
ರಾಯಪುರ: ದೇಶಾದಾದ್ಯಂತ ಕೊರೊನಾ ಎರಡನೇ ಅಲೆಯ ತೀವ್ರತೆ ಜೋರಾಗಿದ್ದು, ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಛತ್ತೀಸ್ಗಡದ ರಾಯಪುರ ನಗರದಲ್ಲಿರುವ ಬಿ.ಆರ್ ಅಂಭೇಡ್ಕರ್ ಆಸ್ಪತ್ರೆಯ ಶವಾಗಾರದಲ್ಲಿ ಕಂಡು ಬಂದ ದೃಶ್ಯಗಳು ತೀವ್ರತೆಯ ಭೀಕರತೆಯನ್ನು ತೋರಿಸುತ್ತಿದೆ.
ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುವ ಮೃತದೇಹಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಛತ್ತೀಸ್ಗಡದ ಪ್ರಮುಖ ಆರು ನಗರಗಳಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಎದುರಾಗಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.
ಛತ್ತೀಸ್ಗಡದ ಸರ್ಕಾರದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಅನ್ವಯ, ಕಳೆದ 12 ದಿನಗಳಲ್ಲಿ ಸೋಂಕಿನಿಂದ ಸುಮಾರು 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಯಪುರ ಒಂದರಲ್ಲೇ ಅಧಿಕೃತ ಮಾಹಿತಿಯ ಅನ್ವಯ ಕಳೆದ 48 ಗಂಟೆಯಲ್ಲಿ 79 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಸಾವನ್ನಪುತ್ತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಸೋಂಕಿನಿಂದ ಸಾವನ್ನಪ್ಪುತ್ತಿರುವವರನ್ನು ಮೈದಾನದ ಪ್ರದೇಶದಲ್ಲಿ ಅಂತ್ಯಸಂಸ್ಕಾರವನ್ನು ನಡೆಸುತ್ತಿದ್ದಾರೆ. ಬಿಆರ್ ಅಂಭೇಡ್ಕರ್ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ತಿಳಿಸುವಂತೆ, ಕೊರೊನಾದಿಂದ ಸಾವನ್ನಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಶವಾಗಾರದಲ್ಲಿ ಸ್ಥಳಾವಾಕಾಶವಿಲ್ಲದ ಕಾರಣ ಆವರಣದಲ್ಲೇ ಮೃತದೇಹಗಳಟ್ಟಿದ್ದೇವೆ. ಸದ್ಯ ಶವಾಗಾರದ ಎದುರು 20ಕ್ಕೂ ಹೆಚ್ಚು ಮೃತದೇಹಗಳನ್ನು ಇಟ್ಟಿರುವ ವಿಡಿಯೋ ವೈರಲ್ ಆಗಿದೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಅಧಿಕಾರಿಗಳು, ಶವಾಗಾರದಲ್ಲಿ ಹೆಚ್ಚಿನ ಫ್ರೀಝರ್ಗಳನ್ನು ಅಳವಡಿಸುಲು ಸಾಧ್ಯವಿಲ್ಲ. ರಾಯಪುರದ ಪಾಲಿಗೆ ಅಧಿಕಾರಿಗಳು ಮೃತದೇಹಗಳ ಅಂತ್ಯಸಂಸ್ಕಾರ ನಡೆಸಲು ಏಳಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿದ್ದಾರೆ ಎಂದು ತಿಳಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಶಿವಕುಮಾರ್ ದೇಹರಿಯಾ ಪ್ರತಿಕ್ರಿಯೆ ನೀಡಿ, ರಾಯಪುರದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲು ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.
The post ತುಂಬಿ ತುಳುಕ್ಕುತ್ತಿರುವ ಶವಾಗಾರಗಳು- ನೆಲದಲ್ಲೇ ಮೃತದೇಹಗಳಿಟ್ಟ ಸಿಬ್ಬಂದಿ appeared first on News First Kannada.
Source: News First Kannada
Read More