ಸೋಂಕಿತರ ಸಾವಿನ ಸಂಖ್ಯೆಯಲ್ಲಿಂದು ಗಣನೀಯ ಏರಿಕೆ.. 592 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 10745 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,48,157 ಆರ್​ಟಿಪಿಸಿಆತಗ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,58,902 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು ರಾಜ್ಯದಲ್ಲಿ 48,781 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಈವರೆಗೆ ರಾಜ್ಯದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 18,38,885ಕ್ಕೆ ಏರಿಕೆಯಾಗಿದೆ. ಇಂದು 28,623 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಈವರೆಗೆ ಒಟ್ಟು 12,84,420 ಮಂದಿ ಗುಣಮಖರಾದಂತಾಗಿದೆ. ಇಂದು ಒಂದೇ ದಿನ ಸೋಂಕಿಗೆ 592 ಸೋಂಕಿತರು ಸಾವನ್ನಪ್ಪಿದ್ದು ಈವರೆಗೆ …

ಸಿಂಗಲ್ ಡೋಸ್ ವ್ಯಾಕ್ಸಿನ್ ‘ಸ್ಪುಟ್ನಿಕ್​ ಲೈಟ್’​ ಬಳಕೆಗೆ ಗ್ರೀನ್ ಸಿಗ್ನಲ್

ರಷ್ಯಾದಲ್ಲಿ ಈ ಹಿಂದೆ ಸ್ಪುಟ್ನಿಕ್ ವಿ ವ್ಯಾಕ್ಸಿನ್ ತಯಾರಿಸಲಾಗಿದ್ದು ಈಗಾಗಲೇ ಹಲವು ದೇಶಗಳಲ್ಲಿ ಈ ವ್ಯಾಕ್ಸಿನ್​ನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗ್ತಿದೆ. ಇದೀಗ ರಷ್ಯಾ ಕೊರೊನಾ ಸೋಂಕಿಗೆ ಸಿಂಗಲ್ ಡೋಸ್ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ್ದು ಅದಕ್ಕೆ ಸ್ಪುಟ್ನಿಕ್ ಲೈಟ್ ಎಂದು ಹೆಸರಿಡಲಾಗಿದೆ. ಈ ವ್ಯಾಕ್ಸಿನ್ ಬಳಕೆಗೆ ಇದೀಗ ರಷ್ಯಾ ಸರ್ಕಾರ ಅನುಮತಿಯನ್ನೂ ನೀಡಿದೆ. ಇನ್ನು ಭಾರತದ ಜೊತೆಗೆ ರಷ್ಯಾ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್​ನ್ನು ಹಂಚಿಕೊಳ್ಳುವುದಾಗಿ ಹೇಳಿದೆ, ಈ ಹಿನ್ನೆಲೆ ಕೆಲವೇ ದಿನಗಳಲ್ಲಿ ಭಾರತಕ್ಕೂ ಈ ವ್ಯಾಕ್ಸಿನ್ ಬಂದಿಳಿಯಲಿದೆ ಎನ್ನಲಾಗಿದೆ. …

ದಿವ್ಯಾ ಬಿಗ್‍ಬಾಸ್ ಮನೆಗೆ ಬರೋದು ಖಚಿತ: ಷರತ್ತು ಅನ್ವಯ

ದಿವ್ಯಾ ಉರುಡುಗ ಅಭಿಮಾನಿಗಳಿಗೆ ಗುಡ್ ನ್ಯೂಸ್. ಮತ್ತೆ ದಿವ್ಯಾ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುವುದು ಬಹುತೇಕ ಖಚಿತ. ಆದರೆ ಷರತ್ತುಗಳು ಪಾಲಿಸಿ ಸರಿಯಾದ ಫಲಿತಾಂಶ ಬಂದರೆ ಮತ್ತೆ ದೊಡ್ಮನೆಯಲ್ಲಿ ‘ಅರ್ವಿಯಾ’ ಜೋಡಿಯನ್ನು ನೋಡಬಹುದು. ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯಿಂದ ತಾತ್ಕಾಲಿಕವಾಗಿ ಹೊರಗುಳಿದಿದ್ದಾರೆ. ಬಿಗ್‍ಬಾಸ್ ಮನೆಯಿಂದ ನೇರವಾಗಿ ಆಸ್ಪತ್ರೆಗೆ ದಾಖಲಾಗಿರುವ ದಿವ್ಯಾ ಉರುಡುಗ ಮತ್ತೆ ಮನೆಗೆ ವಾಪಸ್ ಬರುತ್ತಾರೆ ಎನ್ನುವ ಕುರಿತಾಗಿ ಸಣ್ಣ ಸುಳಿವೊಂದು ಸಿಕ್ಕಿದೆ. ಬಿಗ್‍ಬಾಸ್ ಮನೆಯಲ್ಲಿರುವಾಗ ಯೂರಿನರಿ ಟ್ರ್ಯಾಕ್ ಇನ್‍ಫೆಕ್ಷನ್‍ನಿಂದ ದಿವ್ಯಾ ಉರುಡುಗ ಬಳಲುತ್ತಿದ್ದರು. ಈಗ …

ತರಕಾರಿ ತರೋದಿದ್ರೆ ನಡ್ಕೊಂಡೇ ಹೋಗ್ಬೇಕು: ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ..?

ಬೆಂಗಳೂರು: 14 ದಿನಗಳ ಕಂಪ್ಲೀಟ್ ಲಾಕ್​ಡೌನ್ ಘೋಷಿಸಿರುವ ರಾಜ್ಯ ಸರ್ಕಾರ ಅದಕ್ಕೆ ಸಂಬಂಧಿಸಿದಂತೆ ಗೈಡ್​ಲೈನ್ಸ್ ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಬಹುತೇಕ ಅಂಶಗಳು ಕಳೆದ ಬಾರಿಯ ಮಾರ್ಗಸೂಚಿಯಂತೆಯೇ ಇದ್ದು ಕೆಲವು ಅಂಶಗಳನ್ನಷ್ಟೇ ಬದಲಿಸಲಾಗಿದೆ. ಏನಿರಲ್ಲ..? ಥಿಯೇಟರ್, ಶಾಪಿಂಗ್ ಮಾಲ್, ಜಿಮ್ ಬಂದ್ ಸ್ವಿಮ್ಮಿಂಗ್ ಪೂಲ್, ಬಾರ್, ಕ್ಲಬ್, ಮೈದಾನ, ಪಾರ್ಕ್ ಬಂದ್ ಮನರಂಜನಾ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧ ಅಂತರ್ ಜಿಲ್ಲಾ ಸಂಚಾರ ಸಂಪೂರ್ಣ ಬಂದ್ ಅಂತರ್ ರಾಜ್ಯ ಸಂಚಾರ ಕೂಡ ಸಂಪೂರ್ಣ ಬಂದ್ ಇನ್ನುಮುಂದೆ ಅಗತ್ಯ ವಸ್ತುಗಳ ಖರೀದಿಗೆ …

ರಾಜ್ಯದಲ್ಲಿ 14 ದಿನಗಳ ಕಂಪ್ಲೀಟ್ ಲಾಕ್​ಡೌನ್:​ ಸಿಎಂ ಬಿಎಸ್​ವೈ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಕ್ಲೋಸ್ ಡೌನ್​ ಜಾರಿಯಲ್ಲಿದ್ದರೂ ಸೋಂಕು ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ, ಇಂದು ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ 14 ದಿನಗಳ ಕಂಪ್ಲೀಟ್ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ. ಮೇ 10 ರಿಂದ 24 ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ.. ಕೈಗಾರಿಕೆಗಳು, ಹೋಟೆಲ್, ಪಬ್, ಬಾರ್​​ಗಳು ಬಂದ್ ಇರಲಿವೆ. ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶವಿದೆ. ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಓಡಾಟ ಇಲ್ಲ. ಸರಕು ವಾಹನಗಳಿಗೆ ಮಾತ್ರ ಓಡಾಡಲು ಅವಕಾಶವಿದೆ. ವಿವಾಹಗಳಲ್ಲಿ …

ಮೇ 10 ರಿಂದ 24ರವರೆಗೆ ಕಂಪ್ಲೀಟ್ ಲಾಕ್‍ಡೌನ್ – ಸಿಎಂ ಯಡಿಯೂರಪ್ಪ

ಬೆಂಗಳೂರು: ಜನತಾ ಕರ್ಫ್ಯೂ ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್‍ಡೌನ್ ಮಾಡಲು ಸರ್ಕಾರ ಮುಂದಾಗಿದೆ.ಇಂದು ಸಚಿವರು, ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ ಮೇ 10 ರಿಂದ 14 ದಿನಗಳ ಕಾಲ ಲಾಕ್‍ಡೌನ್ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಗುರುವಾರ ಕೇರಳ ಮತ್ತು ರಾಜಸ್ಥಾನದಲ್ಲಿ ಕಂಪ್ಲೀಟ್ ಲಾಕ್‍ಡೌನ್ ಘೋಷಣೆಯಾಗಿದೆ. ಬಹುತೇಕ ರಾಜ್ಯಗಳು ಲಾಕ್‍ಡೌನ್ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಕಂಪ್ಲೀಟ್ ಲಾಕ್‍ಡೌನ್ ಮಾಡಿ ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಸರ್ಕಾರ ಮುಂದಾಗಿದೆ. ಬೆಳಗ್ಗೆ 6 …

ಮೃತದೇಹ ನೀಡಲು ಹಣಕ್ಕೆ ಡಿಮ್ಯಾಂಡ್.. ಆಸ್ಪತ್ರೆಗೆ ಕಲ್ಲು ತೂರುತ್ತೇವೆಂದ ಸಂಬಂಧಿಕರು

ಮೈಸೂರು: ಮಿಷನ್ ಆಸ್ಪತ್ರೆ ಮುಂದೆ ಮೃತ ರೋಗಿಯೋರ್ವನ ಸಂಬಂಧಿಕರು ಕಲ್ಲುಗಳ ರಾಶಿ ಹಾಕಿ ಕಲ್ಲು ತೂರೋದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಕೊರೊನಾದಿಂದ ಸೋಂಕಿತನೋರ್ವ ಸಾವನ್ನಪ್ಪಿದ್ದು ಮೃತದೇಹ ನೀಡಲು ಹಣ ಕೇಳುತ್ತಿದ್ದಾರೆಂದು ಆರೋಪಿಸಿರುವ ಮೃತ ರೋಗಿಯ ಸಂಬಂಧಿಕರು ಹಣ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಗೇಟ್​ಗೆ ಕಾಲಿನಿಂದ ಒದ್ದು, ಕಲ್ಲು ತೂರುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಂಡಿ ಪೊಲೀಸರು ಆಗಮಿಸಿದ್ದಾರೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಹೆಸರು ವಾಜೀದ್ ಪಾಷ ಎನ್ನಲಾಗಿದ್ದು ಈತ ಮೈಸೂರಿನ ಗೌಸಿಯಾ ನಗರದ …

ಕೊರೊನಾದಿಂದ ಮರಣಹೊಂದಿದ 1,100 ಜನರ ಅಂತ್ಯಕ್ರಿಯೆ ನೆರವೇರಿಸಿದ ಎಎಸ್‍ಐ

– ಮಗಳ ಮದ್ವೆ ಮುಂದೂಡಿ ಸಮಾಜ ಸೇವೆ ನವದೆಹಲಿ: ಕೊರೊನಾ ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಗೆ ಯಾರೂ ಮುಂದೆ ಬಾರದ ಸಂದರ್ಭ ಡೆಲ್ಲಿ ಪೊಲೀಸ್ ಇಲಾಖೆಯ ಎಎಸ್‍ಐ ಒಬ್ಬರು 1,100 ಹೆಣಗಳ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸಮಾಜದ ನಿಜವಾದ ಹಿರೋ ಆಗಿ ಗುರುತಿಸಿಕೊಂಡಿದ್ದಾರೆ. 56 ವರ್ಷ ಪ್ರಾಯದ ರಾಕೇಶ್ ಕುಮಾರ್ ಡೆಲ್ಲಿ ಪೊಲೀಸ್ ಇಲಾಖೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಡೆಲ್ಲಿಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗ ತೊಡಗಿದೆ. ಆದರೆ ಸಾವನ್ನಪ್ಪಿರುವವರ …

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ಗೆ ಟೀಮ್​ ಇಂಡಿಯಾ ಪ್ರಕಟ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಕ್ಕೆ ಟೀಮ್​ ಇಂಡಿಯಾವು ಬಲಿಷ್ಠ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜೂನ್​ 18-22ರವರೆಗೆ ನಡೆಯಲಿರುವ ಫೈನಲ್​​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನ ಭಾರತ ಎದುರಿಸಲಿದೆ. ಇಂಗ್ಲೆಂಡ್​ ವಿರುದ್ಧ ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ, 3-1 ಅಂತರದಲ್ಲಿ ಗೆದ್ದು, ಫೈನಲ್​ಗೇರಿತ್ತು. ಟೀಮ್​ ಇಂಡಿಯಾ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), …

ಸಮಯಕ್ಕೆ ಬಾರದ ಆ್ಯಂಬುಲೆನ್ಸ್: ರಸ್ತೆಯಲ್ಲೇ ಕೊನೆಯುಸಿರೆಳೆದ ರೋಗಿ

ಯಾದಗಿರಿ: ಅನಾರೋಗ್ಯದಿಂದ ಅಪರಿಚಿತ ವ್ಯಕ್ತಿಯೋರ್ವ ನರಳಾಡಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಸ್ಟೇಶನ್ ರಸ್ತೆಯ ಪಶು ಆಸ್ಪತ್ರೆಯ ಎದುರು ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯ ಮೃತದೇಹದ ಬಳಿ ಟ್ಯಾಬ್ಲೆಟ್ ಗಳು ಪತ್ತೆಯಾಗಿದ್ದು ಕೊರೊನಾ ಶಂಕೆಯಿಂದ ಜನರು ಮೃತದೇಹದ ಸಮೀಪ ಸುಳಿಯುತ್ತಿಲ್ಲ ಎನ್ನಲಾಗಿದೆ.ಇನ್ನು ಅಪರಿಚಿತ ವ್ಯಕ್ತಿ ಜೀವಂತ ಇದ್ದಾಗ 108 ಗೆ ಕಾಲ್ ಮಾಡಿದ್ರೂ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿಲ್ಲವಂತೆ. ಎದ್ದು ಹೋಗಲೂ ಆಗದ ಸ್ಥಿತಿಯಲ್ಲಿದ್ದ ಆತ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ..ಸ್ಥಳಕ್ಕೆ ಯಾದಗಿರಿ ಟೌನ್ ಪೊಲೀಸರು …