Tamil Nadu: ತಮಿಳುನಾಡಿನ ಸಚಿವ ವಿ ಸೆಂಥಿಲ್ ಬಾಲಾಜಿ ಮನೆಯ ಮೇಲೆ ಐಟಿ ದಾಳಿ | IT attack on Tamil Nadu Minister V Senthil Balaji’s house National News in kannada


ತಮಿಳುನಾಡಿನ ಸಚಿವ ವಿ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ಸಂಘಟಿತ ಶೋಧಗಳನ್ನು ಪ್ರಾರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚೆನ್ನೈ: ತಮಿಳುನಾಡಿನ ಸಚಿವ ವಿ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ಸಂಘಟಿತ ಶೋಧಗಳನ್ನು ಪ್ರಾರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕರೂರ್ ಮತ್ತು ಕೊಯಮತ್ತೂರು ಸೇರಿದಂತೆ ನಗರಗಳಲ್ಲಿ ಸಚಿವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.

ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವವರಲ್ಲಿ ಸಚಿವರ ನಿಕಟ ಸಂಬಂಧಿಗಳು ಮತ್ತು ಕೆಲವು ಗುತ್ತಿಗೆದಾರರು ಇದ್ದಾರೆ ಎಂದು ವರದಿಯಾಗಿದೆ. ಕರೂರ್‌ನ ಹಿರಿಯ ಡಿಎಂಕೆ ನಾಯಕರಾದ ಬಾಲಾಜಿ ಅವರು ಅಬಕಾರಿ ಖಾತೆಯನ್ನು ಸಹ ಹೊಂದಿದ್ದಾರೆ.

ಹೆಚ್ಚಿನ ಮಾಹಿತಿ ನೀಡಿಲಾಗುವುದು

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *