TATA ಗ್ರೂಪ್ ಪಾಲಾದ ‘ಏರ್ ಇಂಡಿಯಾ’.. ಅಧಿಕೃತ ಘೋಷಣೆ

ನವದೆಹಲಿ: ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಏರ್​ಇಂಡಿಯಾ ಖಾಸಗಿ ಮಾರಾಟ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಟಾಟ ಗ್ರೂಪ್ ಏರ್ ಇಂಡಿಯಾ ಸಂಸ್ಥೆಯನ್ನು ₹18,718 ಕೋಟಿಗೆ ಹರಾಜಿನಲ್ಲಿ ಖರೀದಿಸಿದೆ. ಈ ಮೂಲಕ ತನ್ನಿಂದ ಕೈಬಿಟ್ಟುಹೋಗಿದ್ದ ಏರ್​ ಇಂಡಿಯಾ 67 ವರ್ಷಗಳ ಬಳಿಕ ಇದೀಗ ಮರಳಿ ಟಾಟಾ ಗ್ರೂಪ್ ಪಾಲಾದಂತಾಗಿದೆ.

ಇನ್ನು ಈ ಹರಾಜಿನಲ್ಲಿ ಏರ್ ಇಂಡಿಯಾದ ಭೂಮಿ ಮತ್ತು ಕಟ್ಟಡಗಳು ಒಳಗೊಂಡಿರುವುದಿಲ್ಲ. ಇವುಗಳನ್ನು ಸರ್ಕಾರಕ್ಕೆ ವರ್ಗಾಯಿಸಲಾಗುವುದು ಎಂಬ ಮಾಹಿತಿ ಇದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಹೊರಡಿಸಿದೆ. ಕೇಂದ್ರ ಸರ್ಕಾರ ನಷ್ಟದಲ್ಲಿ ನಡೆಯುತ್ತಿದ್ದ ಏರ್​ ಇಂಡಿಯಾಗೆ 2009 ರಿಂದ 1,10,276 ಕೋಟಿ ರೂಗಳಷ್ಟು ನೆರವನ್ನು ನೀಡಿತ್ತು. 2021 ರ ಡಿಸೆಂಬರ್​ಗೆ ಸರ್ಕಾರ ಮತ್ತು ಏರ್ ಇಂಡಿಯಾ ನಡುವಿನ ವ್ಯವಹಾರ ಕೊನೆಗೊಳ್ಳಲಿದೆ.

News First Live Kannada

Leave a comment

Your email address will not be published. Required fields are marked *