Tajinder Bagga Arrest ಬಂಧನದಿಂದ ರಕ್ಷಣೆ ನೀಡಿದ್ದಕ್ಕಾಗಿ ಪಂಜಾಬ್ ಹೈಕೋರ್ಟ್‌ಗೆ ಧನ್ಯವಾದ ಅರ್ಪಿಸಿದ ತಜೀಂದರ್ ಬಗ್ಗಾ | Tajinder Pal Singh Bagga Punjab and Haryana High Court directed No coercive steps till May 10


Tajinder Bagga Arrest ಬಂಧನದಿಂದ ರಕ್ಷಣೆ ನೀಡಿದ್ದಕ್ಕಾಗಿ ಪಂಜಾಬ್ ಹೈಕೋರ್ಟ್‌ಗೆ ಧನ್ಯವಾದ ಅರ್ಪಿಸಿದ ತಜೀಂದರ್ ಬಗ್ಗಾ

ತಜೀಂದರ್‌ ಬಗ್ಗಾ

ತಜೀಂದರ್ ಸಿಂಗ್ ಬಗ್ಗಾ ಅವರು ಮೊಹಾಲಿ ನ್ಯಾಯಾಲಯವು ಹೊರಡಿಸಿದ ಬಂಧನ ವಾರಂಟ್‌ನಲ್ಲಿ ತನಗೆ ಒದಗಿಸಿದ ತಾತ್ಕಾಲಿಕ  ರಿಲೀಫ್​​ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

ದೆಹಲಿ: ಮೊಹಾಲಿ ನ್ಯಾಯಾಲಯವು ಹಿಂದಿನ ದಿನ ಹೊರಡಿಸಿದ ಬಂಧನ ವಾರಂಟ್‌ಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿರುವ ತಜೀಂದರ್ ಪಾಲ್ ಸಿಂಗ್ ಬಗ್ಗಾ (Tajinder Pal Singh Bagga)ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್(Punjab and Haryana High Court) ನಿರ್ದೇಶನ ನೀಡಿದೆ. ಕಳೆದ ತಿಂಗಳು ಪಂಜಾಬ್ ಪೊಲೀಸರು ಅವರ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಾಲಿ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದ ಕೆಲವೇ ಗಂಟೆಗಳ ನಂತರ, ಬಗ್ಗಾ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರು ಮಧ್ಯರಾತ್ರಿಯ ಮೊದಲು ಅವರ ನಿವಾಸದಲ್ಲಿ ತುರ್ತು ವಿಚಾರಣೆಯಲ್ಲಿ ಬಗ್ಗಾ ಅವರ ಅರ್ಜಿಯನ್ನು ಕೈಗೆತ್ತಿಕೊಂಡರು. ಮೇ 10 ರವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಬಗ್ಗಾ ಅವರ ವಕೀಲ ಚೇತನ್ ಮಿತ್ತಲ್ ಹೈಕೋರ್ಟ್ ಆದೇಶದ ಕುರಿತು ಹೇಳಿದ್ದಾರೆ. ತಜೀಂದರ್ ಸಿಂಗ್ ಬಗ್ಗಾ ಅವರು ಮೊಹಾಲಿ ನ್ಯಾಯಾಲಯವು ಹೊರಡಿಸಿದ ಬಂಧನ ವಾರಂಟ್‌ನಲ್ಲಿ ತನಗೆ ಒದಗಿಸಿದ ತಾತ್ಕಾಲಿಕ  ರಿಲೀಫ್​​ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ‘ಅರವಿಂದ ಕೇಜ್ರಿವಾಲ್​​ಗೆ (Arvind Kejriwal)ತುಂಬಾ ಭಯವಿತ್ತು ಅವರಿಗೆ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ದೆಹಲಿ ಸಿಎಂ ನನ್ನ ವಿರುದ್ಧ ಇಂತಹ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಬಗ್ಗಾ ಹೇಳಿದ್ದಾರೆ. ಏತನ್ಮಧ್ಯೆ, ಘಟನೆಯ ನಂತರ ಆಮ್ ಆದ್ಮಿ ಪಕ್ಷವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಇಡೀ ಬಿಜೆಪಿ ಒಬ್ಬ ಗೂಂಡಾ (ತಜೀಂದರ್ ಸಿಂಗ್ ಬಗ್ಗಾ) ಅವರನ್ನು ಕಾಪಾಡಲು ಪ್ರಯತ್ನಿಸುತ್ತಿದೆ. ಖಲಿಸ್ತಾನಿಗಳು ಹಿಮಾಚಲ ಪ್ರದೇಶದ ವಿಧಾನಸಭೆಯ ಆವರಣದಲ್ಲಿ ಅವರ ಧ್ವಜಗಳನ್ನು ಕಟ್ಟಿ ಹೊರಟು ಹೋದರು. ವಿಧಾನಸಭೆಯನ್ನು ಉಳಿಸಲು ಸಾಧ್ಯವಾಗದ ಸರ್ಕಾರವು ಜನರನ್ನು ಹೇಗೆ ಉಳಿಸುತ್ತದೆ? ಇದು ಹಿಮಾಚಲ ಪ್ರದೇಶಕ್ಕೆ ಗಂಭೀರ ವಿಷಯ. ಇದು ದೇಶದ ಭದ್ರತೆಯ ವಿಷಯವಾಗಿದೆ. ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೆಹಲಿಯ ಸಚಿವ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಬಗ್ಗಾ ಪ್ರಕರಣದ ಈವರೆಗಿನ ಬೆಳವಣಿಗೆಗಳು

ಮೇ 10 ರಂದು, ಹೈಕೋರ್ಟ್ ಬಗ್ಗಾ ಅವರ ಅರ್ಜಿಯನ್ನು ಕೈಗೆತ್ತಿಕೊಳ್ಳಲಿದ್ದು, ಕಳೆದ ತಿಂಗಳು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿದೆ. ಬಂಧನ ವಾರಂಟ್‌ಗೆ ನ್ಯಾಯಾಲಯ ತಡೆ ನೀಡಿದೆ ಎಂದು ಮಿತ್ತಲ್ ಹೇಳಿದ್ದಾರೆ. ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆದಿದೆ. ಹಿಂದಿನ ದಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ರಾವ್ತೇಶ್ ಇಂದರ್‌ಜಿತ್ ಸಿಂಗ್ ಅವರ ನ್ಯಾಯಾಲಯವು ಕಳೆದ ತಿಂಗಳು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗ್ಗಾ ವಿರುದ್ಧ ಬಂಧನ ವಾರಂಟ್ ಹೊರಡಿಸಿತು.

ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರಿಗೆ ಮೊಹಾಲಿ ಹೈಕೋರ್ಟ್ ಯಾವುದೇ ರಿಲೀಫ್  ನೀಡಿಲ್ಲ. ಬಂಧನದ ವಾರೆಂಟ್‌ಗೆ ನ್ಯಾಯಾಲಯ ತಡೆ ನೀಡಿಲ್ಲ. ಮೇ 10 ರಂದು ಬೆಳಿಗ್ಗೆ 11 ಗಂಟೆಯವರೆಗೆ ಬಗ್ಗಾ ಅವರನ್ನು ಬಂಧಿಸುವುದಿಲ್ಲ ಎಂದು ಪಂಜಾಬ್ ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ತಜೀಂದರ್ ಸಿಂಗ್ ಬಗ್ಗಾ ಅವರ ಅಪ್ಪ ಪ್ರೀತ್‌ಪಾಲ್ ಸಿಂಗ್ ಬಗ್ಗಾ ಅವರು, ‘ನ್ಯಾಯಾಲಯ ವಾರಂಟ್‌ ಕುಟುಂಬವನ್ನು ಸಂಪರ್ಕಿಸದಂತೆ ಕೇಳಿರುವುದರಿಂದ ಬಗ್ಗಾ ಮನೆಯಲ್ಲಿಲ್ಲ ಎಂದಿದ್ದಾರೆ’. ತಾನು ಬಿಜೆಪಿಯ ಹಿರಿಯ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.

“ತಜೀಂದರ್‌ಗೆ ಪಂಜಾಬ್ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಪಂಜಾಬ್ ಸರ್ಕಾರ ಅವರನ್ನು ಅವಕಾಶ ಸಿಕ್ಕಿದರೆ ಎಳೆಯಲು ಬಯಸುತ್ತದೆ. ಅವರು ಎಫ್‌ಐಆರ್‌ಗಳನ್ನು ದಾಖಲಿಸುತ್ತಲೇ ಇರುತ್ತಾರೆ ಆದರೆ ನಾವು ನಿಲ್ಲಿಸುವುದಿಲ್ಲ, ಈ ಹೋರಾಟ ದೀರ್ಘಕಾಲ ಇರುತ್ತದೆ ಎಂದು ಪ್ರೀತ್‌ಪಾಲ್ ಸಿಂಗ್ ಬಗ್ಗಾ ಹೇಳಿದ್ದಾರೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published. Required fields are marked *