೆಸ್ಪಾಂಡ್ ಮಾಡಿಲ್ಲವಂತೆ. ಇತ್ತ ಸಂಸದ ತೇಜಸ್ವಿ ಸೂರ್ಯ ಅವರ ಗಮನಕ್ಕೆ ತಂದ್ರೂ ರೆಸ್ಪಾನ್ಸ್ ಸಿಕ್ಕಿಲ್ಲವಂತೆ. ಗ್ಯಾಸ್ ಪೂರೈಕೆ ಮಾಡುವ ಅಮೋಘ್ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿದರೂ ಆಕ್ಸಿಜನ್ ಸಪ್ಲೈ ಆಗ್ತಿಲ್ಲ ಎನ್ನಲಾಗಿದೆ.

 

The post ಬೆಂಗಳೂರಿನ BIG ಆಸ್ಪತ್ರೆಯಲ್ಲಿ ಆಕ್ಸಿಜನ್ ಎಮರ್ಜೆನ್ಸಿ.. ಆರೋಗ್ಯ ಸಚಿವರು ನೋ ರೆಸ್ಪಾನ್ಸ್ appeared first on News First Kannada.

Source: newsfirstlive.com

Source link

Categories
News

ಜನತಾ ಕರ್ಫ್ಯೂ ವಿಫಲವಾದ್ರೆ ಲಾಕ್ ಡೌನ್ ಅನಿವಾರ್ಯ- ಬಿ.ಸಿ. ಪಾಟೀಲ್

ಕೊಪ್ಪಳ: ಜನತಾ ಕರ್ಫ್ಯೂ ವಿಫಲವಾದ್ರೆ ಲಾಕ್ ಡೌನ್ ಅನಿವಾರ್ಯ ಎಂದು ಕೊಪ್ಪಳದಲ್ಲಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.

ಜನರಿಗೆ ಎಷ್ಟೇ ಸೌಲಭ್ಯ ಹಾಗೂ ಮನವಿ ಮಾಡಿದ್ರೂ ಪ್ರಯೋಜನವಿಲ್ಲ..ಕಳೆದ ವರ್ಷಕ್ಕಿಂತ ಈ ವರ್ಷ ಕೊರೊನಾ ಅಲೆ ಸಾಕಷ್ಟು ಡೇಂಜರ್ ಇದೆ. ಕಳೆದ ವರ್ಷ ಆಕ್ಸಿಜನ್ ಕೇಸ್ ಇರಲಿಲ್ಲ.. ಈ ಬಾರಿ ಜಾಸ್ತಿ ಬರುತ್ತಿದ್ದಾರೆ. ಡೆತ್ ರೇಟ್ ಈ ಬಾರಿ ಜಾಸ್ತಿ ಇದೆ ಹಾಗಾಗಿ ಜನರು ಅರ್ಥ ಮಾಡಿಕೊಳ್ಳಬೇಕು.

ಕೊಪ್ಪಳದಲ್ಲಿ ಆಕ್ಸಿಜನ್, ಬೆಡ್ ಮತ್ತು ರೆಮ್ಡಿಸಿವರ್ ಇಂಜಕ್ಷನ್ ಕೊರತೆ ಇಲ್ಲ.. ಸೋಂಕಿತರು ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ಬೆಡ್ ಎಲ್ಲಿ ಖಾಲಿ ಇರುತ್ತೆ ಅಲ್ಲಿ ದಾಖಲಾಗಬೇಕು. ಆಗ ಮಾತ್ರ ಸಾವಿನ ಸಂಖ್ಯೆ ಕಡಿಮೆ ಆಗಲು ಸಾಧ್ಯ ಎಂದಿದ್ದಾರೆ.

The post ಜನತಾ ಕರ್ಫ್ಯೂ ವಿಫಲವಾದ್ರೆ ಲಾಕ್ ಡೌನ್ ಅನಿವಾರ್ಯ- ಬಿ.ಸಿ. ಪಾಟೀಲ್ appeared first on News First Kannada.

Source: newsfirstlive.com

Source link

Categories
News

ಪತ್ನಿ, 5 ವರ್ಷದ ಮಗನ ಬಿಟ್ಟು ಹೋದ ಅಪ್ಪ..!

– ಅಮ್ಮನ ಸಂತೈಸಿದ ಪುಟ್ಟ ಕಂದಮ್ಮ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಕ್ರೂರಿತನಕ್ಕೆ 5 ವರ್ಷದ ಮಗು ಅಪ್ಪನ ಕಳೆದುಕೊಂಡಿದೆ. ತಾಯಿ-ಮಗನ ರೋಧನೆ ಮನಕಲಕುವಂತಿತ್ತು.

ಈ ಘಟನೆ ಯಲಹಂಕದ ಮೇಡಿ ಚಿತಾಗಾರದ ಮುಂದೆ ನಡೆದಿದೆ. ನಮ್ಮನ್ನ ಬಿಟ್ಟೋದ್ರಿ, ನಮಗೆ ಇನ್ಯಾರು ಗತಿ ಅಂತ ಪತ್ನಿ ಕಣ್ಣೀರು ಹಾಕಿದ್ರೆ, ಇತ್ತ ಪುಟ್ಟ ಕಂದಮ್ಮ ಮಾತ್ರ ಅಮ್ಮಾ.. ಅಪ್ಪಾ ಎಲ್ಲೂ ಹೋಗಿಲ್ಲ, ಬರ್ತಾರೆ ಎಂದು ಹೇಳುವ ಮೂಲಕ ಅಮ್ಮನನ್ನ ಸಮಾಧಾನ ಪಡಿಸಿದ ರೀತಿ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ.

ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ತನ್ನ ರೌದ್ರನರ್ತನ ತೋರುತ್ತಿದ್ದು, ಜನ ಬೆಡ್, ಆಕ್ಸಿಜನ್ ಗಾಗಿ ಒದ್ದಾಡುತ್ತಿರುವುದು ಇಂದು ಕೂಡ ಕಂಡುಬಂದಿದೆ.

The post ಪತ್ನಿ, 5 ವರ್ಷದ ಮಗನ ಬಿಟ್ಟು ಹೋದ ಅಪ್ಪ..! appeared first on Public TV.

Source: publictv.in

Source link

Categories
News

ಜನರೇ ಇತ್ತ ಗಮನಿಸಿ.. ಸರ್ಕಾರ ಆಸ್ಪತ್ರೆಗಳ ಬೆಡ್​ಗಳಿಗೆ ಪ್ಯಾಕೇಜ್ ರೇಟ್ ಫಿಕ್ಸ್ ಮಾಡಿದೆ ನೋಡಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸುನಾಮಿಯಂತೆ ಅಪ್ಪಳಿಸುತ್ತಿದೆ.. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಆಸ್ಪತ್ರೆಗಳ ಬೆಡ್​ಗಳ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಪರಿಷ್ಕೃತ ಬೆಡ್​ಗಳ ದರ ಹೀಗಿದೆ..

ಜೆನೆರಲ್ ವಾರ್ಡ್​ಗೆ- ದಿನಕ್ಕೆ 5,200 ರೂಪಾಯಿ
ಹೆಚ್​ಡಿಯು(High Dependency Unit)ಗೆ: ದಿನಕ್ಕೆ 8,000 ರೂಪಾಯಿ
ಐಸೋಲೇಷನ್ ಐಸಿಯು ರಹಿತ ವೆಂಟಿಲೇಟರ್​ಗೆ: ದಿನಕ್ಕೆ 9,750 ರೂಪಾಯಿ
ಐಸೋಲೇಷನ್ ಐಸಿಯು ಸಹಿತ ವೆಂಟಿಲೇಟರ್​ಗೆ: ದಿನಕ್ಕೆ11,500 ರೂಪಾಯಿ

The post ಜನರೇ ಇತ್ತ ಗಮನಿಸಿ.. ಸರ್ಕಾರ ಆಸ್ಪತ್ರೆಗಳ ಬೆಡ್​ಗಳಿಗೆ ಪ್ಯಾಕೇಜ್ ರೇಟ್ ಫಿಕ್ಸ್ ಮಾಡಿದೆ ನೋಡಿ appeared first on News First Kannada.

Source: newsfirstlive.com

Source link

Categories
News

ವೈದ್ಯರಿಂದಲೇ ಹಣಕ್ಕಾಗಿ ರೆಮ್‍ಡಿಸಿವಿರ್, ವ್ಯಾಕ್ಸಿನ್ ಮಾರಾಟ: ಅಪ್ಪಚ್ಚು ರಂಜನ್

ಮಡಿಕೇರಿ: ಕೊರೊನಾ ಮಾಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರು ಅತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಕೊಡಲು ಮುಂದಾಗಿದೆ. ಅದರೆ ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರು ಹಣಕ್ಕಾಗಿ ವ್ಯಾಕ್ಸಿನನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಸ್ಪತ್ರೆಯೊಂದರಲ್ಲಿ ಹಣಕ್ಕೆ ವ್ಯಾಕ್ಸಿನ್ ಮಾರಲಾಗುತ್ತಿದೆ ಎಂದು ಅಪ್ಪಚ್ಚು ರಂಜನ್ ಅವರು ಉಸ್ತುವಾರಿ ಸಚಿವರ ಸಭೆಯಲ್ಲಿ ಗಂಭೀರ ಅರೋಪ ಮಾಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಹೋಬಳಿ ಮಟ್ಟದ ಅಸ್ಪತ್ರೆಯೊಂದರಲ್ಲಿ ಅಲ್ಲಿನ ವೈದ್ಯರಿಂದಲ್ಲೇ ರೆಮ್‍ಡಿಸಿವಿರ್ ಮತ್ತು ವ್ಯಾಕ್ಸಿನ್ ಮಾರಾಟ ಆಗುತ್ತಿದೆ ಎಂಬ ಅರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಿನ್ನೆ ದಿನ ತಾಲೂಕಿನ 5 ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ಅಲ್ಲಿಯ ಸ್ಥಳೀಯರು ವ್ಯಾಕ್ಸಿನ್ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಸಿಕ್ಕೊಡನೆ ಆಸ್ಪತ್ರೆಯ ವೈದ್ಯರನ್ನು ಕರೆದು ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ಅರೋಗ್ಯಧಿಕಾರಿ ಹಾಗೂ ಎಸ್.ಪಿ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾವು ಕೂಡ ಇನ್ನೂ ಮುಂದೆ ಸ್ವಲ್ಪ ಜನರನ್ನು ಬಿಟ್ಟು ಫಾಲೋ ಅಪ್ ಮಾಡುತ್ತೇವೆ. ಜಿಲ್ಲೆಯ ಅರೋಗ್ಯ ಕೇಂದ್ರಗಳಲ್ಲಿ ಪರಿಶೀಲನೆ ಮಾಡುತ್ತೇವೆ. ಈ ರೀತಿ ಮಾಡುವವರು ಸಿಕ್ಕಿಬಿದ್ದರೆ ಅವರಿಗೆ ತಕ್ಕ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ ಎಂದು ಅಪ್ಪಚ್ಚು ರಂಜನ್ ಅಕ್ರೋಶ ವ್ಯಕ್ತಪಡಿಸಿದರು.

The post ವೈದ್ಯರಿಂದಲೇ ಹಣಕ್ಕಾಗಿ ರೆಮ್‍ಡಿಸಿವಿರ್, ವ್ಯಾಕ್ಸಿನ್ ಮಾರಾಟ: ಅಪ್ಪಚ್ಚು ರಂಜನ್ appeared first on Public TV.

Source: publictv.in

Source link