ಡಿಸೆಂಬರ್ ಅಂತ್ಯಕ್ಕೆ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ- ಸುಧಾಕರ್‌

ಬೆಂಗಳೂರು : ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಿ, ರಾಜ್ಯವನ್ನು ಕೊರೊನಾ ಮುಕ್ತಗೊಳಿಸುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಲಸಿಕಾ ಮಹಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವರು, ಅಂತಾರಾಷ್ಟ್ರೀಯ ಯೋಗ ದಿನದಂದೇ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಲಸಿಕೆ ಅಭಿಯಾನ ನಡೆಸಲು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಒಂದೇ ದಿನ ಸುಮಾರು 7 …

ಚಾ. ನಗರ ದುರಂತ: 24 ಸಾವುಗಳು ರೋಹಿಣಿ ಸಿಂಧೂರಿ ಮಾಡಿದ ಕೊಲೆಗಳು ಎಂದ ಬಿಜೆಪಿ ಮುಖಂಡ

ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿಂತೆ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ತೆಗೆದುಕೊಳ್ಳಲು ತನಿಖಾಧಿಕಾರಿಗೆ ಬಿಜೆಪಿ ಮುಖಂಡ ಮಲ್ಲೇಶ್ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸರ್ಕಾರ ನೇಮಕ ಮಾಡಿರುವ ಬಿ.ಎ. ಪಾಟೀಲ್ ಸಮಿತಿಗೆ ಅಫಿಡವಿಟ್ ಮಾಡಿಸಿದ ಮನವಿ ಪತ್ರ ಹಾಗೂ ಪೆನ್​ಡ್ರೈವ್ ಹಸ್ತಾಂತರಿಸಿದ್ದಾರೆ. ದೂರು ನೀಡಿದ ಬಳಿಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ ಮಲ್ಲೇಶ್.. ಹೈಕೋರ್ಟ್ ನೇಮಿಸಿದ್ದ ವೇಣುಗೋಪಾಲ್ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಅದರಲ್ಲಿ ರೋಹಿಣಿ ಸಿಂಧೂರಿ ತಪ್ಪಿಲ್ಲ ಅಂತ ಹೇಳಿದೆ. …

ಮಾಸಿಕ ಪಾಸ್​ ಹೊಂದಿದ್ದವ್ರಿಗೆ KSRTC ಗುಡ್​​​ನ್ಯೂಸ್; ಹಿಂದಿನ ಪಾಸ್​ ಅವಧಿ ವಿಸ್ತರಣೆ​

ಬೆಂಗಳೂರು: ಇಂದಿನಿಂದ ಮತ್ತೆ ಸಂಚಾರ ಆರಂಭಿಸಿರುವ KSRTC ತನ್ನ ಪ್ರಯಾಣಿಕರಿಗೆ ಗುಡ್​ನ್ಯೂಸ್ ನೀಡಿದೆ. ಹಳೆ ಪಾಸ್​ಗಳ ಅವಧಿಯನ್ನ 18 ದಿನಗಳವರೆಗೆ ವಿಸ್ತರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ. ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿಬಿಟ್ಟಿತು. ಇದರಿಂದಾಗಿ ಪಾಸ್​ ಮಾಡಿಸಿಕೊಂಡ ಪ್ರಯಾಣಿಕರು ಸುಮ್ಮನೆ ದುಡ್ಡು ಕಟ್ಟಿ ಪಾಸ್ ಮಾಡಿಸಿದ್ವಿ. ಯಾವುದೇ ಪ್ರಯೋಜನ ಆಗಿಲ್ಲ ಅಂತಾ ನೊಂದ್ಕೊಂಡಿದ್ದರು. ಅಲ್ಲದೇ ಮತ್ತೆ ಈಗ ದುಡ್ಡು ಕೊಟ್ಟು ಪಾಸ್ ಮಾಡಿಸಲೇಬೇಕಲ್ವಾ ಅಂತಾ ಬೇಸರ ವ್ಯಕ್ತಪಡಿಸುತ್ತಿದ್ದರು. …

ಉದ್ಯಮಿ ಮನೆಯಲ್ಲಿ ದರೋಡೆ – ಶಿಕ್ಷಕ ಸೇರಿ ಐವರ ಬಂಧನ

ಬಳ್ಳಾರಿ: ಕೊಟ್ಟೂರು ತಾಲೂಕಿನ ಬಸವೇಶ್ವರ ಬಡಾವಣೆಯ ಉದ್ಯಮಿ ಮಲ್ಲೇಶಪ್ಪ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಒಟ್ಟು ಐದು ಜನರನ್ನು ಪೊಲೀಸರು ಬಂಧನಮಾಡಿದ್ದಾರೆ. ಉದ್ಯಮಿ ಮಲ್ಲೇಶ್ ಅವರ ಮನೆಯಲ್ಲಿ ಏ.11ರಂದು ಹತ್ತು ಜನರ ತಂಡ ರಾತ್ರಿ ಏಕಾಏಕಿ ನುಗ್ಗಿ ಮನೆಯಲ್ಲಿ ಇದ್ದ ಗಂಡ ಹೆಂಡತಿಯನ್ನು ಹೆದರಿಸಿ ಮನೆಯಲ್ಲಿದ್ದ 30 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ …

ಕನ್ನಡಿಗರ ಕಣ್ಮಣಿ ಡಾ.ರಾಜ್​ ಕುಮಾರ್​ಗೆ ಗೂಗಲ್​ನಿಂದ ಅವಮಾನ? ಇದು ತಮಿಳು ಚಿತ್ರದ ಯಡವಟ್ಟಾ?

ಬೆಂಗಳೂರು: ಕನ್ನಡದ ಅಸ್ಮಿತೆಗೆ ಅಗೌರವ ತೋರುವಂಥ ಬೆಳೆವಣಿಗೆಗಳು ಇತ್ತೀಚೆಗೆ ಕಂಡುಬರುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಗೂಗಲ್​ನಲ್ಲಿ ಕನ್ನಡಕ್ಕೆ ಅವಮಾನವಾಗುವಂಥ ಘಟನೆ ನಡೆದಿತ್ತು. ಕನ್ನಡಿಗರು ಲಕ್ಷಾಂತರ ಸಂಖ್ಯೆಯಲ್ಲಿ ರಿಪೋರ್ಟ್ ಮಾಡಿದ ಹಿನ್ನೆಲೆ ತನ್ನ ತಪ್ಪನ್ನ ತಿದ್ದಿಕೊಂಡಿತ್ತು. ಇದಾದ ನಂತರ ಅಮೆಜಾನ್ ಆ್ಯಪ್​ನಲ್ಲಿ ಒಳ ಉಡುಪುಗಳ ಮೇಲೆ ಕನ್ನಡ ಲಾಂಛನವನ್ನ ಚಿತ್ರಿಸಿ ಮಾರಾಟಕ್ಕೆ ಇಡಲಾಗಿತ್ತು. ಅಮೆಜಾನ್ ಕೂಡ ನಂತರ ತನ್ನ ತಪ್ಪನ್ನ ತಿದ್ದಿಕೊಂಡಿತ್ತು. ಈ ಬಾರಿ ಗೂಗಲ್​ನಲ್ಲಿ ಮತ್ತೊಂದು ಅಚಾತುರ್ಯ ನಡೆದಿದೆ. ನೀವು ಗೂಗಲ್​ ಸರ್ಚ್​ನಲ್ಲಿ ತಮಿಳಿನ ವಿಕ್ರಮ್ ವೇದ …

WTC ಫೈನಲ್​ಗೆ ಮತ್ತೆ ಮಳೆರಾಯನ ಕಾಟ.. 4ನೇ ದಿನದ ಮೊದಲ ಸೆಷನ್ ಮಳೆಗೆ ಆಹುತಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ 4ನೇ ದಿನದಾಟದ ಮೊದಲ ಸೆಷನ್ ಮಳೆಗೆ ಆಹುತಿಯಾಗಿದೆ. ಬೆಳಗ್ಗೆಯಿಂದ ಸೌತ್​​ಹ್ಯಾಂಪ್ಟನ್​​ನಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, 4ನೇ ದಿನದಾಟದ ಬಹುಪಾಲು ಸಮಯ ಮಳೆಗೆ ತುತ್ತಾಗ ಅನುಮಾನ ವ್ಯಕ್ತವಾಗಿದೆ. ಆರಂಭಿಕ ದಿನದಿಂದಲೂ ಐತಿಹಾಸಿಕ ಪಂದ್ಯಕ್ಕೆ ಮಳೆ ಭಾರೀ ಹಿನ್ನಡೆಯುಂಟು ಮಾಡುತ್ತಿದ್ದು, ಮೊದಲ ದಿನ ಸಂಪೂರ್ಣ ವ್ಯರ್ಥವಾದರೆ, 2ನೇ ದಿನ ಮಂದಬೆಳಕಿನ ಕಾರಣ ಬೇಗ ಮುಕ್ತಾಯವಾಯ್ತು. 3ನೇ ದಿನದಾಟವೂ ಮಳೆಯ ಕಾರಣ ಅರ್ಧಗಂಟೆ ತಡವಾಗಿ ಆರಂಭವಾಗಿತ್ತು. ಆದರೆ ಅಂತಿಮ ಹಂತದಲ್ಲಿ ಮಂದಬೆಳಕಿನ ಕಾರಣ …

ಶಾಸಕ ಜಮೀರ್​​​ಗೆ AICC ವಾರ್ನಿಂಗ್

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದ ಜಮೀರ್ ಅಹಮ್ಮದ್ ಖಾನ್ ಗೆ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಬೆನ್ನಲ್ಲೇ ಶಾಸಕ ಜಮೀರ್ ಅಹಮ್ಮದ್ ಖಾನ್ ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಕರೆ ಮಾಡಿದ್ದಾರೆ. ಇಂದು ಬೆಳಗ್ಗೆ ಕರೆ ಮಾಡಿ ಮಾತನಾಡಿದ ಸುರ್ಜೆವಾಲಾ, …

ಬಣ ರಾಜಕೀಯ ಬಂದ್ ಮಾಡಿ.. ಮುಂದಿನ ಸಿಎಂ ಬಗ್ಗೆ ಮಾತನಾಡಬೇಡಿ..’ಕೈ’ ಹೈ ಕಮಾಂಡ್ ಕಟ್ಟಪ್ಪಣೆ

ರಾಜ್ಯ ಕಾಂಗ್ರೆಸ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಣಗಳ ಗದ್ದಲ ದೊಡ್ಡದಾಗುತ್ತಿದೆ. ಒಂದು ಬಣ ಪದೇ ಪದೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾ ಇದ್ದರೆ, ಡಿ.ಕೆ ಶಿವಕುಮಾರ್ ಮಾತ್ರ ನಮ್ಮದು ಸಾಮೂಹಿಕ ನಾಯಕತ್ವ.. ಅಂತಾ ಡ್ಯಾಮೇಜ್ ಕಂಟ್ರೋಲ್​ ಮಾಡ್ತಿದ್ದಾರೆ. ಹೇಳಿಕೆಗಳನ್ನ ಕೊಡುವ ಮೊದಲು ನಾಯಕರು ಹದ್ದು ಬಸ್ತಿನಲ್ಲಿರಬೇಕು ಅಂತ ಡಿ.ಕೆ ಶಿವಕುಮಾರ್ ಹೇಳಿದ ಬಳಿಕವೂ, ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯರನ್ನ ಮಾಜಿ ಸಿಎಂ ಅನ್ನಲು ಮನಸ್ಸು …

ಯೋಗ ದಿನದಂದು ಸಾರಾ ಅಲಿ ಖಾನ್ ಪರ್ಫೆಕ್ಟ್​ ಯೋಗ 

ನವದೆಹಲಿ: ‘ಉತ್ತಮ ಆರೋಗ್ಯಕ್ಕಾಗಿ ಯೋಗ’ ಅನ್ನೋ ಥೀಮ್​​ನಡಿ ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನ ಆಚರಿಸಲಾಗ್ತಿದೆ. ಸ್ಟಾರ್​ ನಟ, ನಟಿಯರು ಸೇರಿದಂತೆ ಎಲ್ಲೆಡೆ ಯೋಗದಿನವನ್ನ ಆಚರಿಸಲಾಗ್ತಿದೆ. ಅದ್ರಂತೆ ಬಾಲಿವುಡ್​ ಬೆಡಗಿ ಸಾರಾ ಅಲಿ ಖಾನ್ ಕೂಡ ಯೋಗ ಡೇ ಆಚರಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಯೋಗ ಮಾಡುತ್ತಿರುವ ಫೋಟೋವನ್ನ ಅಪ್​ಲೋಡ್ ಮಾಡಿದ್ದಾರೆ. ಪ್ರಶಾಂತವಾದ ವಾತಾವರಣದಲ್ಲಿ ನಿಂತು ಪ್ರಣಾಮಾಸನ ಮಾಡ್ತಿರುವ ಫೋಟೋ ಇದಾಗಿದೆ. ಅಲ್ಲದೇ ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳನ್ನ ಕೋರಿದ್ದಾರೆ. ಸಾರಾ ಅಲಿ ಖಾನ್, ಅವರು …

ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಜಾಗ್ವರ್ ನಿಖಿಲ್ ಕುಮಾರ್ ಸ್ವಾಮಿ ಪ್ರೀತಿಯ ಪತ್ನಿ ರೇವತಿಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಿಖಿಲ್ ಕುಮಾರ್ ಸ್ವಾಮಿಯವರು ಪತ್ನಿ ರೇವತಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರು ತಮ್ಮ ಪತ್ನಿ ರೇವತಿ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಿಖಿಲ್ ತಮ್ಮ ಮಡದಿ ಜೊತೆ ತುಗುಯ್ಯಲೆ ಮೇಲೆ ಒಟ್ಟಿಗೆ ಕುಳಿತುಕೊಂಡಿದ್ದು, ರೇವತಿಯವರು ತಮ್ಮ ಎರಡು ಕೈಗಳಿಗೆ ಮೆಹಂದಿ ಹಾಕಿಕೊಂಡು ಕುಳಿತುಕೊಂಡಿದ್ದಾರೆ. ಹ್ಯಾಪಿ ಹ್ಯಾಪಿ ಬರ್ತ್‍ಡೇ ಟೂ ಯು …